ಟಾಪ್​ ಹೀರೋಯಿನ್ಸ್​ ಸಂಭಾವನೆ ಪಟ್ಟಿ ಲೀಕ್​: ಸಿನಿಮಾವೊಂದಕ್ಕೆ ಪಡೆಯುವ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ!

Heroines
Published on

ಹೈದರಾಬಾದ್​: ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ಪ್ರತಿವರ್ಷಕ್ಕೆ ಅನೇಕ ಹೊಸ ಮುಖಗಳು ಪರಿಚಯವಾಗುತ್ತಿರುತ್ತವೆ. ಆದರೆ, ಉತ್ತಮ ನಟನೆ ಹಾಗೂ ತಮ್ಮ ಸೌಂದರ್ಯದಿಂದಲೇ ಕೆಲವರು ಅಭಿಮಾನಿಗಳ ಮನಸ್ಸನ್ನು ಬೇಗ ಸೆಳೆಯುತ್ತಾರೆ. ಅಂಥವರು ಚಿತ್ರರಂಗದಲ್ಲಿ ಉನ್ನತ ಸ್ಥಾನಕ್ಕೇರುವುದರಲ್ಲಿ ಸಂಶಯವೇ ಇಲ್ಲ.

ನಾಯಕಿಯರ ಬೇಡಿಕೆ ಹೆಚ್ಚು ದಿನ ಉಳಿಯುವುದಿಲ್ಲ ಎನ್ನುವ ಕಾಲದಲ್ಲಿ ಕೆಲವರು ಎರಡು ದಶಕಕ್ಕೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಗಟ್ಟಿಯಾಗಿ ಉಳಿದ ಸಾಕಷ್ಟು ನಿದರ್ಶನಗಳಿವೆ. ಉದಾಹರಣೆಗೆ ಲೇಡಿ ಸೂಪರ್​ಸ್ಟಾರ್​ ಎಂದೇ ಖ್ಯಾತಿಯಾಗಿರುವ ನಯನಾತಾರ ಕೂಡ ಒಬ್ಬರು.

ಇನ್ನು ನಟಿಯರ ಸಂಭಾವನೆ ವಿಚಾರಕ್ಕೆ ಬರುವುದಾದರೆ, ಅದೊಂದು ಕುತೂಹಲಕಾರಿ ವಿಷಯವೇ ಸರಿ. ಯಾವ ನಟಿ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬ ವಿಷಯ ಅನೇಕರಿಗೆ ತಿಳಿದಿರುವುದಿಲ್ಲ. ಇದೀಗ ನಟಿಯರ ಸಂಭಾವನೆ ಪಟ್ಟಿಯೊಂದು ಸೋರಿಕೆಯಾಗಿದ್ದು, ಹುಬ್ಬೇರಿಸುವಂತಿದೆ.

ಕಾಲಿವುಡ್​ (ತಮಿಳು) ನಟಿಯರ ಸಂಭಾವನೆ ಪಟ್ಟಿಯಾಗಿದ್ದು, ಅದರಲ್ಲಿ ನಯನಾತಾರ ಮೊದಲನೇ ಸ್ಥಾನದಲ್ಲಿದ್ದಾರೆ. ನಂತರದಲ್ಲಿ ಕಾಜಲ್​ ಅಗರವಾಲ್​, ತಮನ್ನಾ ಭಾಟಿಯಾ ಸೇರಿದಂತೆ ಇನ್ನು ಕೆಲವರ ಹೆಸರು ಪಟ್ಟಿಯಲ್ಲಿದ್ದು, ಅವರ ಸಂಭಾವನೆ ಈ ಕೆಳಕಂಡಂತಿದೆ. ಇದನ್ನೂ ಓದಿ: ರವಿ ಬೆಳೆಗೆರೆ ವೃತ್ತಿ ಬದುಕಿನಲ್ಲಿ ಎಷ್ಟು ಅಪಾಯಗಳನ್ನು ಎದುರಿಸಿದ್ದರು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ!

  1. ನಯನಾತಾರ- 4 ಕೋಟಿ ರೂ.
  2. ಕಾಜಲ್​ ಅಗರವಾಲ್​- 2 ಕೋಟಿ ರೂ.
  3. ತ್ರಿಶಾ ಕೃಷ್ಣನ್​, ತಮನ್ನಾ ಭಾಟಿಯಾ- 1.5 ಕೋಟಿ ರೂ.
  4. ಶ್ರುತಿ ಹಾಸನ್​- 1 ಕೋಟಿ ರೂ.
  5. ಕೀರ್ತಿ ಸುರೇಶ್​- 80 ಲಕ್ಷ ರೂ.
  6. ಅಂಜಲಿ- 70 ಲಕ್ಷ ರೂ.
  7. ರೆಜಿನಾ ಕ್ಯಾಸಂದ್ರ- 60 ಲಕ್ಷ ರೂ.
  8. ಶ್ರೀಯಾ ಸರಣ್​- 50 ಲಕ್ಷ ರೂ.
  9. ಐಶ್ವರ್ಯಾ ರಾಜೇಶ್​, ಪ್ರಿಯಾ ಆನಂದ್​, ನಿವೇದಿತಾ ಪೆತುರಾಜ್​, ಶ್ರೀ ದಿವ್ಯಾ- 40 ಲಕ್ಷ ರೂ.
  10. ನಿವೇದಿತಾ ಥಾಮಸ್​, ಮಂಜಿಮಾ ಮೋಹನ್​- 30 ಲಕ್ಷ ರೂ.
  11. ಶ್ರದ್ಧಾ ಶ್ರೀನಾಥ್​- 10 ಲಕ್ಷ ರೂ.

ಪಟ್ಟಿಯ ಮೂಲ ಯಾವುದೆಂದು ತಿಳಿದುಬಂದಿಲ್ಲ. ಆದರೆ, ಸಿನಿಮಾ ಸುದ್ದಿಗಳ ವೆಬ್​ಸೈಟ್​ ಟಾಲಿವುಡ್​.ನೆಟ್​ನಲ್ಲಿ ಈ ಕುರಿತು ವರದಿಯಾಗಿದ್ದು, ಭಾರಿ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net