ನಿಮ್ಮ ತಾಯಿಯೂ ಒಬ್ಬಳು ಹೆಣ್ಣೇ...! 'ಚುಟ್ಟಾಮಲ್ಲೆ' ಆಶ್ಲೀಲ ಡೀಪ್‌ಫೇಕ್ ವಿಡಿಯೋ ನೋಡಿ ಜಾನ್ವಿ ಗರಂ; ಮೊದಲು ಸ್ತ್ರೀಯರಿಗೆ ಗೌರವಕೊಡಿ ಎಂದ ನಟಿ! Janhvi Kapoor

'ಚುಟ್ಟಾಮಲ್ಲೆ' ಆಶ್ಲೀಲ ಡೀಪ್‌ಫೇಕ್ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಜಾನ್ವಿ ಕಪೂರ್ ಗರಂ ಆಗಿದ್ದಾರೆ. "ನಿಮ್ಮ ತಾಯಿಯೂ ಒಬ್ಬಳು ಹೆಣ್ಣೇ, ಮೊದಲು ಸ್ತ್ರೀಯರಿಗೆ ಗೌರವ ಕೊಡಿ" ಎಂದು ತರಾಟೆಗೆ ತೆಗೆದುಕೊಂಡ ನಟಿಯ ಆಕ್ರೋಶದ ಸಂಪೂರ್ಣ ವಿವರ ಇಲ್ಲಿದೆ.
Famous actress Janhvi Kapoor lashes out after a deepfake video goes viral.
ಡೀಪ್‌ಫೇಕ್ ವಿಡಿಯೋ ವೈರಲ್ ಬೆನ್ನಲ್ಲೇ ಕಿಡಿಕಾರಿದ ಖ್ಯಾತ ನಟಿ ಜಾನ್ವಿ ಕಪೂರ್.
Published on: 

ಸಿನಿಮಾ: ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆಯ ದುರ್ಬಳಕೆ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಅದರಲ್ಲೂ ಸಿನಿಮಾದ ನಟ-ನಟಿಯರನ್ನು ಅಶ್ಲೀಲವಾಗಿ ಬಿಂಬಿಸುವುದರಲ್ಲಿ ಇದರ ಬಳಕೆ ಅತ್ಯಧಿಕವಾಗಿದೆ.

ಟಾಲಿವುಡ್​ ಖ್ಯಾತ ನಟ ಜೂನಿಯರ್​ ಎನ್​ಟಿಆರ್​ ಹಾಗೂ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್​ ನಟಿಸಿದ್ದ ದೇವರಾ ಸಿನಿಮಾದ ಚುಟ್ಟಾಮಲ್ಲೆ ಹಾಡನ್ನು ಕೃತಕ ಬುದ್ಧಿಮತ್ತೆ ಬಳಸಿಕೊಂಡು ನಟಿಯನ್ನು ಅರೆನಗ್ನಗೊಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನವನ್ನು ಸೃಷ್ಟಿಸಿದೆ.

ಈ ಕುರಿತು, ಜೂನಿಯರ್​ ಎನ್​ಟಿಆರ್​ ಭಾರಿ ಆಕ್ರೋಶ ಹೊರಹಾಕಿದ್ದ ನಂತರ ಈಗ, ನಟಿ ಜಾನ್ವಿ ಕಪೂರ್​ ಕೂಡ ಈ ಕೃತ್ಯಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ನಿಮ್ಮ ತಾಯಿಯೂ ಒಬ್ಬಳು ಹೆಣ್ಣೇ!

ಸಾಮಾಜಿಕ ಜಾಲತಾಣಗದಲ್ಲಿ ಹರಿದಾಡುತ್ತಿರುವ ದೇವರಾ ಸಿನಿಮಾದ ಚುಟ್ಟಾಮಲ್ಲೆ ಹಾಡಿನ ಎಐ ತುಣಕಿಗೆ ವಿರೋಧ ವ್ಯಕ್ತಪಡಿಸಿರುವ ನಟಿ ಜಾನ್ವಿ ಕಪೂರ್​, ಬೇರೊಬ್ಬ ಮಹಿಳೆಯೆ ಅಗೌರವ ತೋರುವ ಮೊದಲು ನಿಮ್ಮ ಅಮ್ಮನು ಕೂಡ ಒಬ್ಬ ಹೆಣ್ಣು ಎನ್ನುವುದನ್ನು ಮರೆಯದಿರಿ, ಮೊದಲು ಮಹಿಳೆಯರಿಗೆ ಗೌರವ ಕೊಡುವುದನ್ನು ಕಲಿಯಿರಿ, ಸೋಷಿಯಲ್​ ಮೀಡಿಯಾನಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೊದಲು ವಿವೇಕಯುತರಾಗಿರಿ ಎಂದು ನಟಿ ಎಕ್ಸ್​ನಲ್ಲಿ ಬರದುಕೊಂಡಿದ್ದಾರೆ.

