ವೀಕೆಂಡ್ ವಿಥ್ ಡಾ. ವೀರೇಂದ್ರ ಹೆಗ್ಗಡೆ ಮತ್ತು ಗೋಲ್ಡನ್ ಸ್ಟಾರ್ ಗಣೇಶ್​

WWR Post - 01
Published on

ಬೆಂಗಳೂರು: ಲಾಕ್​ಡೌನ್​ ಹಿನ್ನೆಲೆಯಲ್ಲಿ ಮನರಂಜನಾ ವಾಹಿನಿಗಳಲ್ಲಿ ಹಳೇ ಸಂಚಿಕೆಗಳೆಲ್ಲ ಮರುಪ್ರಸಾರ ಆರಂಭಿಸಿವೆ. ಅದರಲ್ಲಿ ವೀಕೆಂಡ್​ ವಿತ್​ ರಮೇಶ್​ ರಿಯಾಲಿಟಿ ಶೋ ಸಹ ಸಾಧಕರ ಕಥೆಯನ್ನು ಮತ್ತೆ ತೆರೆಮೇಲೆ ತೋರಿಸುತ್ತಿದ್ದಾರೆ. ಈಗಾಗಲೇ ಹಲವು ಸಾಧಕರ ಜೀವನ ಮರುಪ್ರಸಾರವಾಗಿದೆ. ಇದೀಗ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಖ್ಯಾತ ನಟ ಗೋಲ್ಡನ್​ ಸ್ಟಾರ್ ಗಣೇಶ್​ ಅವರ ಸಂಚಿಕೆಗಳು ಮರು ಪ್ರಸಾರಕ್ಕೆ ಸಿದ್ಧವಾಗಿವೆ.

ಈಗಾಗಲೇ ಅಂಬರೀಶ್​, ದರ್ಶನ್​, ಪುನೀತ್​, ಸುದೀಪ್​, ಯಶ್​, ಸುಧಾರಾಣಿ ಸೇರಿ ಸಾಕಷ್ಟು ತಾರೆಯರ ಏಪಿಸೋಡ್​ಗಳು ಮರುಪ್ರಸಾರವಾಗಿವೆ. ಇದೀಗ ಮೇ. 2 2020ರ ಶನಿವಾರ ಮಧ್ಯಾಹ್ನ 1 ಗಂಟೆಗೆ ಡಾ. ವೀರೇಂದ್ರ ಹೆಗ್ಗಡೆ ಏಪಿಸೋಡ್, ಭಾನುವಾರ ಮಧ್ಯಾಹ್ನ 1 ಗಂಟೆಗೆ ಗೋಲ್ಡನ್ ಸ್ಟಾರ್ ಗಣೇಶ್ ಎಪಿಸೋಡ್ ಪ್ರಸಾರವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net