ಮೈನಸ್ 7 ಡಿಗ್ರಿ ಚಳಿಯಲ್ಲಿ ನಡುಗಿದ ಟೈಗರ್ ... ‘ಬಾಗಿ 3’ ಚಿತ್ರೀಕರಣ ಅನುಭವ ಹಂಚಿಕೊಂಡ ಜಾಕಿ ಪುತ್ರ

Baaghi Final
Published on

ಟೈಗರ್ ಶ್ರಾಫ್​ ಅಭಿನಯದ ‘ಬಾಗಿ 3’ ಚಿತ್ರದ ಬಗ್ಗೆ ನಿಧಾನಕ್ಕೆ ಒಳ್ಳೆಯ ಮಾತುಗಳು ಕೇಳಿ ಬರುತ್ತಿದ್ದವು, ಅಷ್ಟರಲ್ಲಿ ಲಾಕ್‌ಡೌನ್‌ನಿಂದ ಚಿತ್ರ ಪ್ರದರ್ಶನವೇ ರದ್ದಾಗಿ ಹೋಯಿತು. ಚಿತ್ರ ಹೀಗೆ ಬಂದು ಹಾಗೆ ಹೋಗಿದ್ದಿಕ್ಕೆ ಟೈಗರ್ ಬೇಸರವಿದೆಯಾದರೂ, ಆ ಚಿತ್ರದಲ್ಲಿ ಕೆಲವು ಮರೆಯಲಾರದ ಅನುಭವಗಳಾಗಿವೆಯಂತೆ.

ಸೋಷಿಯಲ್ ಮೀಡಿಯಾದಲ್ಲಿ ‘ಬಾಗಿ 3’ ಚಿತ್ರದ ಮೇಕಿಂಗ್ ವೀಡಿಯೋ ಹಂಚಿಕೊಂಡಿರುವ ಟೈಗರ್, ‘ನನ್ನ ಜೀವನದಲ್ಲೇ ಅತ್ಯಂತ ಕಷ್ಟಕರವಾದ ಸಿನಿಮಾ ಅದು. ಸರ್ಬಿಯಾದಲ್ಲಿ ನಾವು ಚಿತ್ರೀಕರಣ ಮಾಡುವಾಗ ಮೈನಸ್​ 7 ಡಿಗ್ರಿ ಇತ್ತು. ಜತೆಗೆ ಅಕ್ಕ-ಪಕ್ಕ ದೊಡ್ಡ ದೊಡ್ಡ ಫ್ಯಾನ್‌ಗಳು. ಮೈಕೊರೆಯುವ ಚಳಿಯಲ್ಲಿ, ಆ ಭಾರದ ಮೆಷೀನ್ ಗನ್‌ಗಳನ್ನು ಹಿಡಿದುಕೊಂಡು ನಿಲ್ಲುವುದೇ ಬಹಳ ಕಷ್ಟವಾಗಿತ್ತು. ಇನ್ನು ಆ ದೃಶ್ಯದಲ್ಲಿ ನನಗೆ ಶರ್ಟ್ ಸಹ ಇರಲಿಲ್ಲ’ ಎಂದು ನೆನಪಿಸಿಕೊಂಡಿದ್ದಾರೆ ಟೈಗರ್ ಶ್ರಾಫ್​.

‘ಬಾಗಿ 3’ ಚಿತ್ರದ ಬಗ್ಗೆ ಟೈಗರ್ ಸಾಕಷ್ಟು ನಿರೀಕ್ಷೆ ಇಟ್ಟಿದ್ದರು. ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾದ ಈ ಪಕ್ಕಾ ಆ್ಯಕ್ಷನ್ ಚಿತ್ರವು, ತಮಗೆ ಮರುಹುಟ್ಟು ಕೊಡಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದರೆ, ಲಾಕ್‌ಡೌನ್‌ನಿಂದ ಚಿತ್ರದ ಪ್ರದರ್ಶನ ನಿಂತಿದ್ದರ ಜತೆಗೆ, ನಿರ್ಮಾಪಕರಿಗೆ ಸಾಕಷ್ಟು ನಷ್ಟವಾಗಿದೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net