ಅವಳು ನನ್ನ ಲೇಡಿ ಲಕ್: ಸೋಭಿತಾ ಧೂಲಿಪಾಲ ಬಗ್ಗೆ ಮನಬಿಚ್ಚಿ ಮಾತನಾಡಿದ ನಾಗ ಚೈತನ್ಯ! Naga Chaitanya

ಸೋಭಿತಾ ನನ್ನ ಲೇಡಿ ಲಕ್​ ಎಂದ ನಾಗ ಚೈತನ್ಯ
ಸೋಭಿತಾ ನನ್ನ ಲೇಡಿ ಲಕ್​ ಎಂದ ನಾಗ ಚೈತನ್ಯ
Published on

ಪ್ರಮುಖ ಮುಖ್ಯಾಂಶಗಳು

  • ಅವಳು ನನ್ನ ಜೀವನದಲ್ಲಿ ಬಂದ ಮೇಲೆ ಬದುಕು ಬದಲಾಗಿದೆ
  • ಸೋಭಿತಾ ನನ್ನ ಲೇಡಿ ಲಕ್​ ಎಂದ ನಾಗ ಚೈತನ್ಯ
  • ಹೆಂಡತಿ ಬಗ್ಗೆ ಮನಬಿಚ್ಚಿ ಮಾತನಾಡಿದ ನಾಚೆ
ಹೈದರಾಬಾದ್: ನಟ ನಾಗ ಚೈತನ್ಯ (Naga Chaitanya) ಅವರ ವೃತ್ತಿಜೀವನದಲ್ಲಿ ಸದ್ಯ ಅಚ್ಚರಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತಿವೆ. ಒಂದೆಡೆ ಥಂಡೇಲ್ ಸಿನಿಮಾ ನೀಡಿದ ಬೃಹತ್ ಯಶಸ್ಸು, ಮತ್ತೊಂದೆಡೆ ಅತ್ಯುತ್ತಮ ನಟ ಪ್ರಶಸ್ತಿಯ ಗೌರವ ಹೀಗೆ ನಾಗ ಚೈತನ್ಯ ಅವರ ವೃತ್ತಿಜೀವನ ಈಗ ಯಶಸ್ಸಿನ ಉತ್ತುಂಗದಲ್ಲಿದೆ. ಆದರೆ, ಈ ಎಲ್ಲಾ ಯಶಸ್ಸಿಗೆ ಕಾರಣ ಯಾರೆಂದು ನಟನನ್ನು ಕೇಳಿದರೆ ಅವರು ಹೇಳಿದ ಹೆಸರು ಎಲ್ಲರ ನಿದ್ದೆಗೆಡಿಸಿದೆ ಎಂದರ ಸುಳ್ಳಲ್ಲ

ಲೇಡಿ ಲಕ್ ಸೋಭಿತಾ!

2024ರಲ್ಲಿ ಸೋಭಿತಾ ಧೂಲಿಪಾಲ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ನಂತರ, ನಾಗ ಚೈತನ್ಯ ಅವರ ನಸೀಬೇ ಬದಲಾದಂತಿದೆ. ಥಂಡೇಲ್ ಸಿನಿಮಾವು ಚೈತನ್ಯ ಅವರ ವೃತ್ತಿಜೀವನದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದ್ದು, ವಿಶ್ವಾದ್ಯಂತ 100 ಕೋಟಿ ರೂ.ಗಳ ಗಡಿ ದಾಟಿದೆ.
ಈ ಯಶಸ್ಸಿನ ಬಗ್ಗೆ ಮಾತನಾಡುತ್ತಾ, ಮನೆಯಲ್ಲಿನ ಶಾಂತಿ ಮತ್ತು ಪಾಸಿಟಿವ್ ಎನರ್ಜಿ ನಿಮ್ಮ ವೃತ್ತಿಪರ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಸೋಭಿತಾ ನನ್ನ ಜೀವನಕ್ಕೆ ಬಂದ ಮೇಲೆ ಆ ಶಕ್ತಿ ದ್ವಿಗುಣಗೊಂಡಿದೆ. ಖಂಡಿತ, ನನ್ನ ಯಶಸ್ಸಿನಲ್ಲಿ ಅವಳ ಪಾತ್ರವಿದೆ ಎಂದು ಚೈತನ್ಯ ಒಪ್ಪಿಕೊಂಡಿದ್ದಾರೆ.

ಸಿನಿಮಾ ಚರ್ಚೆಯೇ ನಮ್ಮ ನಿತ್ಯದ ಕೆಲಸ

ನಾಗ ಚೈತನ್ಯ ಮತ್ತು ಸೋಭಿತಾ ಜೋಡಿ ಕೇವಲ ವೈಯಕ್ತಿಕ ಜೀವನದ ಬಗ್ಗೆ ಮಾತ್ರವಲ್ಲ, ಸಿನಿಮಾ ಪ್ರಪಂಚದ ಬಗ್ಗೆಯೂ ಸದಾ ಚರ್ಚಿಸುತ್ತಾರಂತೆ. ನಾವು ಸಿನಿಮಾ ವಿಷಯಗಳ ಬಗ್ಗೆ ತುಂಬಾನೇ ಕ್ಯೂರಿಯಸ್. ಯಾವ ಸ್ಕ್ರಿಪ್ಟ್ ಚೆನ್ನಾಗಿದೆ? ಇಂಡಸ್ಟ್ರಿಯಲ್ಲಿ ಏನು ನಡೆಯುತ್ತಿದೆ? ಕಥೆಗಳ ಆಯ್ಕೆ ಹೇಗಿರಬೇಕು? ಎಂಬೆಲ್ಲಾ ವಿಷಯಗಳನ್ನು ನಾವು ಸದಾ ಚರ್ಚಿಸುತ್ತೇವೆ. ಇದು ನಮಗೆ ಕೆಲಸದ ಮೇಲಿನ ಪ್ರೀತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಮುಂದೊಂದು ದಿನ ಇಬ್ಬರೂ ಒಟ್ಟಿಗೆ ಸಿನಿಮಾ ಮಾಡುವ ಆಲೋಚನೆಯೂ ಇದೆ ಎಂದು ನಾಗ ಚೈತನ್ಯ ತಿಳಿಸಿದ್ದಾರೆ.

ಥಂಡೇಲ್ ಗೆಲುವು ವಿಶೇಷವೇಕೆ?

ತೆಲಂಗಾಣ ಸರ್ಕಾರ ನೀಡುವ ಗದ್ದರ್ ತೆಲಂಗಾಣ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿರುವುದು ಚೈತನ್ಯ ಅವರ ಪಾಲಿಗೆ ಬಹಳ ಸ್ಪೆಷಲ್. ಥಂಡೇಲ್ ಕೇವಲ ಒಂದು ಸಿನಿಮಾ ಅಲ್ಲ, ಇದು ಆಂಧ್ರದ ಮೀನುಗಾರರ ನೈಜ ಬದುಕು. ಅವರ ಕಷ್ಟ-ಸುಖ, ಸಾಹಸಗಳನ್ನು ತೆರೆಮೇಲೆ ತರಲು ನಾನು ಅಲ್ಲಿನ ಜನರೊಂದಿಗೆ ಸಾಕಷ್ಟು ಸಮಯ ಕಳೆದಿದ್ದೆ. ಆ ಪಾತ್ರದಲ್ಲಿ ಜೀವಿಸುವುದು ನನಗೆ ದೊಡ್ಡ ಸವಾಲಾಗಿತ್ತು. ಆ ಕಷ್ಟಕ್ಕೆ ಈಗ ಸರ್ಕಾರದಿಂದ ಮನ್ನಣೆ ಸಿಕ್ಕಿರುವುದು ನನಗೆ ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ ಎಂದು ಅವರು ಭಾವುಕರಾಗಿ ನುಡಿದಿದ್ದಾರೆ.

ಮುಂದೇನು?

ನಿಶ್ಚಿತಾರ್ಥ ಮತ್ತು ಮದುವೆಯ ನಂತರ ನಾಗ ಚೈತನ್ಯ ಅವರ ಕರಿಯರ್ ಗ್ರಾಫ್ ಏರುಗತಿಯಲ್ಲಿದೆ. ಸೋಭಿತಾ ಜೊತೆಗಿನ ಹೊಸ ಬಾಳು ಮತ್ತು ವೃತ್ತಿಜೀವನದ ಸಕ್ಸಸ್​ನ್ನು ಅವರು ಅದ್ಭುತವಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಇಬ್ಬರೂ ಸದಾ ಪರಸ್ಪರ ಬೆಂಬಲವಾಗಿ ನಿಲ್ಲುತ್ತಿರುವುದು ಅಭಿಮಾನಿಗಳಿಗೆ ಕೂಡ ಖುಷಿ ನೀಡಿದೆ.
ಒಟ್ಟಿನಲ್ಲಿ, ಸೋಭಿತಾ ಅವರ ಆಗಮನ ನಾಗ ಚೈತನ್ಯ ಅವರ ಪಾಲಿಗೆ ಅದೃಷ್ಟದ ಹಾದಿಯನ್ನೇ ತೆರೆದಿದೆ ಎನ್ನಬಹುದು. ಈಗ ಚೈತನ್ಯ ಮುಂದಿನ ಸಿನಿಮಾಗಳಲ್ಲಿ ಯಾವ ಮಟ್ಟದ ಮ್ಯಾಜಿಕ್ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ,(ಎಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net