

Coconut Water : ಸಾಮಾನ್ಯವಾಗಿ ಹೊರಗಡೆ ಓಡಾಡುವಾಗ ಬಹುತೇಕ ಮಂದಿ ತಮ್ಮ ಬಾಯಾರಿಕೆ ಅಥವಾ ದಣಿವನ್ನು ನೀಗಿಸಿಕೊಳ್ಳಲು ರಸ್ತೆ ಪಕ್ಕದಲ್ಲಿ ಮಾರಾಟ ಮಾಡುವ ಎಳನೀರಿನ ಮೊರೆ ಹೋಗುತ್ತಾರೆ. ಎಳನೀರು ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನ ನೀಡುವುದರಿಂದ ಅನೇಕರ ನೆಚ್ಚಿನ ಪಾನೀಯವಾಗಿದೆ. ಆದಾಗ್ಯೂ, ಕೆಲವು ವಿಷಯಗಳನ್ನು ತಿಳಿಯದೆ ಎಳನೀರನ್ನು ಕುಡಿಯಬಾರದು. ಎಳನೀರು ತುಂಬಾ ಆರೋಗ್ಯಕರ ಎಂಬುದು ಗೊತ್ತು ಆದರೆ, ಎಲ್ಲರಿಗೂ ಅಲ್ಲ ಎಂಬುದು ತಿಳಿದಿರಲಿ. ಕೆಲವು ಜನರು ಎಳನೀರಿನಿಂದ ಆದಷ್ಟು ದೂರವಿರಬೇಕು. ಈ ಕುರಿತಾದ ಉಪಯುಕ್ತ ಮಾಹಿತಿ ಇಲ್ಲಿದೆ.
ಎಳನೀರಿನಲ್ಲಿ ಪೊಟ್ಯಾಸಿಯಂ ಅಧಿಕವಾಗಿದೆ. ಆದ್ದರಿಂದ, ಕಿಡ್ನಿ ಸಮಸ್ಯೆ ಇರುವವರು ಆದಷ್ಟು ಎಳನೀರಿನಿಂದ ದೂರವಿರುವುದು ಉತ್ತಮ. ಇದು ದೇಹದಲ್ಲಿ ಪೊಟ್ಯಾಸಿಯಂ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹೈಪರ್ಕೆಲೇಮಿಯಾಕ್ಕೆ ಕಾರಣವಾಗಬಹುದು.
ಎಳನೀರಿನಲ್ಲಿ ಸಕ್ಕರೆ ಅಂಶವು ಹೆಚ್ಚಿರುವುದರಿಂದ ಮಧುಮೇಹ ಇರುವವರು ಇದನ್ನು ತ್ಯಜಿಸುವುದು ತುಂಬಾ ಉತ್ತಮ. ಏಕೆಂದರೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ಸಕ್ಕರೆಯನ್ನು ನಿಯಂತ್ರಣದಲ್ಲಿ ಇಡಲು ಎಳನೀರಿನಿಂದ ದೂರವಿರಿ.
ಎಳನೀರು ಕುಡಿಯುವುದರಿಂದ ಕೆಲವರಿಗೆ ಹೊಟ್ಟೆನೋವು ಉಂಟಾಗಬಹುದು. ಅಲ್ಲದೆ, ಉಬ್ಬುವಿಕೆ ಮತ್ತು ಅತಿಸಾರದಂತಹ ಸಮಸ್ಯೆಗಳನ್ನು ಸಹ ಉಂಟುಮಾಡಬಹುದು. ಏಕೆಂದರೆ, ಎಳನೀರಿನಲ್ಲಿ ಫೈಬರ್ ಮತ್ತು ಸಕ್ಕರೆ ಅಂಶ ಅಧಿಕವಾಗಿದೆ. ಜಂಕ್ ಫುಡ್ ತಿಂದಾಗ ಹೊಟ್ಟೆಯಲ್ಲಿ ಅಸ್ವಸ್ಥತೆಯ ಲಕ್ಷಣಗಳು ಕಂಡುಬಂದರೆ ಅಂತಹ ಸಮಯದಲ್ಲಿ ಎಳನೀರನ್ನು ತಪ್ಪಿಸುವುದು ಉತ್ತಮ.
ದೇಹದ ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಬಯಸುವವರು ತೆಂಗಿನ ನೀರನ್ನು ಸೇವಿಸಬಾರದು. ಮೊದಲೇ ಹೇಳಿದಂತೆ ಇದರಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುತ್ತದೆ. ಹೀಗಾಗಿ ತೂಕ ಹೆಚ್ಚಾಗುವ ಸಾಧ್ಯತೆ ಇದೆ. ಇದಿಷ್ಟೇ ಅಲ್ಲದೆ, ಅಲರ್ಜಿ ಇರುವವರು ಕೂಡ ಎಳನೀರಿನಿಂದ ದೂರವಿರುವುದು ತುಂಬಾನೇ ಉತ್ತಮ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.