ನಾಳೆ ಅಂಬರೀಷ್ ಜನ್ಮದಿನ, ಸಂಭ್ರಮದ-ಸಾರ್ವಜನಿಕ ಆಚರಣೆ ಬೇಡ: ಸುಮಲತಾ ಅಂಬರೀಷ್ ಮನವಿ

Ambarish
Published on

ಬೆಂಗಳೂರು: ತಮ್ಮ ನೆಚ್ಚಿನ ಸಿನಿಮಾ ನಟರ ಜನ್ಮದಿನವೆಂದರೆ ಅಭಿಮಾನಿಗಳಿಗೆ ಒಂಥರ ಹಬ್ಬ. ಆ ಒಂದು ದಿನಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿರುತ್ತಾರೆ. ತಮ್ಮ ನೆಚ್ಚಿನ ನಟನ ಮನೆಗಳ ಮುಂದೆ, ತಮ್ಮೂರಿನ ಆಯಕಟ್ಟಿನ ಸ್ಥಳಗಳಲ್ಲಿ ಅಭಿಮಾನಿಗಳು ಪ್ರೀತಿಯ ನಟನ ಜನ್ಮದಿನ ಆಚರಿಸಿ ಸಂಭ್ರಮಿಸುವುದು ಸಹಜ.

ಅಂದಹಾಗೆ ನಾಳೆ ನಟ ಅಂಬರೀಷ್ ಅವರ ಜನ್ಮದಿನ. ಆದರೆ ಈ ಸಲ ಅವರ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸುವುದು ಬೇಡ ಎಂಬುದಾಗಿ ಅವರ ಪತ್ನಿ, ಸಂಸದೆ ಸುಮಲತಾ ಅಂಬರೀಷ್​ ಮನವಿ ಮಾಡಿಕೊಂಡಿದ್ದಾರೆ.

'ನಾಳೆ ನಮ್ಮೆಲ್ಲರ ಪ್ರೀತಿಯ ಅಂಬರೀಷ್ ಅವರ 69ನೇ ಜನ್ಮ ಜಯಂತಿ ಸಂಭ್ರಮದಿಂದ ಆಚರಿಸಲು ನೀವೆಲ್ಲರೂ ಕಾಯುತ್ತಿರುತ್ತೀರಿ. ಆದರೆ ಕರೊನಾ ತಡೆಯಲು ದೇಶವೆಲ್ಲ ಶ್ರಮಿಸುತ್ತಿರುವಾಗ ನಾವು ಯಾವುದೇ ಸಾರ್ವಜನಿಕ ಆಚರಣೆ ಅಥವಾ ಸಮಾರಂಭ ಮಾಡುವುದು ಬೇಡವೆಂದು ನನ್ನ ವಿನಮ್ರ ಮನವಿ. ಈ ವರ್ಷ ಅವರನ್ನು ನಮ್ಮ ಮನಸ್ಸು ಮನೆಗಳಲ್ಲೇ ಆಚರಿಸೋಣ' ಎಂಬುದಾಗಿ ಅಭಿಮಾನಿಗಳಲ್ಲಿ ಸುಮಲತಾ ಮನವಿ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net