ಟಾಲಿವುಡ್ನಲ್ಲಿ ಕೆಲ ಸೆಲೆಬ್ರಿಟಿಗಳು ಯಾವುದೇ ಪೂಜಾ-ವಿಧಾನ ನೆರವೇರಿಸುವುದಾದರೂ ವೇಣು ಸ್ವಾಮಿ ಮೊರೆ ಹೋಗುತ್ತಾರೆ. ಹಿಂದೊಮ್ಮೆ ರಶ್ಮಿಕಾ ಮಂದಣ್ಣಾ ಕೂಡ ತಮ್ಮ ಹೈದರಾಬಾದ್ ನಿವಾಸಕ್ಕೆ ವೇಣು ಸ್ವಾಮಿ ಅವರಿಂದಲೇ ಪೂಜೆ ನೆರವೇರಿಸಿದ್ದರು. ಅಲ್ಲದೆ, ನಟಿ ಡಿಂಪಲ್ ಹಯಾತಿ ಮನೆಯಲ್ಲೂ ವೇಣು ಸ್ವಾಮಿ ಪೂಜೆ ಮಾಡಿದ್ದರು. ಅದರಲ್ಲೂ ಹಯಾತಿ ಮನೆಯಲ್ಲಿ ಪೂಜೆಯ ನಡುವೆ ವೈನ್ ಬಾಟಲ್ ಕಾಣಿಸಿಕೊಂಡಿದ್ದು ಭಾರಿ ಚರ್ಚೆಯಾಗಿತ್ತು. ಅಲ್ಲದೆ, ಟ್ರೋಲ್ ಕೂಡ ಆಗಿತ್ತು. ಇದೀಗ ವೇಣು ಸ್ವಾಮಿ ಬಗ್ಗೆ ಹಯಾತಿ ನೀಡಿರುವ ಹೇಳಿಕೆ ಎಲ್ಲರ ಗಮನ ಸೆಳೆಯುತ್ತಿದೆ.