ಯಾರಿಗೂ ಹೇಳಲೂ ಇಷ್ಟವಿರಲಿಲ್ಲ, ಆದರೆ... ಶೂಟಿಂಗ್​ ವೇಳೆ ನಟಿಗೆ ಗಂಭೀರ ಗಾಯ; ಕೊನೆಗೂ ಮೌನ ಮುರಿದ ನ್ಯಾಷನಲ್​ ಕ್ರಶ್​! Rashmika Mandanna on Waist Injury

ಆರೋಗ್ಯ ಸ್ಥಿತಿ ಬಗ್ಗೆ ಮೌನ ಮುರಿದ ಮಂದಣ್ಣ
ಆರೋಗ್ಯ ಸ್ಥಿತಿ ಬಗ್ಗೆ ಮೌನ ಮುರಿದ ಮಂದಣ್ಣ
Published on

ಪ್ರಮುಖ ಮುಖ್ಯಾಂಶಗಳು

  • 'ಮೈಸಾ' ಚಿತ್ರದ ಶೂಟಿಂಗ್ ವೇಳೆ ಸೊಂಟದ ಸ್ನಾಯು ಗಾಯಗೊಂಡ ನಟಿ
  • ಆರೋಗ್ಯ ಸ್ಥಿತಿ ಬಗ್ಗೆ ಮೌನ ಮುರಿದ ಮಂದಣ್ಣ
  • ದೇಹವನ್ನು ಯಂತ್ರದಂತೆ ಬಳಸಬೇಡಿ ನ್ಯಾಷನಲ್​ ಕ್ರಶ್​ ಸಲಹೆ
ಹೈದರಾಬಾದ್​: ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಇತ್ತೀಚೆಗೆ 'ಮೈಸಾ' ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಸೊಂಟದ ಭಾಗದಲ್ಲಿ ನೋವನ್ನು ಅನುಭವಿಸುತ್ತಿದ್ದಾರೆಂದು ವರದಿಯಾಗಿತ್ತು.
ಈಗ ಈ ಘಟನೆ ಬಗ್ಗೆ ಮೌನ ಮುರಿದಿರುವ ಮಂದಣ್ಣ (Rashmika Mandanna on Waist Injury), ಇದು ತಮ್ಮ ಜೀವನದಲ್ಲಿ ಸತತವಾಗಿ ಸಂಭವಿಸುತ್ತಿರುವ ಮೂರನೇ ಗಾಯ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಅಸಲಿಗೆ ಆಗಿದ್ದೇನು?

ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿರುವ ರಶ್ಮಿಕಾ, ಹಾಯ್ ಗಾಯ್ಸ್​! ಗಾಯಗಳು ತುಂಬಾ ಕೆಟ್ಟವು. ಯಾರಿಗೂ ಇದು ತಿಳಿಯಬಾರದು ಎಂದುಕೊಂಡಿದ್ದೆ, ಆದರೆ ಈಗ ನಿಮ್ಮ ಮುಂದೆ ಬಂದಿದ್ದೇನೆ. ಸ್ವಲ್ಪ ದಿನಗಳಿಂದ ಸೋಷಿಯಲ್ ಮೀಡಿಯಾದಿಂದ ದೂರವಿದ್ದಿದ್ದಕ್ಕೆ ಕ್ಷಮಿಸಿ ಎಂದು ಬರೆದುಕೊಂಡಿದ್ದಾರೆ.
'ಮೈಸಾ' ಚಿತ್ರದ ನೃತ್ಯ ಸಂಯೋಜನೆಯ ಶೂಟಿಂಗ್ ವೇಳೆ ಈ ಅವಘಡ ಸಂಭವಿಸಿದೆ. ನಾನು ನಟಿಸಿರುವ ಚಿತ್ರಗಳಲ್ಲೇ ಇದು ಅತ್ಯಂತ ಆಕ್ರಮಣಕಾರಿ ಹಾಗೂ ಕಷ್ಟವಾದ ಆಕ್ಷನ್ ಚಿತ್ರ ಎಂದು ರಶ್ಮಿಕಾ ಬಣ್ಣಿಸಿದ್ದಾರೆ. ತೀವ್ರವಾದ ನೃತ್ಯ ಮಾಡುವಾಗ ಬಲ ಸೊಂಟದ ಸ್ನಾಯುರಜ್ಜು (Tendon) ಸಂಪೂರ್ಣವಾಗಿ ಬೇರ್ಪಟ್ಟಿದೆ. ಕಾಲು ಸರಿಯಾಗಿ ಎತ್ತುವ ಮೊದಲು ಇದನ್ನು ಮತ್ತೆ ಜೋಡಿಸಬೇಕಿದೆ ಎಂದು ತಮ್ಮ ವೈದ್ಯಕೀಯ ಸ್ಥಿತಿಯನ್ನು ವಿವರಿಸಿದ್ದಾರೆ.

