ಅಭಿ​, ಬೂಮ್ರಾ ಅಲ್ಲವೇ ಅಲ್ಲ... ರೋಹಿತ್​ ಪ್ರಕಾರ ಟಿ20 ವಿಶ್ವಕಪ್​ಗೆ ಭಾರತದ ಅಸ್ತ್ರ ಈ ಇಬ್ಬರು ಆಟಗಾರರು! Rohit Sharma

ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ, ಯುವ ಆಟಗಾರ ಅಭಿಷೇಕ್​ ಶರ್ಮಾ, ಹಿರಿಯ ಆಟಗಾರ ಜಸ್​​ಪ್ರೀತ್​ ಬುಮ್ರಾ
ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ, ಯುವ ಆಟಗಾರ ಅಭಿಷೇಕ್​ ಶರ್ಮಾ, ಹಿರಿಯ ಆಟಗಾರ ಜಸ್​​ಪ್ರೀತ್​ ಬುಮ್ರಾ
Published on

ಪ್ರಮುಖ ಮುಖ್ಯಾಂಶಗಳು

  • ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಟೀಮ್​ ಇಂಡಿಯಾದ ಬಗ್ಗೆ ರೋಹಿತ್ ಶರ್ಮ ಅಚ್ಚರಿಯ ಹೇಳಿಕೆ
  • ತಂಡದಲ್ಲಿ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದ ಹಿಟ್​​ಮ್ಯಾನ್​
  • ರೋಹಿತ್​ ಪ್ರಕಾರ ಈ ಇಬ್ಬರು ಆಟಗಾರರು ತಂಡಕ್ಕೆ ಸ್ಥಿರತೆ ಹಾಗೂ ಸಮತೋಲವನ್ನು ತಂದುಕೊಡಲಿದ್ದಾರಂತೆ
ನವದೆಹಲಿ: ಫೆಬ್ರವರಿ 7ರಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾದ ಟೀಮ್​ ಇಂಡಿಯಾದ ಬಗ್ಗೆ ಮಾಜಿ ನಾಯಕ ಹಾಗೂ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮ ( Rohit Sharma ) ಅಚ್ಚರಿಯ ಹೇಳಿಕೆಗಳನ್ನು ನೀಡಿದ್ದಾರೆ. ತಂಡದಲ್ಲಿ ಈ ಇಬ್ಬರು ಆಟಗಾರರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹಿಟ್​​ಮ್ಯಾನ್​ ಹೇಳಿದ್ದಾರೆ.
ರೋಹಿತ್​ ಪ್ರಕಾರ, ಅರ್ಷದೀಪ್​ ಸಿಂಗ್​ ಮತ್ತು ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಟಿ20 ವಿಶ್ವಕಪ್​ನಲ್ಲಿ ಭಾರತದ ಪಾಲಿಗೆ ಪ್ರಮುಖ ಆಟಗಾರರಾಗಲಿದ್ದಾರೆ. ಹೊಸ ಚೆಂಡಿನಲ್ಲಿ ಮತ್ತು ಡೆತ್​ ಓವರ್​ನಲ್ಲಿ ಅರ್ಷ್​ದೀಪ್​, ಸಖತ್​ ಆಗಿ ಬೌಲಿಂಗ್​ ಮಾಡುತ್ತಾರೆ. ನಿರ್ಣಾಯಕ ಹಂತದಲ್ಲಿ ಅರ್ಷದೀಪ್​ ವಿಕೆಟ್​ ಕಬಳಿಸುತ್ತಾರೆ. ಅರ್ಷದೀಪ್​ ಅವರ ಅತಿದೊಡ್ಡ ಬಲ ಯಾವುದೆಂದರೆ ಹೊಸ ಚೆಂಡಿನಲ್ಲಿ ಸ್ವಿಂಗ್ ಮಾಡುತ್ತಾರೆ ಮತ್ತು ಬೇಗ ವಿಕೆಟ್​ಗಳನ್ನು ಪಡೆಯುತ್ತಾರೆ. ಅರ್ಷದೀಪ್​ ಮುಖ್ಯವಾಗಿ ಹೊಸ ಚೆಂಡು ಮತ್ತು ಡೆತ್​ ಓವರ್​ನಲ್ಲಿ ಟೀಮ್​ ಇಂಡಿಯಾದ ಶಕ್ತಿಯಾಗಿದ್ದಾರೆ ಎಂದು ಜಿಯೋಹಾಟ್​ಸ್ಟಾರ್​ ಜತೆ ಮಾತನಾಡುವಾಗ ರೋಹಿತ್​ ಹೇಳಿದರು.
