ದುಡ್ಡಿಗಾಗಿ ಅರೆಬೆತ್ತಲೆ ಅವತಾರ... ಖ್ಯಾತ ನಿರೂಪಕಿ ವಿಷ್ಣು ಪ್ರಿಯಾಗೆ ಎದುರಾಯ್ತು ಭಾರಿ ಸಂಕಷ್ಟ! Anchor Vishnupriya

ದುಡ್ಡಿಗಾಗಿ ಅರೆಬೆತ್ತಲೆ ಅವತಾರ... ಖ್ಯಾತ ನಿರೂಪಕಿ ವಿಷ್ಣುಪ್ರಿಯಾಗೆ ಎದುರಾಯ್ತು ಭಾರಿ ಸಂಕಷ್ಟ! Anchor Vishnupriya
ದುಡ್ಡಿಗಾಗಿ ಅರೆಬೆತ್ತಲೆ ಅವತಾರ... ಖ್ಯಾತ ನಿರೂಪಕಿ ವಿಷ್ಣುಪ್ರಿಯಾಗೆ ಎದುರಾಯ್ತು ಭಾರಿ ಸಂಕಷ್ಟ! Anchor Vishnupriya
Published on

ಪ್ರಮುಖ ಮುಖ್ಯಾಂಶಗಳು

  • ಅಸಭ್ಯ ಫೋಟೋಗಳನ್ನು ಹಂಚಿಕೊಳ್ಳುವ ವಿಷ್ಣು ಪ್ರಿಯಾ ವಿರುದ್ಧ ವಿಜಯವಾಡದಲ್ಲಿ AISF ದೂರು
  • ಮೈಮಾಟ ಪ್ರದರ್ಶಿಸಿ ಸಬ್‌ಸ್ಕ್ರೈಬರ್ಸ್ ಮೂಲಕ ಹಣ ಗಳಿಸುವುದು ಅಪರಾಧವೆಂದು ಅವರ ಇನ್‌ಸ್ಟಾಗ್ರಾಮ್ ಬ್ಯಾನ್ ಮಾಡಲು ಆಗ್ರಹ
  • ಇವೆಲ್ಲವೂ ತನ್ನ ವೈಯಕ್ತಿಕ ಆದ್ಯತೆ ಮತ್ತು ಹಕ್ಕು ಎಂದು ಬಿಗ್ ಬಾಸ್ ಖ್ಯಾತಿಯ ವಿಷ್ಣು ಪ್ರಿಯಾ ಪ್ರತಿಕ್ರಿಯೆ
  • ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಮ್ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ
Anchor Vishnupriya : ನಿರೂಪಕಿ ಮತ್ತು ತೆಲುಗು ಬಿಗ್ ಬಾಸ್ ಖ್ಯಾತಿಯ ವಿಷ್ಣು ಪ್ರಿಯಾ ಭೀಮೇನಿ ಈಗ ಭಾರಿ ವಿವಾದದಲ್ಲಿ ಸಿಲುಕಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಷ್ಣುಪ್ರಿಯಾ ಪೋಸ್ಟ್ ಮಾಡುತ್ತಿರುವ ಫೋಟೋ ಮತ್ತು ವಿಡಿಯೋಗಳಿಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಈ ಸಂಬಂಧ ಪೊಲೀಸರಿಗೆ ದೂರು ಸಹ ದಾಖಲಾಗಿದೆ. ಸದ್ಯ ವಿಷ್ಣು ಪ್ರಿಯಾ ಹೆಸರು ಟಾಲಿವುಡ್​ನಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಈ ಹಾಟ್​ ಬ್ಯೂಟಿ ಮಾಡಿದ ತಪ್ಪಾದರೂ ಏನು ಅನ್ನೋದನ್ನು ನಾವೀಗ ತಿಳಿದುಕೊಳ್ಳೋಣ.
