ಆಂಧ್ರದಲ್ಲಿ ಹೊಸ ಟಿಕೆಟ್ ದರಗಳು: ಇಷ್ಟು ವಿರೋಧವನ್ನು ಲೆಕ್ಕಿಸದ ಜಗನ್ ಸರ್ಕಾರ ಇದೀಗ ಟಿಕೆಟ್ ದರವನ್ನು ನಿಗದಿ ಮಾಡಿದೆ. ಆಂಧ್ರ ಪ್ರದೇಶದಲ್ಲಿ ಹೊಸ ಆದೇಶದಂತೆ ಮುನ್ಸಿಪಲ್ ಕಾರ್ಪೊರೇಶನ್ ವ್ಯಾಪ್ತಿಯಲ್ಲಿನ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಪ್ರೀಮಿಯಂ ಟಿಕೆಟ್ ದರ 250 ರೂ, ಡಿಲಕ್ಸ್ ವಿಭಾಗ ದರ 150 ರೂ, ಎಕಾನಮಿ ಕ್ಲಾಸ್ 75 ರೂ ದಾಟುವಂತಿಲ್ಲ. ಇನ್ನು, ಎಸಿ ಥಿಯೇಟರ್ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 100 ರೂ, ಡಿಲಕ್ಸ್ ವಿಭಾಗ ದರ 60 ರೂ, ಎಕಾನಮಿ ಕ್ಲಾಸ್ 40 ರೂ ಮತ್ತು ನಾನ್ ಎಸಿ ಥಿಯೇಟರ್ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 60 ರೂ, ಡಿಲಕ್ಸ್ ವಿಭಾಗ ದರ 40 ರೂ, ಎಕಾನಮಿ ಕ್ಲಾಸ್ 20 ರೂ ಮಾತ್ರ ಇರಬೇಕು. ಮತ್ತೊಂದೆಡೆ, ಮುನ್ಸಿಪಾಲಿಟಿ ಪ್ರಾಂಥ್ಯದಲ್ಲಿ ಮಲ್ಟಿಪ್ಲಕ್ಸ್ಗಳ ಪ್ರೀಮಿಯಂ ಟಿಕೆಟ್ ದರ 150 ರೂ, ಡಿಲಕ್ಸ್ ವಿಭಾಗ ದರ 100 ರೂ, ಎಕಾನಮಿ ಕ್ಲಾಸ್ 60 ರೂ ದಾಟುವಂತಿಲ್ಲ. ಎಸಿ ಥಿಯೇಟರ್ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 70 ರೂ, ಡಿಲಕ್ಸ್ ವಿಭಾಗ ದರ 50 ರೂ, ಎಕಾನಮಿ ಕ್ಲಾಸ್ 30 ರೂ ಮತ್ತು ನಾನ್ ಎಸಿ ಥಿಯೇಟರ್ಗಳಲ್ಲಿ ಪ್ರೀಮಿಯಂ ಟಿಕೆಟ್ ದರ 50 ರೂ, ಡಿಲಕ್ಸ್ ವಿಭಾಗ ದರ 30 ರೂ, ಎಕಾನಮಿ ಕ್ಲಾಸ್ 15 ರೂ ಗೆ ನಿಗಧಿ ಪಡಿಸಲಾಗಿದೆ.