ಇದೇ ಸಮಯದಲ್ಲಿ ಹಾರ್ದಿಕ್​ ಪಾಂಡ್ಯ ಬಗ್ಗೆಯೂ ರೋಹಿತ್​ ಮಾತನಾಡಿದರು. ಪಾಂಡ್ಯ ಅವರು ಓರ್ವ ಫಿನಿಶರ್​ ಆಗಿ ಮತ್ತು ಬಹುಹಂತದ ಬೌಲರ್​ ಆಗಿ ಟೀಮ್​ ಇಂಡಿಯಾಗೆ ಒಂದು ಉತ್ತಮ ಸಮತೋಲವನ್ನು ತಂದುಕೊಡುತ್ತಾರೆ. ಅವರ ಡಬಲ್​ ರೋಲ್​ ತಂಡಕ್ಕೆ ಒಂದು ಶಕ್ತಿಯಾಗಿದೆ. ಆತ ತಂಡದಲ್ಲಿ ಇದ್ದಾಗಲೆಲ್ಲ ಆತನ ಪಾತ್ರ ದೊಡ್ಡದಿರುತ್ತದೆ. ಆತನ ಬ್ಯಾಟಿಂಗ್​ ಮತ್ತು ಬೌಲಿಂಗ್​ನಲ್ಲಿ ಸ್ಥಿರತೆ ಇದೆ. ತಂಡ ಇಕ್ಕಟ್ಟಿನ ಸ್ಥಿತಿಯಲ್ಲಿ ಸಿಲುಕೊಂಡ ಸಮಯದಲ್ಲಿ ಆತನ ಬ್ಯಾಟಿಂಗ್​ ಮಹತ್ವದ್ದಾಗಿರುತ್ತದೆ. 15 ರಿಂದ 16 ಓವರ್​ನಲ್ಲಿ ತಂಡವು 160 ರನ್​ ಗಳಿಸಿದಾಗ, ಹಾರ್ದಿಕ್​ ಪಾಂಡ್ಯ ಕ್ರೀಸ್​ನಲ್ಲಿದ್ದರೆ ತಂಡವು ಖಂಡಿತವಾಗಿಯೂ 210 ರಿಂದ 220 ರನ್​ ಕಲೆಹಾಕುತ್ತದೆ. ಇನ್ನಿಂಗ್ಸ್​ ಅನ್ನು ಬಿಲ್ಡ್​ ಮಾಡುವ ಸಾಮರ್ಥ್ಯ ಹಾರ್ದಿಕ್​ ಅವರಲ್ಲಿದೆ. ಹೀಗಾಗಿ, ಪಾಂಡ್ಯ ಮತ್ತು ಅರ್ಷದೀಪ್​ ಸಿಂಗ್​, ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾದ ಪಾಲಿಗೆ ಮುಖ್ಯವಾದ ಅಸ್ತ್ರವಾಗಲಿದ್ದಾರೆ ಎಂದು ರೋಹಿತ್​ ಹೇಳಿದ್ದಾರೆ.
ಅಂದಹಾಗೆ, ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ 15 ಸದಸ್ಯರ ತಂಡವನ್ನು ಡಿಸೆಂಬರ್ 20, 2025ರಂದು ಘೋಷಿಸಲಾಯಿತು. ಭಾರತ ಈಗಾಗಲೇ ಡಿಫೆಂಡಿಂಗ್ ಚಾಂಪಿಯನ್ ಆಗಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಮತ್ತೊಮ್ಮೆ ಕಪ್​ ಗೆಲ್ಲಲು ಯುವ ತಂಡ ಸಜ್ಜಾಗಿದೆ. ಈ ಮೆಗಾ ಟೂರ್ನಿಯನ್ನು ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸುತ್ತಿದೆ.

ಟೀಮ್ ಇಂಡಿಯಾದ 15 ಸದಸ್ಯರ ತಂಡ

ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಶಿವಂ ದುಬೆ, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ಹರ್ಷಿತ್ ರಾಣಾ, ವರುಣ್ ಚಕ್ರವರ್ತಿ, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್ ಹಾಗೂ ರಿಂಕು ಸಿಂಗ್, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net