ಆಲ್​ ಇಂಡಿಯಾ ಸ್ಟೂಡೆಂಟ್ಸ್​ ಫೆಡರೇಷನ್​ ( AISF) ನಾಯಕರು ವಿಷ್ಣು ಪ್ರಿಯಾ ವಿರುದ್ಧ ವಿಜಯವಾಡ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಿಷ್ಣು ಪ್ರಿಯಾ ಕೆಲವು ಸಮಯದಿಂದ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅಸಭ್ಯ, ಅರೆನಗ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಇಂತಹ ಅರೆನಗ್ನ ಕಂಟೆಂಟ್​ಗಳು ಯುವಕರನ್ನು ದಾರಿ ತಪ್ಪಿಸುತ್ತಿದೆ ಎಂದಿರುವ ಎಐಎಸ್​ಎಫ್​ ನಾಯಕರು, ವಿಷ್ಣು ಪ್ರಿಯಾ ಅವರು ಸಾಮಾಜಿಕ ಜವಾಬ್ದಾರಿಯಿಲ್ಲದೆ ವರ್ತಿಸುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಬ್​ಸ್ಕ್ರೈಬರ್ಸ್​ ಮಾದರಿಯ ಮೂಲಕ ಕೇವಲ ಫೋಟೋಗಳನ್ನು ಹಂಚಿಕೊಳ್ಳದೆ, ತನ್ನ ಮೈಮಾಟವನ್ನು ಬಹಿರಂಗಪಡಿಸುವ ಮೂಲಕ ಹಣ ಸಂಗ್ರಹಿಸುವುದು ಅಪರಾಧ ಎಂದು ಎಐಎಸ್ಎಫ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿಯೊಬ್ಬರು ಇಂತಹ ಚಟುವಟಿಕೆಗಳಲ್ಲಿ ತೊಡಗುವುದು ಸರಿಯಲ್ಲ. ಕೂಡಲೇ ಅವರ ಇನ್‌ಸ್ಟಾಗ್ರಾಮ್ ಖಾತೆಯನ್ನು ನಿರ್ಬಂಧಿಸಬೇಕೆಂದು ಪೊಲೀಸರ ಬಳಿ ಮನವಿ ಮಾಡಿದ್ದಾರೆ.
ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮದ ನಂತರ ವಿಷ್ಣು ಪ್ರಿಯಾ ಅವರ ಕ್ರೇಜ್ ಹೆಚ್ಚಿದ್ದರೂ, ಅವರ ಸಾಮಾಜಿಕ ಜಾಲತಾಣ ಪೋಸ್ಟ್‌ಗಳನ್ನು ಆಗಾಗ್ಗೆ ಟೀಕಿಸಲಾಗುತ್ತಿದೆ. ಈ ಬಗ್ಗೆ ವಿಷ್ಣು ಪ್ರಿಯಾ ಕೂಡ ಪ್ರತಿಕ್ರಿಯೆ ನೀಡಿದ್ದು, ಇದೆಲ್ಲ ನನ್ನ ವೈಯಕ್ತಿಕ ಆದ್ಯತೆ ಎಂದು ಹೇಳಿದ್ದಾರೆ. ಆದರೆ, ಈಗ ಈ ವಿಷಯ ನೇರವಾಗಿ ಸೈಬರ್ ಕ್ರೈಮ್ ಪೊಲೀಸರಿಗೆ ಹೋಗಿರುವುದರಿಂದ, ಈ ಸಂಬಂಧ ವಿಷ್ಣು ಪ್ರಿಯಾ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.

ಯಾರು ಈ ವಿಷ್ಣು ಪ್ರಿಯಾ?

