ಹಾಗಾಗಿ, ''ಚಿಲ್ಡ್ ಬಿಯರ್ ದಾನ ಮಾಡಿ'' ಎಂದು ನಟ ಸೋನು ಸೂದ್ ಬಳಿ ಮೀಮ್ ಒಂದರ ಮೂಲಕ ಅಭಿಮಾನಿ ಒಬ್ಬರು ಬೇಡಿಕೆ ಇಟ್ಟಿದ್ದಾರೆ. ಸದ್ಯ, ಅಭಿಮಾನಿಯ ಈ ಬೇಡಿಕೆ ಟ್ವಿಟರ್ನಲ್ಲಿ ವೈರಲ್ ಸುದ್ದಿಯಾಗಿದೆ. ಆದರೆ, ಇಲ್ಲಿ ಗಮನಿಸುವ ವಿಷಯವೆಂದರೆ ನಟ ಸೋನು ಸೂದ್ ಅವರು ಅಭಿಮಾನಿಯ ಈ ಬೇಡಿಕೆಗೆ ತುಂಬಾ ಜಾಣತನದಿಂದ ಉತ್ತರ ನೀಡಿದ್ದಾರೆ. ಇನ್ನು, ತಮ್ಮ ಅಭಿಮಾನಿಗೆ ನಟ ಸೋನು ಸೂದ್ ಅವರು ಕೊಟ್ಟ ಉತ್ತರವೂ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಂದಹಾಗೆ, ನಟ ಸೋನು ಸೂದ್ ಅವರ ಮೇಲೆ ನಿತ್ಯ ಅನೇಕ ಮೀಮ್ಸ್ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತವೆ.