ತೆಲುಗು ಚಿತ್ರರಂಗಕ್ಕೆ ಸಮೀರಾ ಗುಡ್​ ಬೈ ಹೇಳಿದ್ದೇಕೆ? ಹಳೆಯ ಪ್ರಶ್ನೆಗೆ ಸಿಕ್ಕಿತು ಉತ್ತರ...

Sameera
Published on

ಸಮೀರಾ ರೆಡ್ಡಿ ಚಿತ್ರರಂಗಕ್ಕೆ ಗುಡ್‌ಬೈ ಹೇಳಿಯೇ ಆರೇಳು ವರ್ಷಗಳಾಗಿವೆ. ಇನ್ನು ಅವರು ಮದುವೆಯಾಗಿ, ಸುಖಿ ಸಂಸಾರ ನಡೆಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಹೀಗಿರುವಾಗ ಹಳೆಯ ಪ್ರಶ್ನೆಯೊಂದಕ್ಕೆ ಅವರೀಗ ಉತ್ತರ ಹೇಳಿದ್ದಾರೆ.

ಸಮೀರಾ 15 ವರ್ಷಗಳ ಹಿಂದೆ ‘ಜೈ ನರಸಿಂಹ’ ಎಂಬ ತೆಲುಗು ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರದ ನಂತರ ಇನ್ನೊಂದಿಷ್ಟು ಚಿತ್ರಗಳಲ್ಲಿ ಆಫರ್​​ಗಳು ಬಂದವು. ಆದರೆ, ಸಮೀರಾ ಮಾತ್ರ ಅವಕಾಶಗಳು ಸಿಗುತ್ತಿದ್ದರೂ, ಕ್ರಮೇಣ ಟಾಲಿವುಡ್‌ನಿಂದ ದೂರವಾದರು. ಹಿಂದಿ ಮತ್ತು ತಮಿಳೀನಲ್ಲೇ ಹೆಚ್ಚಾಗಿ ಕಾಣಿಸಿಕೊಂಡರು. ಇಷ್ಟಕ್ಕೂ ಅವರು ಟಾಲಿವುಡ್‌ನಿಂದ ದೂರವಾಗಿದ್ದೇಕೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಜೈ ನರಸಿಂಹ’ ಚಿತ್ರದಲ್ಲಿ ಜ್ಯೂನಿಯರ್ ಎನ್.ಟಿ.ಆರ್ ಜತೆಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಸಮೀರಾ. ಆ ಚಿತ್ರದ ನಂತರ ಇಬ್ಬರಿಗೂ ಲವ್ ಆಗಿದೆ ಎಂಬ ಸುದ್ದಿಗಳು ಹುಟ್ಟಿಕೊಂಡವಂತೆ. ಇದರಿಂದ ಎರಡೂ ಕುಟುಂಬದವರೂ ಸ್ವಲ್ಪ ಅಪ್‌ಸೆಟ್ ಆಗಿದ್ದಾರೆ. ಸಾಲದ್ದಕ್ಕೆ ಸಮೀರಾ ಅವರನ್ನು ಪ್ರತಿಭೆಯಿಂದ ಗುರುತಿಸುವುದಕ್ಕಿಂತ ಹೆಚ್ಚಾಗಿ, ಜ್ಯೂನಿಯರ್ ಎನ್.ಟಿ.ಆರ್ ಪ್ರೇಯಸಿ ಎಂದೇ ಎಲ್ಲರೂ ಗುರುತಿಸುತ್ತಿದ್ದರಂತೆ. ಇದೆಲ್ಲದರಿಂದ ಬೇಸತ್ತು, ತೆಲುಗು ಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟಿದ್ದಾಗಿ ಸಮೀರಾ ಹೇಳಿದ್ದಾರೆ.

ತೆಲುಗು ಚಿತ್ರಗಳಲ್ಲಿ ನಟಿಸುವುದನ್ನು ಬಿಟ್ಟರೂ, ಅಭಿನಯ ನಿಲ್ಲಿಸಿಲ್ಲ ಅವರು. ಆ ನಂತರ ತಮಿಳು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸುವುದನ್ನು ಮುಂದುವರೆಸಿದ ಸಮೀರಾ, ಕೆಲವು ವರ್ಷಗಳ ಹಿಂದೆ ಚಿತ್ರರಂಗಕ್ಕೆ ವಿದಾಯ ಹೇಳಿ, ದಾಂಪತ್ಯ ಜೀವನವನ್ನು ಅನುಭವಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net