

ಚೆನ್ನೈ: ಬಹುಭಾಷ ನಟಿ ತ್ರಿಷಾ ಅವರವನ್ನು ಪರಿಚಯಿಸುವ ಅಗತ್ಯವಿಲ್ಲ. ತಮಿಳು, ತೆಲುಗು ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ನಟಿಯಾಗಿರುವ ತ್ರಿಷಾ ಇಳಯದಳಪತಿ ವಿಜಯ್, ಸೂರ್ಯ, ವಿಕ್ರಮ್, ಪ್ರಭಾಸ್, ಚಿರಂಜೀವಿ, ಅಜಿತ್, ಸಿಂಬು ಸೇರಿದಂತೆ ಸ್ಟಾರ್ ನಟರ ಜೊತೆ ಅಭಿನಯಿಸಿದ್ದಾರೆ. ಕನ್ನಡದಲ್ಲೂ ದಿವಂಗತ ನಟ ಪುನೀತ್ ರಾಜ್ಕುಮಾರ್ ಅಭಿನಯದ ಪವರ್ಸ್ಟಾರ್ ಸಿನಿಮಾದಲ್ಲಿ ನಾಯಕಿಯಾಗುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.
ಇತ್ತೀಚೆಗಷ್ಟೇ ಅವರ ನಟನೆಯ ಪೊನ್ನಿಯನ್ ಸೆಲ್ವನ್ ಮತ್ತು ಲಿಯೋ ಸಿನಿಮಾ ಉತ್ತಮ ಯಶಸ್ಸು ಗಳಿಸಿತು. ಸಾಕಷ್ಟು ಸಿನಿಮಾಗಳಲ್ಲಿ ತ್ರಿಷಾ ಬಿಜಿಯಾಗಿದ್ದಾರೆ. ವಯಸ್ಸು 40 ಆದ್ರೂ ಬ್ಯಾಚುಲರ್ ಆಗಿಯೇ ಉಳಿದಿದ್ದಾರೆ. ಈ ಹಿಂದೆ ನಟ ಸಿಂಬು ಮತ್ತು ರಾಣ ದಗ್ಗುಬಾಟಿ ಅವರ ಜೊತೆ ತ್ರಿಷಾ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದು ವದಂತಿಯಾಗಿಯೇ ಉಳಿಯಿತು.
ಇದರ ನಡುವೆ ತ್ರಿಷಾ ಅವರು 2015ರಲ್ಲಿ ಉದ್ಯಮಿ ವರುಣ್ ಮಣಿಯನ್ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇದು ಬಹಳ ಸುದ್ದಿಯಾಗಿತ್ತು. ಅಲ್ಲದೆ, ನಿಶ್ಚಿತಾರ್ಥದ ಫೋಟೋಗಳು ಸಹ ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಆದರೆ, ಇಬ್ಬರ ನಡುವೆ ಏನಾಯಿತೋ ಗೊತ್ತಿಲ್ಲ, ಏಕಾಏಕಿ ಇಬ್ಬರೂ ಬೇರ್ಪಟ್ಟರು! ಮದುವೆಯೂ ನಿಂತುಹೋಯಿತು. ಇದೀಗ ಉದ್ಯಮಿ ವರುಣ್ ಮಣಿಯನ್, ನಟಿ ಬಿಂಧು ಮಾಧವಿ ಜತೆ ಡೇಟಿಂಗ್ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ತ್ರಿಷಾ ಕುರಿತ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ಅದೇನೆಂದರೆ, ತ್ರಿಷಾ ಮಲಯಾಳಂ ಇಂಡಸ್ಟ್ರಿಯ ನಿರ್ಮಾಪಕರನ್ನು ವರಿಸಲಿದ್ದಾರೆ ಎಂದು ಸುದ್ದಿಯಾಗಿದೆ. ಬಹಳ ದಿನಗಳ ಹಿಂದೆ ಸಿನಿಮಾವೊಂದರಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಪ್ರೇಮಾಂಕುರವಾಗಿದೆ ಮತ್ತು ಇದೇ ವರ್ಷ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಆದರೆ, ಇದನ್ನು ಸ್ವತಃ ತ್ರಿಷಾ ನಿರಾಕರಿಸಿದ್ದು, ಈ ಸುದ್ದಿಯಲ್ಲಿ ಯಾವುದೇ ಸತ್ಯವಿಲ್ಲ. ಸದ್ಯ ನಾನು ನನ್ನ ವೃತ್ತಿಜೀವನದತ್ತ ಗಮನಹರಿಸಿದ್ದೇನೆ. ಮದುವೆಯಾದರೆ ನಾನೇ ಮೊದಲು ಹೇಳುತ್ತೇನೆ ಎಂದಿದ್ದಾರೆ.
