Trisha Krishnan: ನಟಿ ತ್ರಿಶಾ ಕೃಷ್ಣನ್ ತಮ್ಮ 43 ನೇ ಹುಟ್ಟುಹಬ್ಬವನ್ನು ತಿರುಪತಿ ವೆಂಕಟೇಶ್ವರ ಸ್ವಾಮಿ ಸನ್ನಿಧಿಗೆ ಭೇಟಿ ನೀಡುವ ಮೂಲಕ ಆಚರಿಸಿಕೊಂಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಅಭಿಮಾನಿಗಳ ಕಣ್ಣಿಗೆ ಬಿದ್ದಾಗ, ಅವರ ಸರಳತೆ ಎಲ್ಲರ ಗಮನ ಸೆಳೆಯಿತು. ಸದಾ ಗ್ಲಾಮರಸ್ ಆಗಿ ಕಾಣುವ ನಟಿ, ಅತ್ಯಂತ ಸೊಗಸಾದ ಮತ್ತು ಚಿಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ಅವರ ಉಡುಪಿನ ಬಗ್ಗೆ ಎಲ್ಲೆಡೆ ಮಾತು ಕೇಳಿಬರುತ್ತಿದೆ.