ಈ 3 ತಿಂಗಳಲ್ಲಿ ಜನಿಸಿದವರಿಗೆ ಭಯ ಅಂದ್ರೆ ಏನು ಅಂತಾನೇ ಗೊತ್ತಿರುವುದಿಲ್ಲ! ನೀವು ಹುಟ್ಟಿದ್ದು ಇದೇ ತಿಂಗಳಾ? Astrology
ಸಾಂದರ್ಭಿಕ ಚಿತ್ರ ( Astrology )
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ತಿಂಗಳುಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ನಿರ್ಭೀತರು
ಕೆಲ ತಿಂಗಳಲ್ಲಿ ಹುಟ್ಟಿದವರು ಯಾರಿಗೂ ಹೆದರದ ಗುಣವನ್ನು ಹೊಂದಿರುತ್ತಾರಂತೆ
ಅಂದುಕೊಂಡಿದ್ದನ್ನು ಸಾಧಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಗುಣವನ್ನು ಅವರಲ್ಲಿದೆ
ತಮ್ಮ ಸಾಧನೆಯ ಹಾದಿಯಲ್ಲಿ ಭಯ ಅನ್ನೋ ಪದದ ಅರ್ಥವೇ ಇವರಿಗೆ ತಿಳಿದಿರುವುದಿಲ್ಲ
Astrology : ಓರ್ವ ವ್ಯಕ್ತಿಯ ಜನ್ಮ ರಾಶಿ ಮತ್ತು ಹುಟ್ಟಿನ ನಕ್ಷತ್ರವು ಆತನ ಭವಿಷ್ಯದ ಜೀವನ ಮತ್ತು ವ್ಯಕ್ತಿತ್ವದ ಮೇಲೆ ತುಂಬಾ ಪ್ರಭಾವ ಬೀರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಅದೇ ರೀತಿ ಜನ್ಮ ತಿಂಗಳು ಕೂಡ ಓರ್ವ ವ್ಯಕ್ತಿಯ ಎಲ್ಲ ಅಂಶಗಳ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ತಿಂಗಳುಗಳಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ನಿರ್ಭೀತರು. ಅಂದರೆ, ಯಾರಿಗೂ ಹೆದರದ ಗುಣವನ್ನು ಹೊಂದಿರುತ್ತಾರೆ. ಖಂಡಿತವಾಗಿಯೂ ಅವರಲ್ಲಿ ಸಾಧಿಸಲು ಹೋರಾಡುವ ಗುಣ ಇರುತ್ತದೆ. ಅಂದುಕೊಂಡಿದ್ದನ್ನು ಸಾಧಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಡುವ ಗುಣವನ್ನು ಅವರಲ್ಲಿದೆ. ತಮ್ಮ ಸಾಧನೆಯ ಹಾದಿಯಲ್ಲಿ ಭಯ ಅನ್ನೋ ಪದದ ಅರ್ಥವೇ ಇವರಿಗೆ ತಿಳಿದಿರುವುದಿಲ್ಲ.
ಹಾಗಾದರೆ, ಭಯಕ್ಕೆ ಸೆಡ್ಡು ಹೊಡೆದು, ತಮ್ಮ ಗುರಿಯನ್ನು ಮುಟ್ಟುವ ಜನರು ಯಾವ ತಿಂಗಳಲ್ಲಿ ಜನಿಸುತ್ತಾರೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ಜನವರಿ
ಜನವರಿಯಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿಯೇ ತಮ್ಮ ಆತ್ಮವಿಶ್ವಾಸ ಮತ್ತು ತೀವ್ರ ಧೈರ್ಯಕ್ಕೆ ಹೆಸರುವಾಸಿಯಾಗಿರುತ್ತಾರೆ. ಇವರು ತಮ್ಮ ಗುರಿಗಳನ್ನು ಸಾಧಿಸುವತ್ತ ಮಾತ್ರ ಗಮನಹರಿಸಿರುವುದರಿಂದ, ಬೇರೆ ಯಾವುದೂ ಅವರ ಮೇಲೆ ಕಿಂಚಿತ್ತೂ ಪರಿಣಾಮ ಬೀರುವುದಿಲ್ಲ. ಅವರು ತಮ್ಮ ಸಮಸ್ಯೆಯನ್ನು ಗಂಭೀರವಾಗಿ ತನಿಖೆ ಮಾಡಿ ಪರಿಹಾರವನ್ನು ಕಂಡುಕೊಳ್ಳುವ ಸಾಮರ್ಥ್ಯ ಹೊಂದಿರುತ್ತಾರೆ ಮತ್ತು ಏನು ಬೇಕಾದರೂ ಮಾಡುವಷ್ಟು ಧೈರ್ಯಶಾಲಿಗಳಾಗಿರುತ್ತಾರೆ. ಅವರನ್ನು ಬೆದರಿಸಿ ಏನನ್ನಾದರೂ ಮಾಡದಂತೆ ತಡೆಯುವುದು ತುಂಬಾನೇ ಕಷ್ಟ.
