

ಪ್ರಿಯಾಂಕಾ ಚೋಪ್ರಾ ದಾಖಲೆ ಮೇಲೆ ದಾಖಲೆ ಮಾಡುತ್ತಿದ್ದಾರೆ. ಕೆಲವು ತಿಂಗಳುಗಳ ಹಿಂದೆ, ಇನ್ ಸ್ಟಾಗ್ರಾಂನಲ್ಲಿ ಪ್ರಾಯೋಜಿತ ಪೋಸ್ಟ್ ಮಾಡುವುದಕ್ಕೆ ಪ್ರಿಯಾಂಕಾ ಮೂರು ಕೋಟಿ ರೂ.ಗಳನ್ನು ಸಂಭಾವನೆ ಪಡೆಯುತ್ತಿದ್ದು, ಪ್ರಾಯೋಜಿತ ಪೋಸ್ಟ್ ಗಳ ಮೂಲಕ ಅತೀ ಹೆಚ್ಚು ಸಂಭಾವನೆ ಪಡೆಯುವ ಭಾರತದ ಮೊದಲ ಮತ್ತು ಜಗತ್ತಿನ 27ನೇ ಸೆಲೆಬ್ರಿಟಿ ಎಂದೆನಿಸಿಕೊಂಡಿದ್ದರು. ಈಗ ಇನ್ ಸ್ಟಾಗ್ರಾಂನಲ್ಲಿ ಅತೀ ಹೆಚ್ಚು ಹಿಂಬಾಲಕರಿರುವ ಮೊದಲ ಭಾರತೀಯ ನಟಿ ಎಂಬ ಹೆಗ್ಗಳಿಕೆಗೆ ಪ್ರಿಯಾಂಕಾ ಪಾತ್ರರಾಗಿ ಇರುವುದಷ್ಟೇ ಅಲ್ಲ, ಶ್ರದ್ಧಾ ಕಪೂರ್, ದೀಪಿಕಾ ಪಡುಕೋಣೆ, ಕತ್ರಿನಾ ಕೈಫ್ ಮುಂತಾದವರನ್ನು ಹಿಂದಿಕ್ಕಿದ್ದಾರೆ.
ಪ್ರಿಯಾಂಕಾಗೆ ಇನ್ ಸ್ಟಾಗ್ರಾಂನಲ್ಲಿ 72.3 ಮಿಲಿಯನ್ (7 ಕೋಟಿ 23 ಲಕ್ಷ) ಫಾಲೋವರ್ಸ್ ಇದ್ದಾರೆ. ಈ ಮೂಲಕ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ಭಾರತದ ಮೊದಲ ಸೆಲೆಬ್ರಿಟಿ ಎಂದೆನಿಸಿಕೊಂಡಿದ್ದಾರೆ. ಪ್ರಿಯಾಂಕಾ ಈಗ ಬಾಲಿವುಡ್ ನಟಿಯಾಗಷ್ಟೇ ಉಳಿದಿಲ್ಲ. ಹಾಲಿವುಡ್ ನಲ್ಲಿಯೂ ಸಕ್ರಿಯರಾಗಿ ಜಗತ್ತಿನಾದ್ಯಂತ ಲಕ್ಷಾಂತರ ಅಭಿಮಾನಿಗಳು ಸಂಪಾದಿಸಿದ್ದಾರೆ. ಹಾಗಾಗಿಯೇ ಆ ಅಭಿಮಾನ ಇನ್ ಸ್ಟಾಗ್ರಾಂನಲ್ಲೂ ಮುಂದುವರಿದಿದೆ. ಪ್ರಿಯಾಂಕಾ ನಂತರ ಅತೀ ಹೆಚ್ಚು ಫಾಲೋವರ್ಸ್ ಇರುವ ಭಾರತದ ಇನ್ನೊಬ್ಬ ಸೆಲೆಬ್ರಿಟಿಯಿಂದರೆ ಅದು ಶ್ರದ್ಧಾ ಕಪೂರ್. ಶ್ರದ್ಧಾಗೆ 68.5 ಮಿಲಿಯನ್ (6 ಕೋಟಿ 85 ಲಕ್ಷ) ಹಿಂಬಾಲಕರಿದ್ದಾರೆ. ದೀಪಿಕಾ ಪಡುಕೋಣೆ 63.4 ಮಿ, ಕತ್ರಿನಾ ಕೈಫ್ 60.4 ಮಿ, ಅಕ್ಷಯ್ ಕುಮಾರ್ 58.3 ಮಿ ಫಾಲೋವರ್ಸ್ ಹೊಂದಿದ್ದಾರೆ.