ವಿಜಯ್​-ರಶ್ಮಿಕಾ ಮದ್ವೆ ಇನ್ವಿಟೇಶನ್​ ಬಾಕ್ಸ್​ನಲ್ಲಿ ಅತಿಥಿಗಳಿಗೆ ಸರ್ಪ್ರೈಸ್​ಗಳ ಸರಮಾಲೆ! ಏನೆಲ್ಲ ಗಿಫ್ಟ್​ಗಳಿವೆ ನೋಡಿ...Vijay-Rashmika Wedding

ವಿಜಯ್​-ರಶ್ಮಿಕಾ ಮದ್ವೆ ಇನ್ವಿಟೇಶನ್​ ಬಾಕ್ಸ್ ( Vijay-Rashmika Wedding )
ವಿಜಯ್​-ರಶ್ಮಿಕಾ ಮದ್ವೆ ಇನ್ವಿಟೇಶನ್​ ಬಾಕ್ಸ್ ( Vijay-Rashmika Wedding )
Published on

ಪ್ರಮುಖ ಮುಖ್ಯಾಂಶಗಳು

  • ನಟ ವಿಜಯ್ ದೇವರಕೊಂಡ ಮತ್ತು ನಟಿ ರಶ್ಮಿಕಾ ಮಂದಣ್ಣರ ಮದುವೆ ದಿನ ಸಮೀಪಿಸುತ್ತಿದೆ
  • ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ವಿಜಯ್​-ರಶ್ಮಿಕಾ ವಿವಾಹ ನಡೆಯಲಿದೆ
  • ಮದುವೆಯ ಬಳಿಕ, ಮಾರ್ಚ್ 4ರಂದು ಹೈದರಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ
  • ವಿಜಯ್ ಮತ್ತು ರಶ್ಮಿಕಾ ಅವರ ಮದುವೆ ಆಮಂತ್ರಣ ಪತ್ರಿಕೆ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ
Vijay-Rashmika Wedding : ಟಾಲಿವುಡ್​ ಸ್ಟಾರ್​ ನಟ ವಿಜಯ್ ದೇವರಕೊಂಡ ಹಾಗೂ ಪ್ಯಾನ್​ ಇಂಡಿಯಾ ಸುಂದರಿ ರಶ್ಮಿಕಾ ಮಂದಣ್ಣರ ಮದುವೆ ದಿನ ಸಮೀಪಿಸುತ್ತಿದೆ. ಫೆಬ್ರವರಿ 26 ರಂದು ರಾಜಸ್ಥಾನದ ಉದಯಪುರದ ಅರಮನೆಯಲ್ಲಿ ವಿಜಯ್​-ರಶ್ಮಿಕಾ ವಿವಾಹ ನಡೆಯಲಿದ್ದು, ಕುಟುಂಬ ಸದಸ್ಯರು ಮತ್ತು ಆಪ್ತರು ಮಾತ್ರ ಈ ಶುಭ ಸಮಾರಂಭದಲ್ಲಿ ಹಾಜರಿರುತ್ತಾರೆ.
ಮದುವೆಯ ಬಳಿಕ, ಮಾರ್ಚ್ 4ರಂದು ಹೈದರಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿ ಆರತಕ್ಷತೆ ನಡೆಯಲಿದೆ. ಈ ವೇಳೆ ಟಾಲಿವುಡ್​ ಸೇರಿದಂತೆ ವಿವಿಧ ಸಿನಿಮಾ ರಂಗದ ಗಣ್ಯರು ಆರತಕ್ಷತೆಗೆ ಆಗಮಿಸಿ, ನವಜೋಡಿಗೆ ಶುಭ ಹಾರೈಸಲಿದ್ದಾರೆ. ಈಗಾಗಲೇ ವಿಜಯ್​-ರಶ್ಮಿಕಾ ಮನೆಯಲ್ಲಿ ಮದುವೆ ಸಿದ್ಧತೆಯು ಅಂತಿಮ ಹಂತಕ್ಕೆ ಬಂದಿದೆ. ವಿಜಯ್ ಮನೆಯಲ್ಲಿ ಲೈಟಿಂಗ್ಸ್​ ಅಲಂಕಾರಗಳನ್ನು ಮಾಡಲಾಗಿದ್ದು, ಮದುವೆಯ ಕಾರ್ಡ್‌ಗಳನ್ನು ಸಹ ವಿತರಿಸಲಾಗುತ್ತಿದೆ.
ತಾಜಾ ಸಂಗತಿ ಏನೆಂದರೆ, ವಿಜಯ್ ಮತ್ತು ರಶ್ಮಿಕಾ ಅವರ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡುತ್ತಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ, ವಿಜಯ್​-ರಶ್ಮಿಕಾ ಮದುವೆ ಆಮಂತ್ರಣ ಪತ್ರಿಕೆಯನ್ನು ವಿಶೇಷ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿರುವುದು ಬಹಿರಂಗವಾಗಿದೆ. ಈ ವಿಶೇಷ ಬಾಕ್ಸ್​ನಲ್ಲಿ ಮದುವೆ ಇನ್ವಿಟೇಶನ್​ ಕಾರ್ಡ್ ಜೊತೆಗೆ ಅತಿಥಿಗಳನ್ನು ಅಚ್ಚರಿಗೊಳಿಸಲು ವಿಶೇಷ ಉಡುಗೊರೆಗಳನ್ನು ಸಹ ಇಡಲಾಗಿದೆ.

