ಯುವರ್​ಲೈಫ್ ವೆಬ್​ಗೆ ಅತಿಥಿ ಸಂಪಾದಕಿ ಸಮಂತಾ

Samantha
Published on

ಸಮಂತಾ ಫ್ಯಾಶನ್ ಡಿಸೈನರ್ ಆಗಿದ್ದು, ಸಾಖಿ ಎಂಬ ಬ್ರಾಂಡ್ ಹುಟ್ಟುಹಾಕಿದ್ದು, ಅದರಡಿ ತಾವು ಡಿಸೈನ್ ಮಾಡಿದ ಬಟ್ಟೆಗಳನ್ನು ಬಿಡುಗಡೆ ಮಾಡಿದ್ದು ಹಳೆಯ ಸುದ್ದಿ. ಈಗ ಹೊಸ ಸುದ್ದಿ ಇದೆ. ಸಮಂತಾ ಯುವರ್​ಲೈಫ್ ಎಂಬ ವೆಬ್​ಸೈಟ್​ಗೆ ಅತಿಥಿ ಸಂಪಾದಕಿಯಾಗಿದ್ದಾರೆ.

ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಉತ್ತಮ ಆರೋಗ್ಯವನ್ನು ಹೊಂದುವುದು ಹೇಗೆ ಎಂಬುದರ ಜತೆಗೆ ಮಹಿಳೆಯರ ಲೈಫ್​ಸ್ಟೈಲ್ ಕುರಿತಾದ ಈ ವೆಬ್​ಸೈಟ್​ನಲ್ಲಿ ಬ್ಯೂಟಿ ಟಿಪ್​ಗಳು, ಅಡುಗೆ ರೆಸಿಪಿಗಳು, ಫ್ಯಾಶನ್, ತಂತ್ರಜ್ಞಾನ, ಲೈಫ್​ಸ್ಟೈಲ್ ಮುಂತಾದ ಹಲವು ವಿಷಯಗಳ ಬಗ್ಗೆ ಮಾಹಿತಿ ಸಿಗಲಿವೆ.

ಲೇಖನಗಳಷ್ಟೇ ಅಲ್ಲ, ವಿವಿಧ ಕ್ಷೇತ್ರಗಳಲ್ಲಿನ ಸೆಲೆಬ್ರಿಟಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಲಿದ್ದಾರೆ. ಅಂದಹಾಗೆ, ಸಮಂತಾಗೆ ಇದರಲ್ಲಿ ಜತೆಯಾಗಿರುವುದು ಯಾರು ಗೊತ್ತಾ? ಟಾಲಿವುಡ್ ನಟ ರಾಮ್ರಣ್ ತೇಜ ಅವರ ಪತ್ನಿ ಉಪಾಸನಾ. ಅಪೋಲೋ ಹಾಸ್ಪಿಟಲ್ ಗ್ರೂಪ್ ಕುಟುಂಬದವರಾದ ಉಪಾಸನಾ, ಆರೋಗ್ಯದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದಾರೆ. ಸಮಂತಾ ಜತೆಗೆ ಕೈಜೋಡಿಸಿರುವ ಅವರು, ಮಹಿಳೆಯರ ಆರೋಗ್ಯ, ಲೈಫ್​ಸ್ಟೈಲ್ ಕುರಿತಾಗಿ ಬರೆಯಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net