ನನಗೂ ಇದಕ್ಕೂ ಸಂಬಂಧವಿಲ್ಲ, ದಯವಿಟ್ಟು ಮೋಸ ಹೋದವರಿಗೆ ನ್ಯಾಯ ಕೊಡಿಸಿ: ಗಾಯಕಿ ಮಂಗ್ಲಿ ಮನವಿ! Singer Mangli

ನನಗೂ ಇದಕ್ಕೂ ಸಂಬಂಧವಿಲ್ಲ, ದಯವಿಟ್ಟು ಮೋಸ ಹೋದವರಿಗೆ ನ್ಯಾಯ ಕೊಡಿಸಿ: ಗಾಯಕಿ ಮಂಗ್ಲಿ ಮನವಿ! Singer Mangli
ನನಗೂ ಇದಕ್ಕೂ ಸಂಬಂಧವಿಲ್ಲ, ದಯವಿಟ್ಟು ಮೋಸ ಹೋದವರಿಗೆ ನ್ಯಾಯ ಕೊಡಿಸಿ: ಗಾಯಕಿ ಮಂಗ್ಲಿ ಮನವಿ! Singer Mangli
Published on

ಪ್ರಮುಖ ಮುಖ್ಯಾಂಶಗಳು

  • ತಮ್ಮ ಹೆಸರನ್ನು ಬಳಸಿಕೊಂಡ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಸುದ್ದಿ ನಿರಾಕರಿಸಿದ ಗಾಯಕಿ ಮಂಗ್ಲಿ
  • ಹಣಕಾಸು ಉದ್ಯಮಿಗಳೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ ಗಾಯಕಿ
  • ತಮಗೆ ಮತ್ತು ತಮ್ಮ ಕುಟುಂಬ ಸದಸ್ಯರಿಗೆ ಯಾವುದೇ ವೈಯಕ್ತಿಕ ವ್ಯವಹಾರಗಳ ಬಗ್ಗೆ ತಿಳಿದಿಲ್ಲ ಎಂದು ಸ್ಪಷ್ಟನೆ
Singer Mangli : ಮೈಕ್ರೋ ಫೈನಾನ್ಸ್ ನೆಪದಲ್ಲಿ ಕೆಲವರು ತಮ್ಮ ಹೆಸರನ್ನು ಬಳಸಿಕೊಂಡ ಹಣ ಸಂಗ್ರಹಿಸುತ್ತಿದ್ದಾರೆ ಎಂಬ ಸುದ್ದಿಯನ್ನು ಗಾಯಕಿ ಮಂಗ್ಲಿ ನಿರಾಕರಿಸಿದ್ದಾರೆ. ಹಣಕಾಸು ಉದ್ಯಮಿಗಳೊಂದಿಗೆ ತಮಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ವೃತ್ತಿಪರ ಕಾರ್ಯಕ್ರಮಕ್ಕೆ ಸಂಬಂಧಿಸಿದ ಆಹ್ವಾನ ವಿವರಗಳನ್ನು ಹೊರತುಪಡಿಸಿ, ತಮಗೆ ಮತ್ತು ತಮ್ಮ ಕುಟುಂಬ ಸದಸ್ಯರಿಗೆ ಯಾವುದೇ ವೈಯಕ್ತಿಕ ವ್ಯವಹಾರಗಳ ಬಗ್ಗೆ ತಿಳಿದಿಲ್ಲ ಎಂದಿದ್ದಾರೆ.
ತಮ್ಮ ಇನ್​ಸ್ಟಾಗ್ರಾಂನಲ್ಲಿ ಪತ್ರವೊಂದನ್ನು ಹಂಚಿಕೊಂಡಿರುವ ಮಂಗ್ಲಿ, ಮೈಕ್ರೋಫೈನಾನ್ಸ್ ಅಡಿಯಲ್ಲಿ ಕೆಲವರು ನನ್ನ ಹೆಸರಿನಲ್ಲಿ ಹಣ ಸಂಗ್ರಹಿಸಿದ್ದಾರೆ ಎಂಬ ಸುದ್ದಿಯನ್ನು ನಾನು ನಿರಾಕರಿಸುತ್ತೇನೆ. ಆ ಜನರೊಂದಿಗೆ ಅಥವಾ ಅವರಿಗೆ ಸಂಬಂಧಿಸಿದ ಹಣಕಾಸು ವ್ಯವಹಾರಗಳೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ. ನನ್ನ ವೃತ್ತಿಪರ ಕಾರ್ಯಕ್ರಮಗಳಿಗಾಗಿ ಅನೇಕ ಜನರು ಪ್ರತಿದಿನ ನನ್ನನ್ನು ಮತ್ತು ನನ್ನ ಸಹೋದರನನ್ನು ಸಂಪರ್ಕಿಸುತ್ತಾರೆ. ಆ ಕಾರ್ಯಕ್ರಮಕ್ಕೆ ಸಂಬಂಧಿಸಿದ ಆಹ್ವಾನ ವಿವರಗಳನ್ನು ಹೊರತುಪಡಿಸಿ, ಅವರ ವೈಯಕ್ತಿಕ ವ್ಯವಹಾರಗಳು ನನಗೆ ಅಥವಾ ನನ್ನ ಕುಟುಂಬ ಸದಸ್ಯರಿಗೆ ಸಂಬಂಧಿಸಿಲ್ಲ ಎಂದು ಮಂಗ್ಲಿ ಹೇಳಿದ್ದಾರೆ.
ನನ್ನ ಹೆಸರನ್ನು ಬಳಸಿಕೊಂಡು ಇಂತಹ ವಂಚನೆಯ ವಿಷಯಗಳಲ್ಲಿ ನನ್ನನ್ನು ಸಿಲುಕಿಸುವುದು ತುಂಬಾ ಅನ್ಯಾಯ. ಕೆಲವರು ತಮ್ಮ ಸ್ವಂತ ಲಾಭಕ್ಕಾಗಿ ನನ್ನ ವೈಯಕ್ತಿಕ ಹೆಸರು ಮತ್ತು ಖ್ಯಾತಿಯನ್ನು ಹಾಳು ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ಹಣಕಾಸು ವಿಚಾರಕ್ಕೆ ಸಂಬಂಧಿತ ವಿಡಿಯೋಗಳಿಗೂ ನನ್ನ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಂಗ್ಲಿ ಸ್ಪಷ್ಟನೆ ನೀಡಿದ್ದಾರೆ. 
ನನ್ನ ವೃತ್ತಿಪರ ಕಾರ್ಯಕ್ರಮಗಳನ್ನು ಹೊರತುಪಡಿಸಿ ನನಗೆ ಬೇರೆ ಯಾವುದೇ ವ್ಯವಹಾರವಿಲ್ಲ. ದಯವಿಟ್ಟು ನನ್ನ ಹೆಸರನ್ನು ಬಳಸಿಕೊಂಡು ಹಣ ಸಂಗ್ರಹಿಸುವ ಯಾರನ್ನೂ ನಂಬಬೇಡಿ. ಈ ರೀತಿ ವಂಚನೆಗೊಳಗಾದವರಿಗೆ ನ್ಯಾಯ ಒದಗಿಸಬೇಕೆಂದು ಪೊಲೀಸ್ ಇಲಾಖೆಯನ್ನು ವಿನಂತಿಸುತ್ತೇನೆ. ಎಂದು ಮಂಗ್ಲಿ ಹೇಳಿದ್ದಾರೆ.