ಏಪ್ರಿಲ್ನಲ್ಲಿ ಜನಿಸಿದ ಜನರು ತಮ್ಮ ಪ್ರಬಲ ಅಂತಃಪ್ರಜ್ಞೆಗೆ ಹೆಸರುವಾಸಿಯಾಗಿರುತ್ತಾರೆ ಮತ್ತು ಸ್ವಾಭಾವಿಕವಾಗಿ ಭವಿಷ್ಯವನ್ನು ನಿಖರವಾಗಿ ಊಹಿಸಲು ಸಮರ್ಥರಾಗಿರುತ್ತಾರೆ. ಅವರು ತಮ್ಮ ಭಾವನೆಗಳನ್ನು ನಿಯಂತ್ರಿಸುವಲ್ಲಿ ನಿಪುಣರು ಮತ್ತು ತಮ್ಮ ಜೀವವನ್ನೇ ಪಣಕ್ಕಿಟ್ಟರೂ ಸಹ, ತಮ್ಮ ಗುರಿಗಳನ್ನು ಸಾಧಿಸಲು ದೃಢನಿಶ್ಚಯ ಹೊಂದಿರುತ್ತಾರೆ. ಯಾವುದೇ ಪರಿಸ್ಥಿತಿಯಲ್ಲಿ ಅವರು ಸ್ಪಷ್ಟವಾಗಿ ಮತ್ತು ಶಾಂತವಾಗಿ ವರ್ತಿಸುವುದರಿಂದ, ಭಯವು ಅವರ ನಿಘಂಟಿನಲ್ಲಿ ಒಂದು ಪದವೇ ಅಲ್ಲ.
ಆಗಸ್ಟ್
ಆಗಸ್ಟ್ನಲ್ಲಿ ಜನಿಸಿದ ಜನರು ಸ್ವಾಭಾವಿಕವಾಗಿ ನಿಯಂತ್ರಣ ಸಾಧಿಸುವ ಗುಣವನ್ನು ಹೊಂದಿರುತ್ತಾರೆ ಮತ್ತು ನಾಯಕತ್ವದ ವ್ಯಕ್ತಿತ್ವವ ಅವರಲ್ಲಿದೆ. ಕಠಿಣ ಸಂದರ್ಭಗಳಲ್ಲಿಯೂ ಸಹ ಭಾವನೆಗಳಿಗೆ ಪ್ರಾಮುಖ್ಯತೆ ನೀಡದೆ ವಾಸ್ತವಿಕವಾಗಿ ಯೋಚಿಸುವ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಅವರು ಖಂಡಿತವಾಗಿಯೂ ಹೊಂದಿರುತ್ತಾರೆ. ಅವರು ಯಾರಿಗೂ ಅಥವಾ ಯಾವುದಕ್ಕೂ ಹೆದರುವುದಿಲ್ಲ. ಏಕೆಂದರೆ, ಅವರ ಸಂಪೂರ್ಣ ಚಿಂತನೆಯು ಅವರು ಅಂದುಕೊಂಡಿದ್ದನ್ನು ಸಾಧಿಸುವತ್ತ ಕೇಂದ್ರೀಕೃತವಾಗಿರುತ್ತದೆ. ಒಬ್ಬ ಮಹಾನ್ ನಾಯಕನಾಗಲು ಅವರಿಗೆ ಎಲ್ಲಾ ಗುಣಗಳಿವೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.