ಒಂದೇ ಸಿನಿಮಾದಲ್ಲಿ ತ್ರಿವಳಿ ಸುಂದರಿಯರು...

Priyanka
Published on

ಬಾಲಿವುಡ್​ನ ಸ್ಟಾರ್ ನಟರು ಆಗಾಗ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುವುದುಂಟು. ಆದರೆ, ಸ್ಟಾರ್ ನಟಿಯರು ಕಾಣಿಸಿಕೊಳ್ಳುವುದು ಬಹಳ ವಿರಳ. ಈಗ ಅದನ್ನು ಸಾಧ್ಯ ಮಾಡಿ ತೋರಿಸುವುದಕ್ಕೆ ಫರ್ಹಾನ್ ಅಖ್ತರ್ ಹೊರಟಿದ್ದಾರೆ. ಫರ್ಹಾನ್ ನಿರ್ವಿುಸಿ-ನಿರ್ದೇಶಿಸುತ್ತಿರುವ ‘ಜೀ ಲೇ ಜರಾ’ ಹೊಸ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಕತ್ರಿನಾ ಕೈಫ್, ಆಲಿಯಾ ಭಟ್ ಮೊದಲ ಬಾರಿಗೆ ಜತೆಯಾಗಿ ನಟಿಸಲಿದ್ದಾರೆ. ಆಶ್ಚರ್ಯವಾಗಬಹುದು. ಆದರೂ ಇದು ನಿಜ.

‘ದಿಲ್ ಛಹ್ತಾ ಹೈ’ ಸಿನಿಮಾ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಘೋಷಣೆ ಮಾಡಿದ್ದಾರೆ ಫರ್ಹಾನ್. ಈ ಚಿತ್ರವನ್ನು ಅವರು ರಿತೇಶ್ ಸಿದ್ವಾನಿ ಜತೆಗೆ ಎಕ್ಸೆಲ್ ಎಂಟರ್​ಟೈನ್​ವೆುಂಟ್ ಸಂಸ್ಥೆಯಡಿ ನಿರ್ವಿುಸುತ್ತಿದ್ದಾರೆ. ಈ ಹಿಂದೆ, ‘ದಿಲ್ ಚಾಹ್ತಾ ಹೈ’ ಮತ್ತು ‘ಜಿಂದಗಿ ನಾ ಮಿಲೇಗಿ ದೋಬಾರಾ’ ಚಿತ್ರಗಳು ಇದೇ ಎಕ್ಸೆಲ್ ಸಂಸ್ಥೆಯಿಂದ ಹೊರಬಂದಿದ್ದವು. ಸುತ್ತಾಟ, ಜೀವನ ಪ್ರೀತಿ, ಗೆಳೆತನ ... ಹೀಗೆ ಹಲವು ಅಂಶಗಳು ಸಿನಿಮಾದಲ್ಲಿದ್ದವು. ಇದೀಗ ‘ಜೀ ಲೇ ಜರಾ’ ಚಿತ್ರದಲ್ಲಿಯೂ ಮೂವರು ಯುವತಿಯರ ಜೀವನವನ್ನು ತೆರೆಮೇಲೆ ಕಣ್ತುಂಬಿಕೊಳ್ಳಬಹುದಂತೆ. ಜೋಯಾ ಅಖ್ತರ್, ಫರ್ಹಾನ್ ಅಖ್ತರ್, ರೀಮಾ ಕಾಗ್ತಿ ಚಿತ್ರಕಥೆ ಬರೆದಿರುವ ಈ ಚಿತ್ರ 2022ಕ್ಕೆ ಶೂಟಿಂಗ್ ಆರಂಭಿಸಲಿದ್ದು, 2023ರಲ್ಲಿ ತೆರೆಗೆ ಬರಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net