ಒಂದು ಕೆಜಿ ಸೇಬಿನ ಬೆಲೆ ಎಷ್ಟು? ನಟಿ ರಾಶಿ ಖನ್ನಾ ನೀಡಿದ ಉತ್ತರ ಕೇಳಿ ಹೌಹಾರಿದ ನೆಟ್ಟಿಗರು! Raashii Khanna

ನಟಿ ರಾಶಿ ಖನ್ನಾ
ನಟಿ ರಾಶಿ ಖನ್ನಾ
Published on

ಪ್ರಮುಖ ಮುಖ್ಯಾಂಶಗಳು

  • ಸಿನಿಮಾ ನಟ-ನಟಿಯರು ಆದಷ್ಟು ಸಾರ್ವಜನಿಕ ಜೀವನದಿಂದ ದೂರ ಇರಲು ಇಚ್ಛಿಸುತ್ತಾರೆ
  • ಹೊರಗಿನ ಪ್ರಪಂಚದೊಂದಿಗೆ ಅಷ್ಟೊಂದು ಸಂಪರ್ಕ ಇರುವುದಿಲ್ಲ
  • ಕಲಾವಿದರಿಗೆ ದೈನಂದಿನ ಜೀವನದ ಆಗು-ಹೋಗುಗಳು ಅಷ್ಟಾಗಿ ತಿಳಿದಿರುವುದಿಲ್ಲ
  • ಬಹುಭಾಷಾ ನಟಿ ರಾಶಿ ಖನ್ನಾ ವಿಚಾರದಲ್ಲೂ ಇದು ಅಕ್ಷರಶಃ ನಿಜವೆಂದು ತೋರುತ್ತದೆ
Raashii Khanna : ಸಿನಿಮಾ ನಟ-ನಟಿಯರು ಐಷಾರಾಮಿ ಜೀವನ ನಡೆಸುತ್ತಾರೆ. ಆದಷ್ಟು ಸಾರ್ವಜನಿಕ ಜೀವನದಿಂದ ದೂರ ಇರಲು ಇಚ್ಛಿಸುತ್ತಾರೆ. ಹೊರಗಿನ ಪ್ರಪಂಚದೊಂದಿಗೆ ಅಷ್ಟೊಂದು ಸಂಪರ್ಕ ಇರುವುದಿಲ್ಲ ಮತ್ತು ಜನರೊಂದಿಗೆ ಬೆರೆಯುವುದಿಲ್ಲ. ಏಕೆಂದರೆ, ಸಾರ್ವಜನಿಕವಾಗಿ ಬಂದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಸಿನಿಮಾದಲ್ಲೇ ಮುಳುಗಿ ಹೋಗುವ ಕಲಾವಿದರಿಗೆ ದೈನಂದಿನ ಜೀವನದ ಆಗು-ಹೋಗುಗಳು ಅಷ್ಟಾಗಿ ತಿಳಿದಿರುವುದಿಲ್ಲ. ಬಹುಭಾಷಾ ನಟಿ ರಾಶಿ ಖನ್ನಾ ವಿಚಾರದಲ್ಲೂ ಇದು ಅಕ್ಷರಶಃ ನಿಜವೆಂದು ತೋರುತ್ತದೆ.
ನಿಯಮಿತವಾಗಿ ಜಿಮ್‌ಗೆ ಹೋಗಿ ಡಯಟ್ ಮಾಡುವ ನಟಿಯರಿಗೆ ಹಣ್ಣುಗಳ ಬೆಲೆ ಚೆನ್ನಾಗಿ ತಿಳಿದಿರುತ್ತದೆ ಎಂದು ನಾವು ಭಾವಿಸುತ್ತೇವೆ. ಆದರೆ, ರಾಶಿ ವಿಚಾರದಲ್ಲಿ ಇದು ಉಲ್ಟಾ. ಆಹಾರ ಪದಾರ್ಥಗಳ ಮಾರುಕಟ್ಟೆಯ ಬೆಲೆಗಳ ಬಗ್ಗೆ ಆಕೆಗೆ ಜ್ಞಾನವೇ ಇಲ್ಲ. ಅದರಲ್ಲೂ ಸೇಬು ಹಣ್ಣಿನ ಕುರಿತಾದ ಪ್ರಶ್ನೆಗೆ ಆಕೆ ಕೊಟ್ಟ ಉತ್ತರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಹುಬ್ಬೇರಿಸಿದೆ.
ರಾಶಿಯವರು ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಕೆಗೆ ಸೇಬಿನ ಬಗ್ಗೆ ಒಂದು ಪ್ರಶ್ನೆಯನ್ನು ಕೇಳಲಾಯಿತು. ಅದೇನೆಂದರೆ, ಮಾರುಕಟ್ಟೆಯಲ್ಲಿ ಪ್ರಸ್ತುತ 1 ಕೆಜಿ ಸೇಬಿನ ಬೆಲೆ ಎಷ್ಟಿರಬಹುದು ಎಂದು ಪ್ರಶ್ನೆ ಮಾಡಲಾಯಿತು. ಇದಕ್ಕೆ ತುಂಬಾ ಮುಗ್ಧವಾಗಿ ಉತ್ತರ ನೀಡಿದ ರಾಶಿ, ಬಹುಶಃ 45 ರೂಪಾಯಿ ಇರಬಹುದು ಎಂದರು. ಈ ಉತ್ತರವನ್ನು ಕೇಳಿ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ, ಪ್ರಸ್ತುತ ಮಾರುಕಟ್ಟೆಯಲ್ಲಿ ಗುಣಮಟ್ಟದ ಸೇಬಿನ ಬೆಲೆ ಕೆಜಿಗೆ 150 ರಿಂದ 200 ರೂ.ಗಳವರೆಗೆ ಇದೆ. ಇದೀಗ ರಾಶಿ ಹೇಳಿದ ಬೆಲೆಯನ್ನು ನೋಡಿದರೆ, ರಾಶಿ ಅವರು ಇನ್ನೂ ಯಾವ ಕಾಲದಲ್ಲಿದ್ದಾರೆ ಎಂಬ ಪ್ರಶ್ನೆ ಮೂಡುತ್ತದೆ.
ಅಂದಹಾಗೆ, ರಾಶಿ ಖನ್ನಾ ಅವರು ಈ ಹೇಳಿಕೆ ನೀಡಿದ ಬೆನ್ನಲ್ಲೇ ವಿಡಿಯೋ ತುಣುಕೊಂದು ಸಿಕ್ಕಾಪಟ್ಟೆ ವೈರಲ್​ ಆಗುತ್ತಿದ್ದು, ಅನೇಕ ನೆಟ್ಟಿಗರು ರಾಶಿಯನ್ನು ಟ್ರೋಲ್​ ಮಾಡುತ್ತಿದ್ದಾರೆ. ರಾಶಿಯವರೇ ಕೇವಲ 45 ರೂಪಾಯಿಗೆ ಯಾವ ಮಾರುಕಟ್ಟೆಯಲ್ಲಿ ಸೇಬು ಸಿಗುತ್ತದೆ ಹೇಳಿ, ನಾವು ಕೂಡ ಹೋಗಿ ಖರೀದಿಸುತ್ತೇವೆ ಎಂದು ಮೀಮ್ಸ್​ ಹಂಚಿಕೊಳ್ಳುತ್ತಿದ್ದಾರೆ. ದಿನನಿತ್ಯದ ದಿನಸಿ ವಸ್ತುಗಳ ಬೆಲೆಯಿಂದ ಸೆಲೆಬ್ರಿಟಿಗಳು ಎಷ್ಟು ದೂರ ಇದ್ದಾರೆ ಎಂಬುದಕ್ಕೆ ಇದು ಪುರಾವೆ ಎಂದು ಕೆಲವರು ಕಾಮೆಂಟ್​ ಮಾಡುತ್ತಿದ್ದಾರೆ. ಆಕೆ ಸ್ವತಃ ಶಾಪಿಂಗ್‌ಗೆ ಹೋಗದ ಕಾರಣ ಆಕೆಗೆ ಆ ಬೆಲೆಗಳ ಬಗ್ಗೆ ತಿಳಿದಿಲ್ಲದಿರಬಹುದು ಎಂದು ಇನ್ನೂ ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವಾಸ್ತವವಾಗಿ, ಸಿನಿಮಾ ಚಿತ್ರೀಕರಣ ಮತ್ತು ಕ್ಯಾರವಾನ್‌ಗಳ ನಡುವೆ ತಮ್ಮ ಸಮಯವನ್ನು ಕಳೆಯುವ ತಾರೆಯರಿಗೆ ಸಾಮಾನ್ಯ ಜನರ ಕಷ್ಟಗಳು ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯ ಬಗ್ಗೆ ಹೆಚ್ಚಿನ ತಿಳುವಳಿಕೆ ಇರುವುದಿಲ್ಲ. ರಾಶಿ ಖನ್ನಾ ಮಾಡಿದ ಈ ಕಾಮೆಂಟ್ ಕೇವಲ ಒಂದು ಸಣ್ಣ ತಪ್ಪಾಗಿರಬಹುದು ಆದರೆ, ಇದು ಸಾಮಾನ್ಯ ಜನರ ಜೀವನ ಮಟ್ಟ ಮತ್ತು ಸೆಲೆಬ್ರಿಟಿಗಳ ಜೀವನಶೈಲಿಯ ನಡುವಿನ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ. ಆದಾಗ್ಯೂ, ಉತ್ತಮ ನಟಿಯಾಗಿ ಖ್ಯಾತಿ ಗಳಿಸಿರುವ ರಾಶಿ, ಇಂತಗ ಸಣ್ಣ ವಿಷಯಗಳಲ್ಲಿಯೂ ಸಹ ಸ್ವಲ್ಪ ಅಪ್​ಡೇಟ್​ ಆಗಿರಬೇಕು ಎಂದು ಅಭಿಮಾನಿಗಳು ಸಲಹೆ ನೀಡಿದ್ದಾರೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ, ರಾಶಿ ಖನ್ನಾ ಅವರಿಗೆ ಪ್ರಸ್ತುತ ಬಾಲಿವುಡ್‌ನಲ್ಲಿ ಸರಣಿ ಅವಕಾಶಗಳು ಸಿಗುತ್ತಿವೆ. ಮತ್ತೊಂದೆಡೆ, ಪವನ್ ಕಲ್ಯಾಣ್ ನಾಯಕನಾಗಿ ನಟಿಸಿರುವ 'ಉಸ್ತಾದ್ ಭಗತ್ ಸಿಂಗ್' ಚಿತ್ರದಲ್ಲಿಯೂ ಅವಕಾಶ ಸಿಕ್ಕಿದ್ದು, ಈ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net