ವಿಜಯ್​-ರಶ್ಮಿಕಾ ವೆಡ್ಡಿಂಗ್​ ಬಾಕ್ಸ್​ನಲ್ಲಿ ಏನಿದೆ?

ಅಂದಹಾಗೆ, ರಶ್ಮಿಕಾ ಕೆಲವು ತಿಂಗಳ ಹಿಂದಷ್ಟೇ ಒಂದು ಸುಗಂಧ ದ್ರವ್ಯ ಕಂಪನಿಯನ್ನು ಪ್ರಾರಂಭಿಸಿದ್ದಾರೆ. ಆ ಕಂಪನಿಯ ನ್ಯಾಷನಲ್ ಕ್ರಷ್ ಸುಗಂಧ ದ್ರವ್ಯದ ಸಣ್ಣ ಬಾಟಲಿಯನ್ನು ಬಾಕ್ಸ್​ ಒಳಗೆ ಇಡಲಾಗಿದೆ. ಇದರೊಂದಿಗೆ ಕೈ ಮತ್ತು ಕಾಲುಗಳಿಗೆ ಆಯುರ್ವೇದದ ಕ್ರೀಮ್ ಕೂಡ ಇದೆ. ಆ ಪೆಟ್ಟಿಗೆಯಲ್ಲಿ ವಿಜಯ್ ದೇವರಕೊಂಡ ಅವರ ರೌಡಿ ಬ್ರ್ಯಾಂಡ್‌ನ ಟಿ-ಶರ್ಟ್ ಇರಿಸಲಾಗಿದೆ. ಇದರ ಜೊತೆಗೆ ಒಂದು ಗೋಡಂಬಿ ಬೀಜದ ಪ್ಯಾಕೆಟ್ ಮತ್ತು ಸಿಹಿತಿಂಡಿಗಳ ಬಾಕ್ಸ್​ ಕೂಡ ಇದೆ.
ಈ ವಿಶೇಷ ಉಡುಗೊರೆಗಳು ವಿಜಯ್-ರಶ್ಮಿಕಾ ಮದುವೆ ಕಾರ್ಡ್ ಬಾಕ್ಸ್‌ನಲ್ಲಿದೆ. ಸದ್ಯ ಮದ್ವೆ ಇನ್ವಿಟೇಶನ್​ ಬಾಕ್ಸ್ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ. ಈ ಬಾಕ್ಸ್‌ಗೆ ತುಂಬಾ ಬೆಲೆಯಿರಬೇಕು ಎಂದು ನೆಟ್ಟಿಗರು ಕಾಮೆಂಟ್​ ಮಾಡುತ್ತಿದ್ದಾರೆ. ಈ ವೆಡ್ಡಿಂಗ್​ ಬಾಕ್ಸ್​ ನೋಡಿ ನಿಮಗೆ ಏನು ಅನಿಸಿತು ಎಂಬುದನ್ನು ಕಾಮೆಂಟ್​ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.
ಇನ್ನು ರಾಜಸ್ಥಾನದಲ್ಲಿ ಮದುವೆ ಮತ್ತು ಹೈದರಾಬಾದ್‌ನಲ್ಲಿ ಆರತಕ್ಷತೆ ಎಷ್ಟು ಅದ್ಧೂರಿಯಾಗಿ ನಡೆಯಲಿದೆ ಎಂದು ನೋಡಲು ಎಲ್ಲರೂ ಕಾಯುತ್ತಿದ್ದಾರೆ. ಟಾಲಿವುಡ್ ಜೊತೆಗೆ, ಬಾಲಿವುಡ್ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಸಹ ಆರತಕ್ಷತೆಗೆ ಹಾಜರಾಗಲಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net