Indian Cinemas: ಈ ವರ್ಷದ ಮೊದಲಾರ್ಧದಲ್ಲಿ ಸಿನಿ ಪ್ರೇಮಿಗಳಿಗೆ ಭರಪೂರ ಮನರಂಜನೆ ನೀಡುವಲ್ಲಿ ಭಾರತೀಯ ಚಿತ್ರೋದ್ಯಮದ ಸಿನಿಮಾಗಳು ಯಶಸ್ವಿಯಾಗಿದ್ದೇ ಆದರೂ ಲಾಭದ ಹಾದಿಯಲ್ಲಿ ಎಡವಿರುವುದು ಕಳವಳಕಾರಿ. ಬಾಲಿವುಡ್, ಮಾಲಿವುಡ್, ಸ್ಯಾಂಡಲ್ವುಡ್, ಕಾಲಿವುಡ್ ಮತ್ತು ಟಾಲಿವುಡ್ ಪೈಕಿ ಹಿಂದಿ ಚಿತ್ರೋದ್ಯಮ ಮಾತ್ರ ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಎರಡು ಭಾಗಗಳ ಮೂಲಕ ಭರ್ಜರಿ ಯಶಸ್ಸನ್ನು ಗಳಿಸಿ, 1,000 ಕೋಟಿ ರೂ. ಗಳಿಕೆಯನ್ನು ಮೀರಿದ್ದು ಗಮನಾರ್ಹ.