ಯಾರು ಈ ಮಂಗ್ಲಿ?

ಮಂಗ್ಲಿ (ಸತ್ಯವತಿ ರಾಥೋಡ್) ಅವರು ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ನಿರೂಪಕಿ ಮತ್ತು ನಟಿ. ಮುಖ್ಯವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರು, ತಮ್ಮ ವಿಶಿಷ್ಟವಾದ ಜಾನಪದ ಶೈಲಿಯ ಧ್ವನಿಯಿಂದ ಜನಪ್ರಿಯತೆ ಗಳಿಸಿದ್ದಾರೆ. ಕನ್ನಡದಲ್ಲಿ 'ರಾಬರ್ಟ್' ಚಿತ್ರದ "ಕಣ್ಣೆ ಅದಿರಿಂದಿ" ಮತ್ತು 'ಪುಷ್ಪ' ಚಿತ್ರದ ಹಾಡುಗಳ ಮೂಲಕ ಕನ್ನಡಿಗರಿಗೆ ಬಹಳ ಹತ್ತಿರವಾದರು. ಗಾಯನದ ಜೊತೆಗೆ ಹಬ್ಬಗಳ ವಿಶೇಷ ಜಾನಪದ ಗೀತೆಗಳು ಮತ್ತು ಟಿವಿ ಕಾರ್ಯಕ್ರಮಗಳ ನಿರೂಪಣೆಯ ಮೂಲಕವೂ ಅವರು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net