2 ಮಿಲಿಯನ್​ ಫಾಲೋವರ್ಸ್​ ಪಡೆದ ಉರ್ಫಿ ಜಾವೆದ್​​ ಹೊಸ ಅವತಾರ ನೋಡಿ

Published on
ಮುಂಬೈ: ಟಿವಿ ಸೆಲೆಬ್ರಿಟಿ, ಬಿಗ್​ಬಾಸ್ ಒಟಿಟಿ ಸ್ಪರ್ಧಿ ನಟಿ ಉರ್ಫಿ ಜಾವೇದ್ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದಾರೆ. ಇದೀಗ, ನಟಿ ಇನ್​ಸ್ಟಾಗ್ರಾಂನಲ್ಲಿ 2 ಮಿಲಿಯನ್ ಫಾಲೋವರ್ಸ್ ಪಡೆದಿದ್ದಾರೆ. ಈ ಖುಷಿಯಲ್ಲಿ, ಇನ್​ಸ್ಟಾಗ್ರಾಂನಲ್ಲಿ ನಟಿ ಉರ್ಫಿ ತನ್ನ ಅಭಿಮಾನಿಗಳಿಗೆ ತಮ್ಮ ಸೂಪರ್ ಹಾಟ್ ಮತ್ತು ಮಾದಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹೌದು, ಉರ್ಫಿ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸುತ್ತಾ, ಹಳದಿ ಬ್ರಾ ತೊಟ್ಟು ಒಂದಿಷ್ಟು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
ಸೋಶಿಯಲ್ ಮೀಡಿತಾದಲ್ಲಿ ತಮಗೆ ಇಷ್ಟು ಪ್ರೀತಿ ತೋರಿಸಿದಕ್ಕೆ ತನ್ನ ಅಭಿಮಾನಿಗಳಿಗೆ, ''2 ಮಿಲಿಯನ್ ಅನುಯಾಯಿಗಳಿಗೆ ಧನ್ಯವಾದಗಳು !! ನಿಮನ್ನು ತುಂಬಾ ಪ್ರೀತಿಸುವೆ !! #ಧನ್ಯವಾದಗಳು #2 ಮಿಲಿಯನ್", ಎಂದು ತಮ್ಮ ಪೋಸ್ಟ್​​ಗೆ ಕ್ಯಾಪ್ಷನ್ ಕೊಟ್ಟಿದ್ದಾರೆ. ಬ್ರಾನಲ್ಲಿ ಫೋಟೋಗಳನ್ನು ಹಂಚಿಕೊಂಡು ಎಲ್ಲರ ಹುಬ್ಬೇರಿಸಿದ್ದಾರೆ ಉರ್ಫಿ. ಅವರು ಇನ್​ಸ್ಟಾಗ್ರಾಂನಲ್ಲಿ ಫೋಟೋಗಳನ್ನು ಹಂಚಿಕೊಂಡ ತಕ್ಷಣ, ನಟಿಯ ಅಭಿಮಾನಿಗಳು ಲೈಕ್ಸ್ ಮತ್ತು ಕಾಮೆಂಟ್​​ಗಳ ಸುರಿಮಳೆಯನ್ನೆ ನಟಿಯ ಮೇಲೆ ಸುರಿಸಿದ್ದಾರೆ. ಕೆಲವರು ನಟಿಯನ್ನು 2 ಮಿಲಿಯನ್ ಅನುಯಾಯಿಗಳನ್ನು ಪಡೆದ ಕಾರಣ ಅಭಿನಂದಿಸಿದರೆ, ಇತರರು ನಟಿಯ ಉಡುಪಿನ ಆಯ್ಕೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 
ಬೋಲ್ಡ್ ಮತ್ತು ಕಟ್-ಔಟ್ ಡ್ರೆಸ್‌ಗಳನ್ನು ಧರಿಸುವುದರಿಂದ ನಟಿ ಯಾವಾಗಲು ಸುದ್ದಿಯಲ್ಲಿರುತ್ತಾರೆ. ಉರ್ಫಿ ಜಾವೇದ್ ಅವರ ವಿವಿಧ ಮೈತೋರಿಸುವ ಔಟ್​ಫಿಟ್​ಗಳು ನೆಟ್ಟಿಗರಲ್ಲಿ ತಲ್ಲಣ ಮೂಡಿಸಿದ್ದು, ಇದಕ್ಕಾಗಿ ಅವರು ಟ್ರೋಲ್ ಆಗುವುದು ಸಾಮಾನ್ಯ ವಿಷಯವಾಗಿ ಬಿಟ್ಟಿದೆ. ಆದರೆ, ಇದಕ್ಕೆ ತಲೆ ಕೆಡಿಸಿಕೊಳ್ಳದ ಉರ್ಫಿ ತಮ್ಮನ್ನು ಟ್ರೋಲ್​ ಮಾಡುವವರಿಗೆ ಇತ್ತೀಚೆಗೆ ದಿಟ್ಟ ಉತ್ತರ ಸಹ ಕೊಟ್ಟಿದ್ದಾರೆ. ಕಸ್ಟಮೈಸ್ಡ್​ ಜ್ಯಾಕೆಟ್​ ಮೇಲೆ ''ಮೈಂಡ್​ ಯುವರ್​ ಓನ್​ ಬಿಸಿನೆಸ್​'' ಅಂದರೆ ''ನಿಮ್ಮ ಕೆಲಸ ನೀವ್​ ನೋಡ್ಕೊಳ್ಳಿ'' ಎಂದು ಬರೆದಿರುವುದನ್ನು ಉರ್ಫಿ ಪ್ರದರ್ಶಿಸಿ, ಟ್ರೋಲಿಗರಿಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net