ಭಾರತೀಯರ ಮುಂದೆ ತಪ್ಪೊಪ್ಪಿಕೊಂಡ ಸನ್ನಿ ಲಿಯೋನ್! ಕಹಿ ಘಟನೆ ಬಿಚ್ಚಿಟ್ಟ ಮಾಜಿ ನೀಲಿ ತಾರೆ​

Sunny
Published on

ನವದೆಹಲಿ: ಭಾರತಕ್ಕೆ ಬರುವುದನ್ನು ನಾನು ಎಂದಿಗೂ ಪರಿಗಣಿಸಿರಲಿಲ್ಲ ಎಂದು ಮಾಜಿ ನೀಲಿ ತಾರೆ ಹಾಗೂ ಬಾಲಿವುಡ್​ ನಟಿ ಸನ್ನಿ ಲಿಯೋನ್​ ತಪ್ಪೊಪ್ಪಿಕೊಂಡಿದ್ದಾರೆ. 19ನೇ ವಯಸ್ಸಿನಲ್ಲಿ ಭಾರತೀಯ ನಾಗರಿಕರೊಬ್ಬರಿಂದ ಬೆದರಿಕೆ ಮತ್ತು ದ್ವೇಷದ ಸಂದೇಶಗಳನ್ನು ಸ್ವೀಕರಿಸಿದ್ದರಿಂದ ಈ ನಿರ್ಧಾರ ಮಾಡಿದ್ದೆ ಎಂದು ಸ್ಪಷ್ಟನೆ ಸಹ ನೀಡಿದ್ದಾರೆ.

ಗಲಾಟ ಪ್ಲಸ್​ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಸನ್ನಿ ಲಿಯೋನ್​ ಅವರು ಭಾರತಕ್ಕೆ ಪ್ರವೇಶಿಸುವ ಮುನ್ನವೇ ಮೊದಲ ಬಾರಿಗೆ ಭಾರತೀಯ ಮೂಲದ ವಿರೋಧಿಗಳನ್ನು ಎದುರಿಸಿದ್ದನ್ನು ಚರ್ಚಿಸಿದ್ದಾರೆ. ಭಾರತೀಯ ಟ್ರೋಲ್‌ಗಳಿಂದ ತಾನು ನಾನು ತುಂಬಾ ಪ್ರಭಾವಿತಳಾಗಿದ್ದೆ ಮತ್ತು ಭಾರತೀಯರು ನನಗೆ ವಿರೋಧಿಗಳಾಗುತ್ತಾರೆ ಅಂತಾ ಬಿಗ್​ಬಾಸ್‌ನಲ್ಲಿ ಸ್ಪರ್ಧಿಸುವ ಅವಕಾಶವನ್ನು ಮೊದಲು ನಿರಾಕರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

19ನೇ ವಯಸ್ಸಿನಲ್ಲಿ ಅಮೆರಿಕದ ಅಡಲ್ಟ್​ ಸಿನಿಮಾ ಉದ್ಯಮವನ್ನು ಪ್ರವೇಶಿಸಿದಾಗಲೇ ಸನ್ನಿ, ಮೊದಲ ಟ್ರೋಲ್​ಗಳನ್ನು ಎದುರಿಸಿದರಂತೆ. ಭಾರತದಿಂದಲೂ ಸಾವಿನ ಬೆದರಿಕೆಯುಳ್ಳ ಮತ್ತು ಭಯಾನಕ ಸಂದೇಶಗಳು ಬಂದಿದ್ದವು ಎಂದು ಸನ್ನಿ ನೆನಪಿಸಿಕೊಂಡಿದ್ದಾರೆ. ನಾನು ಅಡಲ್ಟ್​ ಸಿನಿಮಾ ಇಂಡಸ್ಟ್ರಿ ಪ್ರವೇಶಿಸಿದಾಗ ಸಾಕಷ್ಟು ಮಂದಿಗೆ ನನ್ನ ಮೇಲೆ ಅತೀವ ಕೋಪ ಇತ್ತು ಎಂದಿದ್ದಾರೆ.

2001ರಲ್ಲಿ ಸನ್ನಿ ಲಿಯೋನ್​ ಅವರು ಪತ್ರಿಕೆಯೊಂದರ ಮುಖಪುಟಕ್ಕೆ ಪೋಸ್​ ನೀಡಿದ ನಂತರ ಪೆಂಟ್‌ಹೌಸ್ ನಿಯತಕಾಲಿಕದ ಮಾಜಿ ಪ್ರಕಾಶಕರಾದ ಬಾಬ್ ಗುಸಿಯೋನ್ ಅವರ ಸಲಹೆಯ ಮೇರೆಗೆ ತನ್ನ ಹೆಸರನ್ನು "ಕರೆಂಜಿತ್ ಕೌರ್ ವೋಹ್ರಾ" ನಿಂದ "ಸನ್ನಿ ಲಿಯೋನ್" ಎಂದು ಬದಲಾಯಿಸಲು ನಿರ್ಧರಿಸಿದರಂತೆ.

2011ರಲ್ಲಿ ಭಾರತದ ಅತಿದೊಡ್ಡ ರಿಯಾಲಿಟಿ ಟೆಲಿವಿಷನ್ ಶೋ "ಬಿಗ್ ಬಾಸ್" ನಲ್ಲಿ ಭಾಗವಹಿಸಿದರು. 2012ರಲ್ಲಿ ಜಿಸ್ಮ್ 2 ಸಿನಿಮಾ ಮೂಲಕ ಸನ್ನಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಬಾಲಿವುಡ್ ಚಲನಚಿತ್ರಗಳಲ್ಲಿ ಕಾಣಿಸಿಕೊಂಡ ಮೊದಲ ಭಾರತೀಯ ವಯಸ್ಕ ಸಿನಿಮಾ ಸೆಲೆಬ್ರಿಟಿ ಎಂದು ಹೆಸರು ಪಡೆದರು.

2016 ರಲ್ಲಿ ತನ್ನದೇ ಸುಗಂಧ ಬ್ರ್ಯಾಂಡ್​ "ಲಸ್ಟ್" ಅನ್ನು ಪ್ರಾರಂಭಿಸುವ ಮೂಲಕ ನಟಿ ಉದ್ಯಮದ ಕಡೆಗೆ ಮುಖ ಮಾಡಿದ್ದಾರೆ. 40 ವರ್ಷದ ಸನ್ನಿ, ಪ್ರಸ್ತುತ ಸ್ಪ್ಲಿಟ್ಸ್​ವಿಲ್ಲಾ XIV ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಿದ್ದಾರೆ ಮತ್ತು ಶೀಘ್ರದಲ್ಲೇ ಅನುರಾಗ್ ಕಶ್ಯಪ್ ಅವರ ನಿರ್ದೇಶನದ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net