More

    ಮಲಯಾಳಂನ ಸೂಪರ್​ ಹಿಟ್ ‘ಹೆಲನ್​‘ ಚಿತ್ರದ ತೆಲುಗು ರಿಮೇಕ್​ನಲ್ಲಿ ನಟಿಸ್ತಾರಾ ಅನುಪಮಾ ಪರಮೇಶ್ವರನ್​?

    ಮಾಲಿವುಡ್​ನಲ್ಲಿ ಕಳೆದ ವರ್ಷ ಅತ್ಯಂತ ಕಡಿಮೆ ಬಜೆಟ್​ನಲ್ಲಿ ಸಿದ್ಧವಾಗಿದ್ದ ‘ಹೆಲನ್​’ ಸಿನಿಮಾ ಯಶಸ್ಸು ಕಂಡಿತ್ತು. ಚಿತ್ರದ ಕಥೆ ನೋಡಿ ತಮಿಳು, ಕನ್ನಡ ಮತ್ತು ತೆಲುಗಿನಲ್ಲಿಯೂ ಸಿನಿಮಾ ರಿಮೇಕ್​ ಮಾಡುವ ಬಗ್ಗೆ ಮಾತುಕತೆ ನಡೆದಿತ್ತು. ಅದರಂತೆ ಕನ್ನಡದಲ್ಲಿ ಲಾಸ್ಯಾ ನಾಗರಾಜ್​ ಈ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ತಮಿಳಿನಲ್ಲಿ ಕೀರ್ತಿ ನಟಿಸಲಿದ್ದಾರೆ. ಹಾಗಾದರೆ ತೆಲುಗಿನಲ್ಲಿ ಯಾರು? ಈ ಪ್ರಶ್ನೆ ಕಳೆದ ಹಲವು ತಿಂಗಳುಗಳಿಂದ ಸುದ್ದಿಯಲ್ಲಿತ್ತಾದರೂ, ನಿಹಾರಿಕಾ ನಟಿಸಲಿದ್ದಾರೆ, ಇಶಾ ರೆಬ್ಬಾ ನಾಯಕಿಯಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಆ ಇಬ್ಬರು ನಟಿಯರ ಹೆಸರಿನ ಜತೆಗೆ ಅನುಪಮಾ ಪರಮೇಶ್ವರನ್​ ಹೆಸರೂ ಸೇರಿಕೊಂಡಿದೆ. ಆದರೆ, ಚಿತ್ರತಂಡದಿಂದ ಈವರೆಗೂ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ. ಅಂದಹಾಗೆ ಈ ಮೂರು ಭಾಷೆಯ ಸಿನಿಮಾಗಳಿಗೆ ಸಬು ಅಲಿಯೊಸಿಸ್​ ನಿರ್ದೇಶನ ಮಾಡಲಿದ್ದಾರೆ. ಮೂಲ ಮಲಯಾಳಿ ಚಿತ್ರವನ್ನು ಮುತ್ತುಕುಟ್ಟಿ ಕ್ಸೇವಿಯರ್​ ನಿರ್ದೇಶನ ಮಾಡಿದ್ದರು. ಅಣ್ಣಾ ಬೆನ್​ ನಾಯರಂಬಾಲಮ್​, ನೊಬ್ಲ ಬಾಬು ಥಾಮಸ್​ ಮುಖ್ಯಭೂಮಿಕೆಯಲ್ಲಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts