ಬಿಗ್​ಬಾಸ್​ ಸೀಸನ್​ 12: ಫಿನಾಲೆಯಲ್ಲಿ ಗಿಲ್ಲಿ ಗೆದ್ದರೆ ಒಂದು ದಿನ ಆಟೋ ಫ್ರೀ, ಫ್ಯಾನ್ಸ್​ ಘೋಷಣೆ! BBK 12

ಗಿಲ್ಲಿ ಬಿಗ್​ಬಾಸ್​ ಗೆದ್ದರೆ ಒಂದು ದಿನ ಆಟೋ ಫ್ರೀ,
ಗಿಲ್ಲಿ ಬಿಗ್​ಬಾಸ್​ ಗೆದ್ದರೆ ಒಂದು ದಿನ ಆಟೋ ಫ್ರೀ,
Published on

ಪ್ರಮುಖ ಮುಖ್ಯಾಂಶಗಳು

  • ಪ್ರಸ್ತುತ ನಡೆಯುತ್ತಿರುವ 12ನೇ ಆವೃತ್ತಿಯು ಬಿಗ್​ಬಾಸ್​ ಶೋ ಅಂತಿಮ ಹಂತಕ್ಕೆ ಬಂದಿದೆ
  • ಇನ್ನೂ 4 ದಿನದಲ್ಲಿ ತೆರೆಬೀಳಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ
  • ಹಾಸ್ಯ ಕಲಾವಿದ ಗಿಲ್ಲಿ ಈ ಬಾರಿಯ ಬಿಗ್​ಬಾಸ್​ ಶೋ ಗೆಲ್ಲುತ್ತಾರೆ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ
ಬೆಂಗಳೂರು: ಬಿಗ್​ಬಾಸ್​ ಶೋ ( BBK 12 ) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಇದು ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ. ವಿವಾದಗಳಿಂದಲೇ ಸಿಕ್ಕಾಪಟ್ಟೆ ಸದ್ದು ಮಾಡುವ ಈ ಶೋ ಭಾರಿ ಜನಪ್ರಿಯತೆ ಪಡೆದುಕೊಂಡಿದೆ. ಪ್ರಸ್ತುತ ನಡೆಯುತ್ತಿರುವ 12ನೇ ಆವೃತ್ತಿಯು ಅಂತಿಮ ಹಂತಕ್ಕೆ ಬಂದಿದೆ. ಇನ್ನೂ ನಾಲ್ಕು ದಿನದಲ್ಲಿ ತೆರೆಬೀಳಲಿದ್ದು, ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರ ಈಗಾಗಲೇ ಶುರುವಾಗಿದೆ.
ಹಾಸ್ಯ ಕಲಾವಿದ ಗಿಲ್ಲಿ ಈ ಬಾರಿಯ ಬಿಗ್​ಬಾಸ್​ ಶೋ ಗೆಲ್ಲುತ್ತಾರೆ ಎಂಬ ಕೂಗು ಜೋರಾಗಿ ಕೇಳಿಬರುತ್ತಿದೆ. ಈಗಾಗಲೇ ಗಿಲ್ಲಿಯ ಬಗ್ಗೆ ಸಾಕಷ್ಟು ಪ್ರಚಾರ ಕೂಡ ನಡೆದಿದೆ. ಅದರಲ್ಲೂ ಮಂಡ್ಯದಲ್ಲಿ ಶಾಸಕರಿಂದ ಹಿಡಿದು ಸಾರ್ವಜನಿಕರವರೆಗೆ ಗಿಲ್ಲಿ ಗೆಲ್ಲಬೇಕೆಂದು ಪ್ರಚಾರ ಮಾಡುತ್ತಿದ್ದಾರೆ. ಅನೇಕರು ಗಿಲ್ಲಿ ಮೇಲಿನ ತಮ್ಮ ಅಭಿಮಾನವನ್ನು ಮರೆಯುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನ ಆಟೋ ಚಾಲಕರ ಗುಂಪೊಂದು ವಿಶೇಷ ರೀತಿಯಲ್ಲಿ ಗಿಲ್ಲಿ ಮೇಲಿನ ಅಭಿಮಾವನ್ನು ತೋರಿದ್ದಾರೆ.