ತೆಲುಗು ನಿರೂಪಕಿ ಹಾಗೂ ನಟಿ ವಿಷ್ಣು ಪ್ರಿಯಾ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ಸಾಮಾಜಿಕ ಜಾಲತಾಣ ಬಳಸುವವರಿಗೆ ಆಕೆಯ ಮುಖ ಪರಿಚಯ ಇದ್ದೇ ಇರುತ್ತದೆ. ಏಕೆಂದರೆ, ತನ್ನ ಬೋಲ್ಡ್​ ಫೋಟೋಗಳಿಂದಲೇ ಆಗಾಗ ಸದ್ದು ಮಾಡುತ್ತಿರುತ್ತಾರೆ. ಒಂದು ಕಾಲದಲ್ಲಿ ಆ್ಯಂಕರ್ ಆಗಿ ಕೆಲಸ ಮಾಡುತ್ತಿದ್ದ ವಿಷ್ಣು ಪ್ರಿಯಾ, ಇಂದು ಜಾಲತಾಣದಲ್ಲಿ ಸ್ಟಾರ್​ ನಾಯಕಿಯರಿಗಿಂತ ಹೆಚ್ಚಿನ ಫ್ಯಾನ್ಸ್​ ಫಾಲೋಯಿಂಗ್ ಹೊಂದಿದ್ದಾರೆ. ಆಕೆಯ ಮೈಮಾಟ ನೋಡಲೆಂದೇ ಅಭಿಮಾನಿಗಳಿದ್ದಾರೆ. ಹೈದರಾಬಾದ್‌ನಲ್ಲಿ ಜನಿಸಿದ ಅವರು ಹೈದರಾಬಾದ್‌ನಲ್ಲೇ ಬೆಳೆದರು. ತೆಲುಗು ಚಿತ್ರರಂಗದಲ್ಲಿ ತಮ್ಮ ಆ್ಯಂಕರಿಂಗ್ ಮತ್ತು ನಟನೆಯಿಂದ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ.
2005ರ ಸುಮಾರಿನಲ್ಲಿ ಮಲಯಾಳಂ ಚಿತ್ರ ಮಯೂಖಂ ಮೂಲಕ ನಟನೆ ಆರಂಭಿಸಿದರು. ನಂತರ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ಯಮದೊಂಗ (2007) ಅವರ ತೆಲುಗು ಚೊಚ್ಚಲ ಸಿನಿಮಾ ಆಗಿದೆ. ತೆಲುಗು ಟಿವಿಯಲ್ಲಿ ಆ್ಯಂಕರ್ ಆಗಿ ಬಹಳ ಜನಪ್ರಿಯರಾಗಿದ್ದಾರೆ. ಕಾಮಿಡಿ ಶೋ ಪೋವೆ ಪೋರದಲ್ಲಿ ಸುಡಿಗಾಲಿ ಸುಧೀರ್ ಜೊತೆಗೆ ಹೋಸ್ಟ್​ ಮಾಡಿ ಖ್ಯಾತಿ ಗಳಿಸಿದ್ದಾರೆ. ಪಟಾಸ್ ಮತ್ತು ಇತರ ಕಾಮಿಡಿ/ಎಂಟರ್‌ಟೈನ್‌ಮೆಂಟ್ ಶೋಗಳಲ್ಲಿ ಸಹ ಕಾಣಿಸಿಕೊಂಡಿದ್ದಾರೆ.
ಬಿಗ್ ಬಾಸ್ ತೆಲುಗು ಸೀಸನ್ 8ರಲ್ಲಿ ಹೌಸ್‌ಮೇಟ್ ಆಗಿ ಪಾಲ್ಗೊಂಡಿದ್ದರು. ಇದು ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು. ನಟನೆಯ ಜೊತೆಗೆ ಮಾಡೆಲಿಂಗ್ ಮತ್ತು ಟಿವಿ ಹೋಸ್ಟಿಂಗ್‌ನಲ್ಲಿ ಸಕ್ರಿಯರಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿ ಅಭಿಮಾನಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ. ಕೆಲವು ತೆಲುಗು ಚಿತ್ರಗಳಲ್ಲಿ ಸಹಾಯಕ ಪಾತ್ರಗಳು ಮತ್ತು ಕ್ಯಾಮಿಯೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಗಾಗ ತಮ್ಮ ಬೋಲ್ಡ್​ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವಿಷ್ಣು ಪ್ರಿಯಾ ಸುದ್ದಿಯಾಗುತ್ತಿರುತ್ತಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net