ಕತ್ರೀನಾ-ವಿಕಿ ಮದುವೆಯಲ್ಲಿ ಈತನದು ವಿಶೇಷ ಪಾತ್ರ! ಯಾರಿದು ಗೊತ್ತಾ?

katvick
Published on

ಮುಂಬೈ: ಡಿಸೆಂಬರ್​ 9 ರಂದು ನಡೆಯಲಿರುವ ಬಾಲಿವುಡ್​​ನ ಬಹುಚರ್ಚಿತ ಜೋಡಿ ಕತ್ರೀನಾ ಕೈಫ್​ ಮತ್ತು ವಿಕಿ ಕೌಶಲ್​ ಮದುವೆಗೆ ಭರದಿಂದ ಸಿದ್ಧತೆ ಸಾಗುತ್ತಿರುವ ಬಗ್ಗೆ ಒಂದಿಲ್ಲೊಂದು ವರದಿಗಳು ಬರುತ್ತಿವೆ. ಶನಿವಾರದಂದು ಕತ್ರೀನಾರ ಮುಂಬೈ ಮನೆಗೆ ಅವರ ತಾಯಿ ಸುಜಾನ್​​ ಟರ್ಕೊಟ್ಟೆ, ಸೋದರಿ ಇಸಬೆಲ್​​​ ಕೈಫ್​ ಮತ್ತು ಸೋದರ ಸೆಬಷ್ಚಿಯನ್​​ ಲಾರೆಂಟ್ ಮೈಕೆಲ್ ತಲುಪಿರುವುದು ವರದಿಯಾಗಿತ್ತು. ಇದೀಗ ಕತ್ರೀನಾರ ವಿವಾಹ ಸಮಾರಂಭದಲ್ಲಿ ಸೋದರ ಮೈಕಲ್​​​ ವಿಶೇಷ ಪಾತ್ರ ವಹಿಸಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಕತ್ರೀನಾ, ವಿಕಿ ಮತ್ತು ಅವರ ಆಪ್ತ ಬಂಧು-ಬಳಗವು ಡಿಸೆಂಬರ್ 6 ರಂದು ವಿವಾಹ ಸ್ಥಳವಾದ ಸವಾಯಿ ಮಾಧೋಪುರದ ಸಿಕ್ಸ್​​ ಸೆನ್ಸಸ್ ಫೋರ್ಟ್​ ಬರ್ವಾರ ಹೊಟೆಲ್​ ತಲುಪಲಿದ್ದಾರೆ. ಈ ಅಂತರ್​ಧರ್ಮೀಯ ವಿವಾಹದಲ್ಲಿ ಎರಡೂ ಕಡೆಯವರ ರಿವಾಜುಗಳನ್ನು ಮೇಳೈಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ. ಈಗಾಗಲೇ ಸಂಗೀತ್​ ಮತ್ತು ಮೆಹೆಂದಿ ಸಮಾರಂಭಗಳಿಗೆ ತಯಾರಿ ನಡೆದಿದ್ದು, ವಿಶೇಷ ಥೀಮ್​ಗಳನ್ನು ಆಯ್ಕೆ ಮಾಡಿದ್ದಾರೆ. ಇನ್ನು ಪಾಶ್ಚಾತ್ಯರು ನಡೆಸುವಂತೆ ಮದುವೆಯ ನಂತರ ವಿಶೇಷ ಪಾರ್ಟಿ ಕೂಡ ನಡೆಯಲಿದೆ ಎಂದು ವರದಿಗಳು ತಿಳಿಸಿವೆ.

ಈ ಪೋಸ್ಟ್​​ ವೆಡ್ಡಿಂಗ್​ ಪಾರ್ಟಿಯಲ್ಲಿ ಕತ್ರೀನಾ ಸೋದರ ಮೈಕಲ್​​​ ಬೆಸ್ಟ್​​ ಮ್ಯಾನ್​ನಂತಿದ್ದು, ಟೋಸ್ಟ್​ ರೈಸ್​ ಮಾಡಲಿದ್ದಾರೆ. ಹಾಗೇ ನವಜೋಡಿಯ ಬಗ್ಗೆ ಪಾರಂಪರಿಕವಾದ ಭಾಷಣ ಮಾಡಲಿದ್ದಾರೆ ಎನ್ನಲಾಗಿದೆ. ಎರಡು ದಿನಗಳ ಹಿಂದಷ್ಟೆ ಭಾರತಕ್ಕೆ ಆಗಮಿಸಿರುವ ಪ್ರೊಫೆಷನಲ್​ ಸ್ಕೀಯರ್​ ಆದ ಮೈಕಲ್​​, ತಮ್ಮ ಸೋದರಿಯ ಮದುವೆ ಕೆಲಸದಲ್ಲಿ ನೆರವಾಗುತ್ತಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net