ಇಬ್ಬರು ಪತ್ನಿಯರಿದ್ರೂ ಅಕ್ರಮ ಸಂಬಂಧ ಬೆಳೆಸಿ ದುರಂತ ಅಂತ್ಯ ಕಂಡ ಗ್ರಾಮದ ಮುಖ್ಯಸ್ಥ: 18 ಮಕ್ಕಳನ್ನು ಅಗಲಿದ ತಂದೆ! Extramarital affairs

ಇಬ್ಬರು ಪತ್ನಿಯರಿದ್ರೂ ಅಕ್ರಮ ಸಂಬಂಧ ಬೆಳೆಸಿ ದುರಂತ ಅಂತ್ಯ ಕಂಡ ಗ್ರಾಮದ ಮುಖ್ಯಸ್ಥ: 18 ಮಕ್ಕಳನ್ನು ಅಗಲಿದ ತಂದೆ! Extramarital affairs
ಇಬ್ಬರು ಪತ್ನಿಯರಿದ್ರೂ ಅಕ್ರಮ ಸಂಬಂಧ ಬೆಳೆಸಿ ದುರಂತ ಅಂತ್ಯ ಕಂಡ ಗ್ರಾಮದ ಮುಖ್ಯಸ್ಥ: 18 ಮಕ್ಕಳನ್ನು ಅಗಲಿದ ತಂದೆ! Extramarital affairs
Published on

