

ಮುಂಬೈ: ಅರ್ಧಂಬರ್ಧ ಡ್ರೆಸ್ಗಳಿಂದಲೇ ಇತ್ತೀಚಿನ ದಿನಗಳಲ್ಲಿ ಭಾರಿ ಸುದ್ದಿ ಮಾಡುತ್ತಿರುವ ನಟಿಯೆಂದರೆ ಉರ್ಫಿ ಜಾವೇದ್. ಈಕೆಯ ಹೆಸರು ಹೇಳಿದರೆ ಕಣ್ಮುಂದೆ ಬರುವುದು ಅರೆಬರೆ ಡ್ರೆಸ್ಗಳೇ. ಇದನ್ನು ಆಕೆ ಕೂಡ ತುಂಬಾ ಖುಷಿಯಿಂದಲೇ ಹೇಳಿಕೊಳ್ಳುತ್ತಾಳೆ. ತಾನು ಡ್ರೆಸ್ ಹಾಕದಿದ್ದರೆ ಅಭಿಮಾನಿಗಳಿಗೆ ತುಂಬಾ ಖುಷಿ, ಅವರನ್ನು ಖುಷಿಪಡಿಸುವುದೇ ನನ್ನ ಉದ್ದೇಶ ಎಂದೂ ಸಂದರ್ಶನವೊಂದರಲ್ಲಿ ಈಕೆ ಹೇಳಿಕೊಂಡಿದ್ದಳು. ಇದಕ್ಕಾಗಿಯೇ ಈಕೆಯನ್ನು ಫ್ಯಾಷನ್ ಲೋಕದ ದುರಂತ ಎಂದೇ ಟೀಕೆ ಮಾಡಲಾಗುತ್ತಿದೆ.
ನಟಿ ಉರ್ಫಿ ಜಾವೇದ್ ತುಂಬಾ ಬೋಲ್ಡ್ ಆ್ಯಂಡ್ ಬ್ಯೂಟಿಫುಲ್ ಆಗಿದ್ದು, ಆಕೆಯ ಸೌಂದರ್ಯಕ್ಕೆ ಅನೇಕರು ಮಾರು ಹೋಗಿದ್ದಾರೆ. ಆದರೆ, ಬಹುತೇಕರು ಆಕೆಯ ಮೇಕಪ್ಯುಕ್ತ ಫೋಟೋವನ್ನು ನೋಡಿರುವವರೇ ಹೆಚ್ಚು. ಆದರೆ, ಮೇಕಪ್ ಇಲ್ಲದ ಆಕೆಯ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಆಕೆಯ ಸೌಂದರ್ಯಕ್ಕೆ ಮೆರಗು ನೀಡುವುದೇ ಮೇಕಪ್ ಎಂಬ ಸತ್ಯವನ್ನು ನೆಟ್ಟಿಗರು ಕಂಡುಕೊಂಡಿದ್ದಾರೆ.
ವೈರಲ್ ಆಗಿರುವ ಫೋಟೋದಲ್ಲಿ ಉರ್ಫಿ ಆಸ್ಪತ್ರೆಯಲ್ಲಿ ದಾಖಲಾಗಿರುವುದನ್ನು ತೋರುತ್ತದೆ. ಆದರೆ, ಆಕೆ ಆಸ್ಪತ್ರೆಯಲ್ಲಿರಲು ಕಾರಣ ತಿಳಿದುಬಂದಿಲ್ಲ. ತನ್ನ ವಿಲಕ್ಷಣವಾದ ಫ್ಯಾಶನ್ ಸೆನ್ಸ್ನಿಂದಾಗಿ ಆಗಾಗ ಸುದ್ದಿಯಾಗುವ ಉರ್ಫಿ, ದುಃಖದಿಂದ ಹಾಸಿಗೆಯ ಮೇಲೆ ಕುಳಿತಿರುವುದ ಫೋಟೋದಲ್ಲಿ ಕಾಣಬಹುದು
ಡಾಲಿ ಹೆಸರಿನ ಟ್ವಿಟ್ಟರ್ ಬಳಕೆದಾರರು ಮೇಕಪ್ ಇಲ್ಲದ ಉರ್ಫಿಯ ಫೋಟೋವನ್ನು ಹಂಚಿಕೊಂಡಿದ್ದು, "ಮೇಕಪ್ ನಿಜವಾಗಿಯೂ ಅದ್ಭುತಗಳನ್ನು ಸೃಷ್ಟಿಸಬಲ್ಲದು... ಪೆಹಚಾನ್ ಕಾನ್!" ಎಂದು ಶೀರ್ಷಿಕೆ ನೀಡಿದ್ದಾರೆ. ಇದೀಗ ಉರ್ಫಿ ಫೋಟೋ ವೈರಲ್ ಆಗುತ್ತಿದ್ದು, ಟ್ರೋಲ್ಗೆ ಗುರಿಯಾಗಿದೆ.
ಸಾಕಷ್ಟು ಕಾಮೆಂಟ್ಗಳು ಹರಿದುಬಂದಿದ್ದು, "ಉರ್ಫಿ ಅವರು ವಿಚಿತ್ರವಾಗಿ ಕಾಣುತ್ತಿದ್ದಾರೆ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಸಾಮಾನ್ಯ ಬಟ್ಟೆಯಲ್ಲಿ ಅವಳನ್ನು ಗುರುತಿಸುವುದು ತುಂಬಾ ಕಠಿಣವಾಗಿದೆ ಎಂದು ಮತ್ತೊಬ್ಬ ನೆಟ್ಟಿಗ ವ್ಯಂಗ್ಯವಾಡಿದ್ದಾರೆ.
ಇನ್ನು ಬಿಗ್ ಬಾಸ್ ಒಟಿಟಿ ಷೋನಲ್ಲಿ ಸ್ಪರ್ಧಿಸಿ ಬಂದ ಬಳಿಕ ಭಾರಿ ಪ್ರಸಿದ್ಧಿ ಪಡೆದಿರುವ ಈ ಉರ್ಫಿ ಜಾವೇದ್, ಯಾವುದಕ್ಕೂ ಕೇರ್ ಮಾಡದೇ ತನ್ನ ಮೈಮಾಟ ಪ್ರದರ್ಶನ ಮಾಡುವಲ್ಲಿ ಎತ್ತಿದ ಕೈ. ಪ್ರತಿದಿನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಪಡ್ಡೆ ಹುಡುಗರ ಮೈ ಬಿಸಿಯೇರಿಸುವಂತಹ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಅವರ ಹಾಟ್ ಅವತಾರಕ್ಕೆ ಫಿದಾ ಆಗಿರುವ ಅಭಿಮಾನಿಗಳು ಪ್ರತಿದಿನ ಅವರ ಫೋಟೋ ಅಥವಾ ವಿಡಿಯೋಗಳಿಗೆ ಎದುರು ನೋಡುತ್ತಲೇ ಇರುತ್ತಾರೆ. (ಏಜೆನ್ಸೀಸ್)