14.2 ಕೆಜಿ ಬದಲು 10 ಕೆಜಿ ಎಲ್​ಪಿಜಿ ಸಿಲಿಂಡರ್ ವಿತರಣೆಗೆ ತೈಲ ಕಂಪನಿಗಳ ಚಿಂತನೆ! LPG Supply

14.2 ಕೆಜಿ ಬದಲು 10 ಕೆಜಿ ಎಲ್​ಪಿಜಿ ಸಿಲಿಂಡರ್ ವಿತರಣೆಗೆ ತೈಲ ಕಂಪನಿಗಳ ಚಿಂತನೆ! LPG Supply
14.2 ಕೆಜಿ ಬದಲು 10 ಕೆಜಿ ಎಲ್​ಪಿಜಿ ಸಿಲಿಂಡರ್ ವಿತರಣೆಗೆ ತೈಲ ಕಂಪನಿಗಳ ಚಿಂತನೆ! LPG Supply
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ
  • ಆಮದು ಪ್ರಮಾಣ ತುಂಬಾ ಕಡಿತಗೊಂಡಿರುವ ಪರಿಣಾಮ, ದೇಶೀಯ ನಿಕ್ಷೇಪಗಳು ಕೂಡ ಖಾಲಿಯಾಗುತ್ತಿದೆ.
  • ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಮ್ಮ ಸೀಮಿತ LPG ಅನ್ನು ಸಂರಕ್ಷಿಸಲು ಇದೀಗ ತಯಾರಿ ನಡೆಸುತ್ತಿವೆ
LPG Supply : ಮಧ್ಯಪ್ರಾಚ್ಯ ಬಿಕ್ಕಟ್ಟಿನಿಂದ ತೈಲ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಆಮದು ಪ್ರಮಾಣ ತುಂಬಾ ಕಡಿತಗೊಂಡಿರುವ ಪರಿಣಾಮ, ದೇಶೀಯ ನಿಕ್ಷೇಪಗಳು ಕೂಡ ಖಾಲಿಯಾಗುತ್ತಿದೆ. ಹೀಗಾಗಿ, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ತಮ್ಮ ಸೀಮಿತ LPG ಅನ್ನು ಸಂರಕ್ಷಿಸಲು ಇದೀಗ ತಯಾರಿ ನಡೆಸುತ್ತಿವೆ. 
ಹೌದು, ಮಾಧ್ಯಮ ವರದಿಗಳ ಪ್ರಕಾರ, ತೈಲ ಕಂಪನಿಗಳು ಗೃಹ ಬಳಕೆಗೆ ಮಾಮೂಲಿಯಾಗಿ ಪೂರೈಕೆ ಮಾಡುತ್ತಿದ್ದ 14.2 ಕೆಜಿ ಸಿಲಿಂಡರ್‌ಗಳ ಬದಲು ಕೇವಲ 10 ಕೆಜಿ ಸಿಲಿಂಡರ್​ ಪೂರೈಸಲು ಯೋಜಿಸುತ್ತಿವೆ. ಈ ಪ್ರಸ್ತಾಪವು ಪ್ರಸ್ತುತ ಪರಿಶೀಲನೆಯಲ್ಲಿದೆ. ಇದೇನಾದರೂ ಜಾರಿಗೆ ಬಂದರೆ ಮುಂದಿನ ಆರ್ಡರ್​ಗಳಿಗೆ 10 ಕೆಜಿ ಸಿಲಿಂಡರ್​ ಸಿಗಲಿದೆ. ಈ ಕ್ರಮದ ಮುಖ್ಯ ಉದ್ದೇಶ ಏನೆಂದರೆ, LPG ಅನ್ನು ಸಂರಕ್ಷಿಸುವುದು ಮತ್ತು ಸಾಧ್ಯವಾದಷ್ಟು ಮನೆಗಳಿಗೆ ಪೂರೈಕೆಯನ್ನು ಮುಂದುವರಿಸುವುದಾಗಿದೆ.
ಕಂಪನಿಗಳು ಪೂರೈಸುವ 14.2 ಕಿಲೋಗ್ರಾಂ ಸಿಲಿಂಡರ್, ಸರಾಸರಿ ಒಂದು ಕುಟುಂಬಕ್ಕೆ 35 ರಿಂದ 40 ದಿನಗಳವರೆಗೆ ಬಾಳಿಕೆ ಬರುತ್ತದೆ ಎಂದು ತೈಲ ಕಂಪನಿಗಳು ಅಂದಾಜಿಸಿವೆ. 10 ಕಿಲೋಗ್ರಾಂ ತೂಕದ ಸಿಲಿಂಡರ್​ ಒಂದು ಕುಟುಂಬಕ್ಕೆ ಸುಮಾರು ಒಂದು ತಿಂಗಳವರೆಗೆ ಬಾಳಿಕೆ ಬರುತ್ತದೆ. ಈ ಕೊರತೆಯ ಸಮಯದಲ್ಲಿ ಲಭ್ಯವಿರುವ ಮೀಸಲು ಪ್ರಮಾಣವು ಹೆಚ್ಚಿನ ಕುಟುಂಬಗಳನ್ನು ತಲುಪಲು ಈ ಒಂದು ಕ್ರಮವು ಅನುವು ಮಾಡಿಕೊಡುತ್ತದೆ.

ಬೆಲೆ ಕಡಿತ

ಸಿಲಿಂಡರ್‌ಗಳಿಗೆ ಕಡಿಮೆ ಭರ್ತಿ ಮಾಡುವುದನ್ನು ಸೂಚಿಸಲು ಹೊಸ ಸ್ಟಿಕ್ಕರ್ ಅನ್ನು ಸಿಲಿಂಡರ್​ಗೆ ಅಂಟಿಸಲಾಗುತ್ತದೆ. ಬೆಲೆಗಳು ಸಹ ಅದಕ್ಕೆ ಅನುಗುಣವಾಗಿ ಕಡಿಮೆಯಾಗುತ್ತವೆ. ಕೆಲವು ಪ್ರಮುಖ ರಾಜ್ಯಗಳಲ್ಲಿ ಚುನಾವಣೆಗಳು ಸಮೀಪಿಸುತ್ತಿರುವುದರಿಂದ, ಹಠಾತ್ ಕಡಿತವು ಅವ್ಯವಸ್ಥೆ, ಪ್ರತಿಭಟನೆಗಳು ಮತ್ತು ರಾಜಕೀಯ ವಿರೋಧಕ್ಕೆ ಕಾರಣವಾಗಬಹುದು ಎಂದು ಕಂಪನಿಗಳು ಕಳವಳ ವ್ಯಕ್ತಪಡಿಸಿವೆ. ಆದರೆ, ಮುಂದಿನ ತಿಂಗಳು ಪೂರೈಕೆ ಪರಿಸ್ಥಿತಿ ಹದಗೆಡಬಹುದು ಎಂಬ ಭಯವೂ ಇದೆ, ಇದರಿಂದಾಗಿ ಕಂಪನಿಗಳಿಗೆ ಸೀಮಿತ ಆಯ್ಕೆಗಳಿವೆ.
ಗಲ್ಫ್ ಪ್ರದೇಶದಿಂದ ಯಾವುದೇ ಹೊಸ ಸಾಗಣೆಗಳಿಲ್ಲ. ಕಳೆದ ವಾರ ಹಾರ್ಮುಜ್ ಜಲಸಂಧಿಯಿಂದ ಕೇವಲ ಎರಡು ಹಡಗುಗಳು ಭಾರತವನ್ನು ತಲುಪಿದವು. ಅವು ಒಟ್ಟು 92,700 ಟನ್ ಎಲ್‌ಪಿಜಿಯನ್ನು ತಂದವು. ಇದು ಸುಮಾರು ಒಂದು ದಿನದ ರಾಷ್ಟ್ರೀಯ ಬಳಕೆಗೆ ಸಮನಾಗಿರುತ್ತದೆ. ವಾಣಿಜ್ಯ ಬಳಕೆದಾರರಿಗೆ ಸರಬರಾಜುಗಳನ್ನು ಸೀಮಿತವಾಗಿ ಪುನರಾರಂಭಿಸುವುದರಿಂದ ಈಗಾಗಲೇ ಖಾಲಿಯಾಗುತ್ತಿರುವ ನಿಕ್ಷೇಪಗಳ ಮೇಲೆ ಮತ್ತಷ್ಟು ಒತ್ತಡ ಹೆಚ್ಚಾಗುತ್ತದೆ.
ಭಾರತದ ದೈನಂದಿನ ಎಲ್‌ಪಿಜಿ ಬಳಕೆ 93,500 ಟನ್‌ಗಳಲ್ಲಿ, 80,400 ಟನ್‌ಗಳು ಅಥವಾ ಶೇಕಡಾ 86 ರಷ್ಟು ದೇಶೀಯ ಬಳಕೆದಾರರೇ ಬಳಸುತ್ತಿದ್ದಾರೆ. ಮಾರ್ಚ್‌ನ ಮೊದಲ ಹದಿನೈದು ದಿನಗಳಲ್ಲಿ, ಒಟ್ಟು ಬಳಕೆ ಶೇ. 17 ರಷ್ಟು ಕಡಿಮೆಯಾಗಿದೆ. ಇದನ್ನು ನೋಡಿದರೆ ತೈಲ ಬಿಕ್ಕಟ್ಟು ಭಾರತವನ್ನೂ ಬಾದಿಸುತ್ತಿದೆ ಅನ್ನೋದು ಸ್ಪಷ್ಟವಾಗಿ ಗೋಚರವಾಗುತ್ತದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net