ವಿನ್ನರ್ ಗಿಲ್ಲಿ ಎಂದು ತೋರಿಸುತ್ತಿರುವ ಗೂಗಲ್, ರನ್ನರ್ ಅಪ್ ಆಗಿ ಅಶ್ವಿನಿ ಗೌಡ ಹೆಸರನ್ನು ತೋರಿಸುತ್ತಿದೆ. ಇದು ಎಷ್ಟು ನಿಜ ಎಂದು ಗೊತ್ತಾಗಬೇಕಾದರೆ, ಈ ವೀಕೆಂಡ್ವರೆಗೆ ಕಾಯಬೇಕಿದೆ. ಏಕೆಂದರೆ, ಇದೇ ವೀಕೆಂಡ್ ಗ್ರ್ಯಾಂಡ್ ಫಿನಾಲೆಯಲ್ಲಿ ನಡೆಯಲಿದೆ. ಈ ವೇಳೆ ಬಿಗ್ಬಾಸ್ 12ರ ವಿನ್ನರ್ ಹೆಸರನ್ನು ನಿರೂಪಕ ಕಿಚ್ಚ ಸುದೀಪ್ ಅವರು ಘೋಷಣೆ ಮಾಡಲಿದ್ದಾರೆ. ಆದರೆ, ಅಧಿಕೃತವಾಗಿ ಬಿಗ್ಬಾಸ್ ಟೀಮ್ ಘೋಷಣೆ ಮಾಡುವುದಕ್ಕೂ ಮುಂಚೆಯೇ ವಿನ್ನರ್ ಯಾರು ಎಂದು ಗೂಗಲ್ ಹೇಳಿದೆ. ಆದರೂ, ಜನರಲ್ಲಿ ಕುತೂಹಲ ಹಾಗೇ ಉಳಿದಿದೆ, (ಏಜೆನ್ಸೀಸ್).