ಮದುವೆಯಾಗಿಲ್ಲ ಏಕೆ?
ಇನ್ನು ವಯಸ್ಸು 40 ದಾಟಿದರೂ ತ್ರಿಷಾ ಇನ್ನು ಯಾಕೆ ಮದುವೆಯಾಗುತ್ತಿಲ್ಲ ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಲೇ ಇದೆ. ಅದಕ್ಕೆ ಉತ್ತರವನ್ನು ತಮಿಳುನಾಡಿನ ಹಿರಿಯ ಪತ್ರಕರ್ತ ಹಾಗೂ ನಟ ಬೈಲ್ವಾನ್ ರಂಗನಾಥನ್ ತಮ್ಮ ಯೂಟ್ಯೂಬ್ ಚಾನೆಲ್ ಮೂಲಕ ನೀಡಿದ್ದಾರೆ. ಅನೇಕ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆದರೆ, ಕೆಲವರು ಬಹುಬೇಗ ವಿಚ್ಛೇದನ ಪಡೆಯುತ್ತಿದ್ದಾರೆ. ಇದೇ ಕಾರಣಕ್ಕೆ ತ್ರಿಷಾ ಮದುವೆಯಾಗುತ್ತಿಲ್ಲ ಎಂದು ರಂಗನಾಥನ್ ಹೇಳಿದ್ದಾರೆ.
ಮದುವೆಯಾದ ಎರಡ್ಮೂರು ವರ್ಷಗಳಲ್ಲೇ ವಿಚ್ಛೇದನವಾದರೆ, ನಂತರದ ಜೀವನದಲ್ಲಿ ಅದು ಒತ್ತಡವಾಗಿ ಪರಿಣಮಿಸುತ್ತದೆ. ಈ ರೀತಿ ಆಗಬಾರದೆಂಬ ಕಾರಣಕ್ಕೆ ಅವಿವಾಹಿತಳಾಗಿಯೇ ಉಳಿಯುತ್ತಾನೆ ಮತ್ತು ತನಗೆ ಯಾರೂ ಅಡ್ಡಿಯಾಗಬಾರದೆಂಬುದು ತ್ರಿಷಾ ಅವರ ನೀತಿಯಾಗಿದೆ ಎಂದು ಬೈಲ್ವಾನ್ ರಂಗನಾಥನ್ ಹೇಳಿದ್ದಾರೆ. ಇದು ರಂಗನಾಥನ್ ಅಭಿಪ್ರಾಯವಷ್ಟೇ ಆದರೆ, ತ್ರಿಷಾ ಅವರ ಮನಸ್ಸಿನಲ್ಲಿ ಏನಿದೆ ಎಂಬುದನ್ನು ಅವರೇ ಬಹಿರಂಗಪಡಿಸಬೇಕಿದೆ.
ಸಿನಿಮಾ ವಿಚಾರಕ್ಕೆ ಬಂದರೆ, ತ್ರಿಷಾ ಅವರು ಮೆಗಾಸ್ಟಾರ್ ಚಿರಂಜೀವಿ ನಟನೆಯ ವಿಶ್ವಂಭರಂ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದರೊಂದಿಗೆ ತಮಿಳು ಸಿನಿಮಾಗಳಾದ ವಿದ ಮುಯರ್ಚಿ, ಥಗ್ ಲೈಫ್ ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಮೋಹನ್ಲಾಲ್ ನಟನೆಯ ರಾಮ್ ಹೆಸರಿನ ಮಲಯಾಳಂ ಸಿನಿಮಾಗೂ ತ್ರಿಷಾ ನಾಯಕಿಯಾಗಿದ್ದಾರೆ. (ಏಜೆನ್ಸೀಸ್)