ಆಕೆಯ ಹೆಸರು ಸೋಫಿಯಾ ರೈನ್. 18 ವರ್ಷ ತುಂಬಿದಾಗಲೇ ತನ್ನ ವೃತ್ತಿ ಜೀವನದ ಮೇಲೆ ಈಕೆ ಗಮನ ಹರಿಸಿದಳು. ಅದರಲ್ಲೂ ಸುಲಭವಾಗಿ ಹಣ ಗಳಿಸುವ ಮಾರ್ಗಗಳನ್ನು ಹುಡುಕಿಕೊಂಡಳು. ಆಗ ಅವಳಿಗೆ 'ಓನ್ಲಿಫ್ಯಾನ್ಸ್' ಅಕೌಂಟ್ ಬಗ್ಗೆ ತಿಳಿಯಿತು. ತಕ್ಷಣ ಆಕೆ ಒಂದು ಅಕೌಂಟ್ ತೆರೆದಳು. ಆರಂಭದಲ್ಲಿ, ಆ ಅಕೌಂಟ್ನಲ್ಲಿ ತನ್ನ ಮೇಕಪ್, ವ್ಯಾಯಾಮ, ಡ್ರೆಸ್ಸಿಂಗ್ ಮತ್ತು ಮಾಡೆಲಿಂಗ್‌ನಂತಹ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಳು. ತನ್ನ ಸಾಂಪ್ರದಾಯಿಕ ಮತ್ತು ಮಾದಕ ಶೈಲಿಯ ಫೋಟೋ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಳು. ಆದರೆ, ಆ ಅಕೌಂಟ್ಗೆ ಹೆಚ್ಚು ಸಬ್ಸ್ಕ್ರೈಬರ್ಸ್ ಬರಲಿಲ್ಲ. ಇದರಿಂದ, ಆಕೆ ಪ್ಲಾನ್ ಬಿ ಅನ್ನು ಕಾರ್ಯಗತಗೊಳಿಸಿದಳು.