ತಿಮ್ಮನ ಮೊಟ್ಟೆಗಳು ಚಿತ್ರಕ್ಕೆ ‘ಯು’; ರಕ್ಷಿತ್ ನಿರ್ದೇಶನದ ನಂಬಿಕೆ, ಆಚರಣೆಗಳ ಕುರಿತ ಕಥೆ

thimmana mottegalu
Published on

ಬೆಂಗಳೂರು: ‘ಹೊಂಬಣ್ಣ’ ಬಳಿಕ ರಕ್ಷಿತ್ ತೀರ್ಥಹಳ್ಳಿ ಆ್ಯಕ್ಷನ್-ಕಟ್ ಹೇಳುತ್ತಿರುವ ಚಿತ್ರ ‘ತಿಮ್ಮನ ಮೊಟ್ಟೆಗಳು’. ಅವರೇ ಬರೆದ ‘ಕಾಡಿನ ನೆಂಟರು’ ಎಂಬ ಕಥಾಸಂಕಲನದಿಂದ ಆಯ್ದ ಕಥೆಯಿದು. ಇದೀಗ ಸಿನಿಮಾ ಆಗುತ್ತಿದೆ. ಮನುಷ್ಯನ ನಂಬಿಕೆ ಮತ್ತು ಆತನ ಆಚರಣೆಗಳ ಮೇಲೆ ಕೇಂದ್ರೀಕೃತವಾಗಿರುವ ಕಥಾಹಂದರವಿರುವ ಚಿತ್ರವಿದು.

ಚಿತ್ರಕ್ಕೆ ಇತ್ತೀಚೆಗಷ್ಟೆ ಸೆನ್ಸಾರ್ ಆಗಿದ್ದು, ‘ಯು’ ಸರ್ಟಿಫಿಕೇಟ್ ದೊರೆತಿದೆ. ಚಿತ್ರದಲ್ಲಿ ಶೃಂಗೇರಿಯ ರಂಗ ಪ್ರತಿಭೆ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ರಾಘು ರಾಮನಕೊಪ್ಪ, ಪ್ರಗತಿ ಪ್ರಭು, ಮಾಸ್ಟರ್ ಹರ್ಷ, ವಿನಯ್ ಕಣಿವೆ ಮುಂತಾದವರು ನಟಿಸಿದ್ದಾರೆ. ಉಳಿದಂತೆ ಪ್ರವೀಣ್. ಎಸ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜ್ ಸಂಕಲನ ಹಾಗೂ ಹೇಮಂತ್ ಜೋಯ್ಸ್ ಸಂಗೀತ ಚಿತ್ರಕ್ಕಿದೆ. ಮೂರು ಹಾಡುಗಳಿಗೆ ರಕ್ಷಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್, ಆದರ್ಶ್ ಅಯ್ಯಂಗಾರ್ ಮತ್ತು ಚಿನ್ಮಯಿ ಚಂದ್ರಶೇಖರ್ ಧ್ವನಿಯಾಗಿದ್ದಾರೆ.

ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಸುತ್ತಲಿನ ಹಲವು ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಇತ್ತೀಚೆಗಷ್ಟೆ ಚಿತ್ರದ ಮೇಕಿಂಗ್ ಟೀಸರ್ ಬಿಡುಗಡೆ ಮಾಡಿರುವ ಚಿತ್ರತಂಡ, ಸದ್ಯ ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net