ಯಂತ್ರದಂತೆ ದೇಹವನ್ನು ಬಳಸಬಾರದು!

ತಮ್ಮ ನೋವಿನ ಬಗ್ಗೆ ಮಾತನಾಡುತ್ತಾ, ನಾವು ನಮ್ಮ ದೇಹವನ್ನು ಯಂತ್ರದಂತೆ ಪರಿಗಣಿಸಬಾರದು, ಅದು ಜೀವವಿರುವ ಮಾನವ ದೇಹ ಎಂಬುದನ್ನು ಮರೆಯಬಾರದು ಎಂದಿದ್ದಾರೆ. ಸೊಂಟವನ್ನು ಕಾಲಿಗೆ ಸಂಪರ್ಕಿಸುವ ನಾಲ್ಕು ಸ್ನಾಯುರಜ್ಜುಗಳ ಪೈಕಿ ಬಲ ಭಾಗದ ಒಂದು ಕಿತ್ತುಹೋಗಿದೆ ಎಂದು ತಿಳಿಸಿದ್ದಾರೆ. ಅದೃಷ್ಟವಶಾತ್ ನೋವು ಅಸಹನೀಯವಾಗಿಲ್ಲವಾದರೂ, ಇದು ತಾನಾಗಿಯೇ ತೆಗೆದುಕೊಂಡ ವಿರಾಮವಲ್ಲ, ಬಲವಂತದ ರಜೆಯಾಗಿದೆ ಎಂದಿದ್ದಾರೆ.

ವಿರಾಮದ ಸಮಯದಲ್ಲಿ ರಶ್ಮಿಕಾ ಮಾಡುವುದೇನು?

ಸಿನಿಮಾ ಶೂಟಿಂಗ್‌ಗಳಿಂದ ದೂರ ಉಳಿದು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿರುವ ರಶ್ಮಿಕಾ, ತಮ್ಮ ಸಮಯವನ್ನು ಒಗಟುಗಳನ್ನು (Puzzles) ಬಿಡಿಸುವುದರಲ್ಲಿ ಕಳೆಯುತ್ತಿದ್ದಾರೆ. ಇದರೊಂದಿಗೆ ಸೆಲ್ಫಿಗಳು, ಕುಕೀಸ್ ಚಿತ್ರಗಳು ಮತ್ತು ತಮ್ಮ ಪ್ರೀತಿಯ ಸಾಕು ನಾಯಿಗಳ ಜತೆಗೆ ಕಾಲ ಕಳೆಯುತ್ತಿರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ.
ತಮ್ಮ ನಿತ್ಯದ ವರ್ಕೌಟ್ ಮಿಸ್ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ನಟಿ, ನಾನು ಪ್ರತಿದಿನ ಜಿಮ್ ಮತ್ತು ರನ್ನಿಂಗ್ ಮಾಡುತ್ತಿದ್ದೆ. ಅಂತಿಮವಾಗಿ ಅಭಿಮಾನಿಗಳು ಯಾವುದೇ ಆತಂಕ ಪಡಬೇಡಿ ಎಂದು ಧೈರ್ಯ ತುಂಬಿರುವ ಅವರು, ಆರೋಗ್ಯದ ಹೆಚ್ಚಿನ ಅಪ್ಡೇಟ್ ಬೇಕಿದ್ದರೆ ಮುಂದೆ ತಿಳಿಸುವುದಾಗಿ ಹೇಳಿದ್ದಾರೆ.

ಮುಂದಿನ ಸಿನಿಮಾಗಳು


ವಿವಾಹದ ಬಳಿಕ ರಶ್ಮಿಕಾ ಮಂದಣ್ಣ ಅವರು ರವೀಂದ್ರ ಪುಲ್ಲೆ ನಿರ್ದೇಶನದ, ಗೊಂಡ್ ಬುಡಕಟ್ಟು ಜನಾಂಗದ ಹಿನ್ನೆಲೆಯ ಭಾವನಾತ್ಮಕ ಆಕ್ಷನ್ ಥ್ರಿಲ್ಲರ್ 'ಮೈಸಾ' ಚಿತ್ರದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರು. ಇದರ ಜೊತೆಗೆ ರಣಬಲಿ, ಬಹುನಿರೀಕ್ಷಿತ 'ಪುಷ್ಪ 3', 'ಅನಿಮಲ್ ಪಾರ್ಕ್' ಹಾಗೂ 'ರಾಕಾ' ಚಿತ್ರಗಳಲ್ಲೂ ನಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net