ಗಿಲ್ಲಿ ಈ ಬಾರಿಯ ಬಿಗ್​ಬಾಸ್ ಗೆದ್ದರೇ, ಒಂದು ದಿನ ಉಚಿತ ಆಟೋ ಸೇವೆ ನೀಡುವುದಾಗಿ ಆಟೋ ಚಾಲಕರ ಗುಂಪೊಂದು ಘೋಷಣೆ ಮಾಡಿದೆ. ಕನ್ನಡ ಕಟ್ಟೆಯಲ್ಲಿ ಆಟೋ ಚಾಲಕರು, ಗೆದ್ದು ಬಾ ಗಿಲ್ಲಿ ಎಂದು ಬರೆದಿರುವ ಪೋಸ್ಟರ್​ನಲ್ಲಿ ದರ್ಶನ್, ಸುದೀಪ್ ಹಾಗೂ ಅಪ್ಪು ಪೋಟೋ ಹಾಕಿ ಸಂಭ್ರಮಿಸಿದ್ದಾರೆ.
ಆಟೋ ಹಿಂದೆ ವೋಟ್ ಫಾರ್ ಗಿಲ್ಲಿ ಅಂತ ಪೋಸ್ಟರ್ ಅಂಟಿಸಿ ಸಿಟಿ ರೌಂಡ್ಸ್ ಹಾಕಿದ್ದಾರೆ. ಗಿಲ್ಲಿ ಗೆದ್ದರೆ, ಬೆಳಗ್ಗೆ 5 ರಿಂದ ಸಂಜೆ 7 ಗಂಟೆಯ ತನಕ ಒಂದು ದಿನ ಪೂರ್ತಿ ಬೆಳ್ಳಂದೂರಿನ 20 ಕಿ.ಮೀ ಸುತ್ತ ಉಚಿತವಾಗಿ ಆಟೋ ಸೇವೆ ನೀಡುವುದಾಗಿ ಆಟೋ ಚಾಲಕರು ಘೋಷಣೆ ಮಾಡಿದ್ದಾರೆ.
ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 12 ಪ್ರಸ್ತುತ ಅಂತಿಮ ಹಂತದಲ್ಲಿದೆ. 2025, ಸೆಪ್ಟೆಂಬರ್ 28ರಂದು ಪ್ರಾರಂಭವಾದ ಈ ಸೀಸನ್ ಈಗ ಗ್ರ್ಯಾಂಡ್ ಫಿನಾಲೆಗೆ ಸಮೀಪಿಸುತ್ತಿದ್ದು, 2026, ಜನವರಿ 18ರಂದು ಫೈನಲ್ ಎಪಿಸೋಡ್​ ಪ್ರಸಾರವಾಗಲಿದೆ. ಇತ್ತೀಚೆಗೆ ರಾಶಿಕಾ ಶೆಟ್ಟಿ ಎಲಿಮಿನೇಟ್ ಆಗಿದ್ದು, ಧನುಷ್ ಗೌಡ ಟಿಕೆಟ್ ಟು ಫಿನಾಲೆ ಗೆದ್ದು ಫೈನಲಿಸ್ಟ್ ಆಗಿದ್ದಾರೆ. ಉಳಿದ 6 ಸ್ಪರ್ಧಿಗಳು (ಗಿಲ್ಲಿ ನಟ, ಅಶ್ವಿನಿ ಗೌಡ, ಧ್ರುವಂತ್, ರಘು, ಕಾವ್ಯಾ, ರಕ್ಷಿತಾ) ನಾಮನಿರ್ದೇಶನದಲ್ಲಿದ್ದು, ಟ್ರೋಫಿ ಗೆಲ್ಲಲು ತೀವ್ರ ಸ್ಪರ್ಧೆ ನಡೆಯುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net