Also Read
ಖ್ಯಾತ ಮೇಕಪ್ ಆರ್ಟಿಸ್ಟ್, LGBTQ ಹೋರಾಟಗಾರ ಮ್ಯಾಡ್ ಸಂಧು ಮೇಲೆ ಗುಂಡಿನ ದಾಳಿ: ಆಸ್ಪತ್ರೆ ತಲುಪುವ ಮುನ್ನವೇ ಸಾವನ್ನಪ್ಪಿದ ಇನ್ಫ್ಲುಯೆನ್ಸರ್! Mad Sandhu Killed
Famous actress Janhvi Kapoor lashes out after a deepfake video goes viral.

ಮಹಿಳೆಯರನ್ನು ಗೌರವಿಸುವ ನಾಡಿನಲ್ಲಿ ಈ ವಿಕೃತಿ ಏಕೆ?

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ಅತ್ಯಂತ ಆಕ್ಷೇಪಾರ್ಹ ಮತ್ತು ಅಸಹ್ಯಕರವಾಗಿದೆ ಎಂದು ಜೂನಿಯರ್ ಎನ್‌ಟಿಆರ್ ಕಿಡಿಕಾರಿದ್ದಾರೆ. ಮಹಿಳೆಯರನ್ನು ತಾಯಂದಿರು ಮತ್ತು ದೇವತೆಯರಂತೆ ಕಾಣುವ ನಮ್ಮ ಸಂಸ್ಕೃತಿಯಲ್ಲಿ ಇಂತಹ ಕೃತ್ಯಗಳು ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

"ಮಹಿಳೆಯರನ್ನು ದೇವತೆಯರಂತೆ ಪೂಜಿಸುವ ನಾಡು ನಮ್ಮದು. 'ಮಾತೃದೇವೋ ಭವ' ಎನ್ನುವುದು ನಮ್ಮ ಸಂಸ್ಕೃತಿಯ ರಕ್ತದಲ್ಲಿದೆ. ಆದರೆ, ಕೆಲವರು ತಮ್ಮ ವಿಕೃತ ಮನಸ್ಥಿತಿಯನ್ನು ತೋರಿಸಲು AI ತಂತ್ರಜ್ಞಾನವನ್ನು ಎಷ್ಟು ಕೀಳು ಮಟ್ಟಕ್ಕೆ ಬಳಸುತ್ತಿದ್ದಾರೆ ನೋಡಿ. ಇದು ಪದಗಳಲ್ಲಿ ವಿವರಿಸಲಾಗದಷ್ಟು ನಾಚಿಕೆಗೇಡಿನ ವಿಷಯ," ಎಂದು ಜೂನಿಯರ್ ಎನ್‌ಟಿಆರ್ ತಮ್ಮ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ನಿಮ್ಮನ್ನು ಬಿಡುವ ಪ್ರಶ್ನೆಯೇ ಇಲ್ಲ": ಖಡಕ್ ಎಚ್ಚರಿಕೆ

ಈ ವಿಡಿಯೋವನ್ನು ಎಡಿಟ್ ಮಾಡಿ ಸೃಷ್ಟಿಸಿದ ಹಾಗೂ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುತ್ತಿರುವ ಕಿಡಿಗೇಡಿಗಳಿಗೆ ನಟ ನೇರ ಎಚ್ಚರಿಕೆ ನೀಡಿದ್ದಾರೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಎಚ್ಚರಿಸಿರುವ ಅವರು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

"ಈ ಕೃತ್ಯದ ಹಿಂದೆ ಇರುವ ನೀಚರೇ, ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ. ಈ ತಿರುಚಲಾದ ವಿಡಿಯೋವನ್ನು ಸೃಷ್ಟಿಸಿದವರು ಮತ್ತು ಇದನ್ನು ಹಂಚಿಕೊಳ್ಳುತ್ತಿರುವ ಪ್ರತಿಯೊಬ್ಬರ ವಿರುದ್ಧವೂ ಸಾಧ್ಯವಿರುವ ಎಲ್ಲ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುತ್ತೇನೆ," ಎಂದು ನಟ ಎಚ್ಚರಿಕೆ ನೀಡಿದ್ದಾರೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net