ಈ ಬಾಲಿವುಡ್​ ನಟಿಗೆ ಮುಖ ಮುಚ್ಚಿಕೊಂಡು ಓಡಾಡುವಂತದ್ದೇನಾಯಿತು? ಸದ್ಯದಲ್ಲೇ ಬಹಿರಂಗಪಡಿಸುತ್ತೇನೆ ಎಂದ ನಟಿ

srt
Published on

ಮುಂಬೈ: ಕರೊನಾ ವೈರಸ್ ದೇಶದ ಜನರನ್ನು ಭಯಭೀತರನ್ನಾಗಿಸಿದೆ. ಜನರು ಮುಂಜಾಗೃತಾ ಕ್ರಮವಾಗಿ ಮಾಸ್ಕ್​ಗಳನ್ನು ತೊಟ್ಟು ಓಡಾಡಲಾರಂಭಿಸಿದ್ದಾರೆ. ಆದರೆ ಬಾಲಿವುಡ್​ನ ನಟಿ ಒಬ್ಬಳು ಮುಖ ಮುಚ್ಚಿಕೊಂಡು ಓಡಾಡಿದ್ದು, ಆಕೆ ಏತಕ್ಕಾಗಿ ಹಾಗೆ ಮಾಡಿದಳು ಎನ್ನುವ ಊಹಾಪೋಹಗಳು ಇದೀಗ ಬಿ ಟೌನ್​ನಲ್ಲಿ ಓಡಾಡುತ್ತಿದೆ.

ಬಾಲಿವುಡ್​ ನಟಿ ಟ್ವಿಂಕಲ್​ ಖನ್ನಾ ಇಂದು ಮಧ್ಯಾಹ್ನ ಮುಖ ಮುಚ್ಚಿಕೊಂಡು ಓಡಾಡಿದ್ದಾರೆ. ಬಾಂದ್ರಾದಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿರುವ ಆಕೆ ಚಿತ್ರದ ಸೆಟ್​ನಿಂದ ಹೊರಗೆ ಬಂದು ಕಾರು ಹತ್ತುವಾಗ ತಮ್ಮ ಮುಖವನ್ನು ಬಿಳಿ ಪೇಪರ್​ ಒಂದರಿಂದ ಮುಚ್ಚಿಕೊಂಡಿದ್ದಾರೆ.

ಈ ರೀತಿಯಲ್ಲಿ ಮುಖ ಮುಚ್ಚಿಕೊಂಡು ಓಡಾಡಿದ ಫೋಟೋಗಳು ಹೆಚ್ಚೇನು ಸುದ್ದಿ ಮಾಡಿರಲಿಲ್ಲ. ಆದರೆ ನಟಿ ಸ್ವತಃ ತಾವೇ ಅದನ್ನು ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಹಾಕಿಕೊಂಡಿದ್ದು, ಮಾಸ್ಕ್​ ಖಾಲಿಯಾದಾಗ ಜನ ಹೀಗೆ ಮಾಡುತ್ತಾರೆ. ಸದ್ಯದಲ್ಲೇ ಒಂದು ಒಳ್ಳೆ ಸುದ್ದಿ ನೀಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಟ್ವಿಂಕಲ್​ ಖನ್ನಾ ತಮ್ಮ ಮುಂದಿನ ಸಿನಿಮಾದ ಲುಕ್​ ಜನರಿಗೆ ತಿಳಿಯದಿರಲಿ ಎಂದು ಹೀಗೆ ಮಾಡಿದರಾ ಅಥವಾ ಕರೊನಾ ಭಯಕ್ಕೆ ಈ ರೀತಿಯಲ್ಲಿ ಮುಖ ಮುಚ್ಚಿಕೊಂಡರಾ ಎನ್ನುವ ಗೊಂದಲದಲ್ಲಿ ಅವರ ಅಭಿಮಾನಿಗಳು ಸಿಲುಕಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net