ಪ್ರಮುಖ ಮುಖ್ಯಾಂಶಗಳು

  • ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಉತ್ತರ ಪ್ರದೇಶದ ಸುಮೇರ್​ಪುರ್​ ಗ್ರಾಮದ ಮಾಜಿ ಅಧ್ಯಕ್ಷ ಶವವಾಗಿ ಪತ್ತೆ
  • ಕಾಲುವೆ ಒಂದರಲ್ಲಿ ಮುಸ್ತಾಕ್​ ಗುಲ್ಶನ್​ ಅಲಿಯಾಸ್​ ಮುನ್ನಾ ಎಂಬಾತ ಮೃತದೇಹ ವಶಕ್ಕೆ ಪಡೆದ ಪೊಲೀಸರು
  • ಎರಡು ಮದುವೆಯಾಗಿ, ಇಬ್ಬರು ಪತ್ನಿಯರಿದ್ದರೂ ಅಕ್ರಮ ಸಂಬಂಧ ಬೆಳೆಸಿ ದುರಂತ ಅಂತ್ಯ ಕಂಡ ಗ್ರಾಮದ ಮುಖ್ಯಸ್ಥ
Extramarital affairs : ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಉತ್ತರ ಪ್ರದೇಶದ ಸುಮೇರ್​ಪುರ್​ ಗ್ರಾಮದ ಮಾಜಿ ಅಧ್ಯಕ್ಷ ಮುಸ್ತಾಕ್​ ಗುಲ್ಶನ್​ ಅಲಿಯಾಸ್​ ಮುನ್ನಾ ಎಂಬಾತ ಇದೀಗ ಶವವಾಗಿ ಪತ್ತೆಯಾಗಿದ್ದಾನೆ. ಕಾಲುವೆ ಒಂದರಲ್ಲಿ ಆತನ ಮೃತದೇಹ ಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 
ಮುನ್ನಾಗೆ ಈಗಾಗಲೇ ಎರಡು ಮದುವೆಯಾಗಿ, ಇಬ್ಬರು ಪತ್ನಿಯರಿದ್ದಾರೆ. ಆದರೂ, ಆತ ಸುಮನ್​ ದೇವಿ ಹೆಸರಿನ ಮತ್ತೊಬ್ಬ ವಿವಾಹಿತ ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ. ಕೆಲಸದ ನಿಮಿತ್ತ ತನ್ನ ಗಂಡ ಊರು ಬಿಟ್ಟು ಹೋದಾಗ ಏಕಾಂಗಿಯಾಗಿ ಇರುತ್ತಿದ್ದ ಸುಮನ್​ ದೇವಿಗೆ ಮುನ್ನಾ ಸಹಾಯ ಮಾಡುತ್ತಿದ್ದ. ಈ ಸಮಯದಲ್ಲಿ ಇಬ್ಬರ ನಡುವೆ ಆತ್ಮೀಯತೆ ಬೆಳೆಯಿತು. ಅಲ್ಲದೆ, ಮುನ್ನಾ ಒತ್ತಾಯಪೂರ್ವಕವಾಗಿ ಆಕೆಯನ್ನು ಅಕ್ರಮ ಸಂಬಂಧದ ಬಲೆಗೆ ಕೆಡವಿದ.
ಇಬ್ಬರ ನಡುವಿನ ಸಂಬಂಧ ಆರಂಭದಲ್ಲಿ ಯಾವುದೇ ಗಲಾಟೆ ಇಲ್ಲದೇ ಮುಂದುವರೆದಿತ್ತು. ಆದರೆ, ನಂತರದ ದಿನಗಳಲ್ಲಿ ಪದೇಪದೆ ಭೇಟಿಯಾಗುವಂತೆ ಸುಮನ್​ ದೇವಿಯನ್ನು ಮುನ್ನಾ ಪೀಡಿಸುತ್ತಿದ್ದ. ಅಲ್ಲದೆ, ಬ್ಲಾಕ್​ಮೇಲ್​ ಮಾಡಲೂ ಶುರು ಮಾಡಿದ. ಇದರಿಂದ ಇಬ್ಬರ ನಡುವಿನ ಸಂಬಂಧ ಹದಗೆಡಲು ಆರಂಭಿಸಿತು. ಮುನ್ನಾ ನೀಡುತ್ತಿದ್ದ ಕಿರುಕುಳವನ್ನು ಸಹಿಸದ ಸುಮನ್​ ದೇವಿ, ಎಲ್ಲದಕ್ಕೂ ಒಂದು ಅಂತ್ಯ ಹಾಡಬೇಕೆಂದು ನಿರ್ಧಾರ ಮಾಡಿದಳು.
ಇದಾದ ಬಳಿಕ, ಸುಮನ್ ತನ್ನ ಸಹೋದರನ ಸಹಾಯ ಪಡೆದಳು. ಇಬ್ಬರು ಸೇರಿ ಸಂಚು ರೂಪಿಸಿದರು. ತಮ್ಮ ಸಂಚಿನ ಭಾಗವಾಗಿ, ಮಾರ್ಚ್​ 18ರಂದು ತಮ್ಮ ತಾಯಿಯ ಮನೆಗೆ ಮುನ್ನಾನನ್ನು ಸುಮನ್​ ಆಹ್ವಾನಿಸಿದಳು. ಸುಮನ್​ ಕರೆದಳು ಅಂತಾ ತುಂಬಾ ಖುಷಿಯಿಂದ ಮನೆಗೆ ಹೋದನು ಮುನ್ನಾ. ಆತ ಬರುವುದನ್ನೇ ಕಾದು ಕುಳಿತಿದ್ದ ಸುಮನ್​ ಸಹೋದರ, ತನ್ನ ಸಹಚರರ ಜತೆಗೂಡಿ, ಕಬ್ಬಿಣದ ರಾಡ್​ಗಳಿಂದ ಮುನ್ನಾ ಮೇಲೆ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಂದು ಹಾಕಿದರು. 
ಕೊಲೆಯಾದ ಬಳಿಕ ಎಲ್ಲ ಆರೋಪಿಗಳು ಸೇರಿ, ಮುನ್ನಾನ ದೇಹವನ್ನು ಗೋಣಿ ಚೀಲದಲ್ಲಿ ತುಂಬಿ ಒಂದು ಕಾಲುವೆಗೆ ಎಸೆದುಬಂದಿದ್ದರು. ಇತ್ತ ಮುನ್ನಾ ಮೂರ್ನಾಲ್ಕು ದಿನಗಳು ಕಳೆದರೂ ಪತ್ತೆಯಾಗದಿದ್ದಾಗ ಆತನ ಕುಟುಂಬಸ್ಥರು ಸಮೀಪದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದಾಗ, ಮುನ್ನಾನ ಮೋಟರ್​ ಸೈಕಲ್​ ಒಂದು ನಿರ್ಜನ ಪ್ರದೇಶದಲ್ಲಿ ಪತ್ತೆಯಾಯಿತು.
ಇದಾದ ಬಳಿಕ ಮುನ್ನಾನ ಫೋನ್​ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಆತ ಸುಮನ್​ ದೇವಿ ಜತೆ ನಿರಂತರ ಸಂಪರ್ಕದಲ್ಲಿರುವುದು ಗೊತ್ತಾಯಿತು. ಬಳಿಕ, ಪೊಲೀಸರು ಸುಮನ್​ ಬಳಿ ಹೋಗಿ ವಿಚಾರಿಸಿದಾಗ ಆಕೆ ಎಲ್ಲವನ್ನು ಬಾಯ್ಬಿಟ್ಟಳು. ಇದಾದ ನಂತರ ಮುನ್ನಾನ ಮೃತದೇಹವನ್ನು ಮಾರ್ಚ್​ 22ರ ಭಾನುವಾರದಂದು ಕಾಲುವೆ ಒಂದರಲ್ಲಿ ಪೊಲೀಸರು ವಶಕ್ಕೆ ಪಡೆದರು. ಬಳಿಕ ಸುಮನ್​ ಮತ್ತು ಆಕೆಯ ಸಹೋದರನನ್ನು ಪೊಲೀಸರು ಬಂಧಿಸಿದರು. ಅವರಿಗೆ ಸಹಾಯ ಮಾಡಿದ ಇನ್ನಿತರ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಅಂದಹಾಗೆ, ಮುನ್ನಾ ಮುಂಬರುವ ಗ್ರಾಮದ ಚುನಾವಣೆಗೆ ಸ್ಪರ್ಧಿಸಲು ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದ. ಅಷ್ಟರಲ್ಲೇ ಅಕ್ರಮ ಸಂಬಂಧದ ಸುಳಿಯಲ್ಲಿ ಸಿಲುಕಿ ಹೆಣವಾಗಿದ್ದಾನೆ. ಇಬ್ಬರು ಪತ್ನಿಯರು ಮತ್ತು 18 ಮಕ್ಕಳನ್ನು ಬಿಟ್ಟು ಮುನ್ನ ಅಗಲಿದ್ದಾನೆ. 18 ಮಕ್ಕಳಲ್ಲಿ  ಇಬ್ಬರು ಪತ್ನಿಯರಿಗೆ ತಲಾ 6 ಗಂಡು ಮತ್ತು 3 ಹೆಣ್ಣು ಮಕ್ಕಳಿದ್ದಾರೆ. ಓರ್ವ ಮಗಳಿಗೆ ಈಗಾಗಲೇ ಮದುವೆಯಾಗಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net