ರಶ್ಮಿಕಾ ಮಂದಣ್ಣಗಿರುವ ಈ ಒಂದು ಟ್ಯಾಲೆಂಟ್​ ಬೇರೆ ಯಾವ ನಟಿಯರಲ್ಲೂ ಇಲ್ಲವಂತೆ!

Rashmika-Mandanna-9
Published on

ಹೈದರಾಬಾದ್​: ನ್ಯಾಷನಲ್ ಕ್ರಶ್ ಹಾಗೂ ಚಶ್ಮಾ ಸುಂದರಿ ಎಂದೇ ಖ್ಯಾತಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಸರಣಿ ಚಿತ್ರಗಳಲ್ಲಿ ನಟಿಸುವುದರಲ್ಲಿ ಬಿಜಿಯಾಗಿದ್ದಾರೆ. ನಿನ್ನೆಯಷ್ಟೇ (ಏಪ್ರಿಲ್​ 05) ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಅಭಿಮಾನಿಗಳು ಮಾತ್ರವಲ್ಲದೆ ಸೆಲೆಬ್ರಿಟಿಗಳು ಸಹ ಶುಭ ಕೋರಿದರು.

ಹುಟ್ಟುಹಬ್ಬದ ಸಂಭ್ರಮದ ನಡುವೆ ತಾವು ನಟಿಸುತ್ತಿರುವ ಹೊಸ ಸಿನಿಮಾಗಳ ಪೋಸ್ಟರ್​ಗಳನ್ನು ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಡಬಲ್​ ಖುಷಿಯನ್ನು ನೀಡಿದ್ದಾರೆ. ಹುಟ್ಟುಹಬ್ಬ ಹಿನ್ನೆಲೆಯಲ್ಲಿ ರಶ್ಮಿಕಾಗೆ ಸಂಬಂಧಿಸಿದ ಹಲವು ವಿಷಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಈ ಕ್ರಮದಲ್ಲಿ ರಶ್ಮಿಕಾಗೆ ಸಂಬಂಧಿಸಿದ ರಹಸ್ಯವೊಂದು ಹೊರಬಿದ್ದಿದೆ.

ರಶ್ಮಿಕಾ ಅವರು ಕಿರಿಕ್​ ಪಾರ್ಟಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಿಂದ ನಾಯಕಿಯಾಗಿ ಕಾಲಿಟ್ಟರು. ಬಳಿಕ ಬೇರೆ ಭಾಷೆಗಳಲ್ಲೂ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬಂದವು. ಇದೀಗ ಯಾವುದೇ ಭಾಷೆಯ ಭೇದವಿಲ್ಲದೆ ಸಾಕಷ್ಟು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಸಿನಿಮಾ ಮಾಡುತ್ತಿರುವ ರಶ್ಮಿಕಾ 12 ಭಾಷೆಗಳನ್ನು ಬಹಳ ನಿರರ್ಗಳವಾಗಿ ಮಾತನಾಡಬಲ್ಲರಂತೆ.

ಈ ಕಾರಣಕ್ಕಾಗಿ ಯಾವುದೇ ಭಾಷೆಯಲ್ಲಿ ಸಿನಿಮಾ ಮಾಡಿದರೂ ರಶ್ಮಿಕಾ ತಾವೇ ಡಬ್ಬಿಂಗ್ ಮಾಡುತ್ತಾರಂತೆ. ಬಾಲ್ಯದಿಂದಲೂ ಭಾಷೆಯ ಬಗ್ಗೆ ಹೆಚ್ಚು ಗಮನಹರಿಸಿರುವ ರಶ್ಮಿಕಾಗೆ ವಿವಿಧ ಭಾಷೆಗಳಲ್ಲಿ ಮಾತನಾಡಲು ಆಸಕ್ತಿ ತೋರುತ್ತಿದ್ದರು ಎಂದು ಹೇಳಲಾಗುತ್ತಿದೆ. ರಶ್ಮಿಕಾ ಅವರು 12 ಭಾಷೆಗಳನ್ನು ಮಾತನಾಡುತ್ತಾರೆ ಎಂದು ತಿಳಿದು ಅಭಿಮಾನಿಗಳು ತುಂಬಾ ಸಂತೋಷಪಟ್ಟಿದ್ದಾರೆ.

ಸಿನಿಮಾ ವಿಚಾರಕ್ಕೆ ಬಂದರೆ, ತುಂಬಾ ಬಿಜಿಯಾಗಿರುವ ರಶ್ಮಿಕಾ ಸದ್ಯ ಪುಷ್ಪ 2 ಮತ್ತು ದಿ ಗರ್ಲ್ ಫ್ರೆಂಡ್ ರೇನ್‌ಬೋ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net