ಮೂತ್ರ ವಿಸರ್ಜನೆ ಮುಗಿಸಿದ ಆ ವ್ಯಾಪಾರಿ, ಕನಿಷ್ಠ ತನ್ನ ಕೈಗಳನ್ನೂ ತೊಳೆಯದೆ ನೇರವಾಗಿ ತನ್ನ ಪಾಪ್‌ಕಾರ್ನ್ ಅಂಗಡಿಗೆ ಹಿಂತಿರುಗುತ್ತಾನೆ. ಅಷ್ಟೇ ಅಲ್ಲದೆ, ಅದೇ ಕೈಗಳಿಂದ ಪಾಪ್ಕಾರ್ನ್ನ್ನು ಪ್ಯಾಕೆಟ್‌ಗಳಿಗೆ ತುಂಬಿಸಿ ಗ್ರಾಹಕರಿಗೆ ನೀಡಲು ಶುರು ಮಾಡುತ್ತಾನೆ. ಈ ದೃಶ್ಯವನ್ನು ವಿವರಿಸಿರುವ ದಾಸ್, ಅವನು ಕೈ ತೊಳೆಯಬಹುದು ಎಂದು ನಾನು ಕಾಯುತ್ತಿದ್ದೆ, ಆದರೆ ಅವನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲೇ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.