

Honey Rose : ಸಾಮಾಜಿಕ ಜಾಲತಾಣದಲ್ಲಿ ಸದಾ ಬಿಜಿಯಾಗಿರುವವರಿಗೆ ಮಲಯಾಳಂ ಬ್ಯೂಟಿ ಹನಿ ರೋಸ್ ಬಗ್ಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ಹನಿ ರೋಸ್ ಅವರು ಸಿನಿಮಾಗಳಿಗಿಂತ ಜಾಲತಾಣದಲ್ಲೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಅವರ ಮೈಮಾಟಕ್ಕೆ ಅನೇಕ ಪಡ್ಡೆ ಹುಡುಗರು ಫಿದಾ ಆಗಿದ್ದಾರೆ. ಅವರ ಸೌಂದರ್ಯಕ್ಕೆ ಮಾರು ಹೋಗಿ ಹೆಚ್ಚಿನ ಸಂಖ್ಯೆಯಲ್ಲಿ ಅವರನ್ನು ಫಾಲೋ ಮಾಡುತ್ತಿದ್ದಾರೆ. ಸದ್ಯಕ್ಕೆ ಕೆಲ ತಮಿಳು ಮತ್ತು ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ಹನಿ ರೋಸ್ ಬಿಜಿಯಾಗಿದ್ದಾರೆ.
ವಿನಯನ್ ನಿರ್ದೇಶನದ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ನಟಿ ಹನಿ ರೋಸ್, ಚಿತ್ರರಂಗದಲ್ಲಿ 20 ಪೂರೈಸಿದ್ದಾರೆ. ಪ್ರಸ್ತುತ ಹನಿ ರೋಸ್ ರಾಚೆಲ್ ಸಿನಿಮಾದಲ್ಲಿ ಬಿಜಿಯಾಗಿದ್ದಾರೆ. ಸಿನಿಮಾ ಹೊರತಾಗಿ ಉದ್ಘಾಟನಾ ಸಮಾರಂಭಗಳಿಗೆ ಹನಿರೋಸ್ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಹನಿ ಭಾಗವಹಿಸಿದ ಎಲ್ಲ ಉದ್ಘಾಟನಾ ಸಮಾರಂಭಗಳಿಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಹನಿಯ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುವುದರ ಜತೆಗೆ, ಅವರ ವಿರುದ್ಧ ಸೈಬರ್ ದಾಳಿಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಇತ್ತೀಚೆಗೆ ಹನಿ ರೋಸ್ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ವ್ಯಕ್ತಿಯೊಬ್ಬ ಉದ್ದೇಶಪೂರ್ವಕವಾಗಿ ತನ್ನನ್ನು ಅವಮಾನಿಸಲು ಯತ್ನಿಸುತ್ತಿದ್ದಾನೆ ಎಂದು ಹನಿ ರೋಸ್ ಅರೋಪ ಮಾಡಿದ್ದಾರೆ. ಆದರೆ, ಆ ವ್ಯಕ್ತಿಯ ಹೆಸರನ್ನಾಗಲಿ ಅಥವಾ ಇತರ ಮಾಹಿತಿಯನ್ನಾಗಲಿ ಹನಿರೋಸ್ ಬಹಿರಂಗಪಡಿಸಿಲ್ಲ. ಫೇಸ್ಬುಕ್ನಲ್ಲಿ ಬರೆದುಕೊಂಡಿರುವ ಹನಿರೋಸ್, ಆಮಂತ್ರಣ ಬಂದಾಗ ಸಮಾರಂಭವೊಂದಕ್ಕೆ ಹೋಗಲು ನಿರಾಕರಿಸಿದ್ದೆ. ಇದಕ್ಕೆ ಪ್ರತೀಕಾರವಾಗಿ ಆ ವ್ಯಕ್ತಿ ಉದ್ದೇಶಪೂರ್ವಕವಾಗಿ ತನ್ನನ್ನು ಅವಮಾನಿಸುತ್ತಿದ್ದಾನೆ ಎಂದಿದ್ದಾರೆ.
ಆ ವ್ಯಕ್ತಿ ನಾನು ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಿಗೆ ಬರಲು ಪ್ರಯತ್ನಿಸುತ್ತಾನೆ ಮತ್ತು ಮಾಧ್ಯಮಗಳಲ್ಲಿ ನನ್ನನ್ನು ಅವಮಾನಿಸುವ ರೀತಿಯಲ್ಲಿ ನನ್ನ ಹೆಸರನ್ನು ಪ್ರಸ್ತಾಪಿಸುತ್ತಾನೆ. ಅಲ್ಲದೆ, ಡಬಲ್ ಮೀನಿಂಗ್ ಮಾತುಗಳನ್ನಾಡುತ್ತಾನೆ. ಇದ್ಯಾವುದಕ್ಕೂ ನಾನು ಪ್ರತಿಕ್ರಿಯಿಸದೇ ಇರುವ ಕಾರಣ ಅಂತಹ ಹೇಳಿಕೆಗಳನ್ನು ನೀವು ಆನಂದಿಸುತ್ತೀರಾ ಎಂದು ಅನೇಕ ಜನರು ನನ್ನನ್ನು ಪ್ರಶ್ನೆ ಮಾಡುತ್ತಾರೆ. ಆದರೆ, ಸಾಮಾನ್ಯವಾಗಿ ಮಾನಸಿಕ ಅಸ್ವಸ್ಥತೆ ಹೊಂದಿರುವವರು ಇಂತಹ ಹೇಳಿಕೆಗಳನ್ನು ನೀಡುತ್ತಾರೆ. ಹೀಗಾಗಿ ಅವರ ಮೇಲೆ ನನಗೆ ಸಹಾನುಭೂತಿ ಇದೆ ಎನ್ನುವ ಮೂಲಕ ಹನಿ ರೋಸ್ ತಿರುಗೇಟು ನೀಡಿದ್ದಾರೆ.
ಅಂದಹಾಗೆ ಹನಿ ರೋಸ್ ಅಭಿನಯದ ಹೊಸ ಚಿತ್ರ ‘ರಾಚೆಲ್’ ಜನವರಿ 10ರಂದು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಚಾಕುವಿನ ಅಂಚಿನ ಮಹಿಳೆಯ ಕಥೆ ಎಂದು ವಿವರಿಸಲಾಗಿದೆ. ಈ ಚಿತ್ರವನ್ನು ಆನಂದಿನಿ ಬಾಲಾ ನಿರ್ದೇಶಿಸಿದ್ದಾರೆ. (ಏಜೆನ್ಸೀಸ್)