ನಾನೀಗ ರೆಡಿ, ಕರೆ ಮಾಡಿ ಭೇಟಿಯಾಗಿ ಆದ್ರೆ ಡಿನ್ನರ್​ಗೆ ಕರೆಯಬೇಡಿ! ನಟಿ ಕಿರಣ್ ರಾಥೋಡ್​ ಓಪನ್​ ಟಾಕ್​​

Kiran Rathod
Published on

ಹೈದರಾಬಾದ್​: ಕ್ಷಣ ಕ್ಷಣ, ಗನ್​ ಮತ್ತು ಮಾಣಿಕ್ಯ ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ಕಿರಣ್​ ರಾಥೋಡ್ ಅವರು ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಆದರೆ, ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿದ್ದು, ಅಲ್ಲಿನ ಮಂದಿಗೆ ಹೆಚ್ಚು ಹತ್ತಿರವಾಗಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೂ ಕಿರಣ್​ ಖ್ಯಾತಿ ಪಡೆದಿದ್ದರು. ಸಿನಿಮಾ ವೃತ್ತಿ ಜೀವನದಲ್ಲಿ ಉತ್ತುಂಗದಲ್ಲಿರುವಾಗಲೇ ಕಿರಣ್​ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಅಂದಿನಿಂದ ಸಿನಿಮಾ ಅವಕಾಶಗಳು ಸಹ ಕಿರಣ್​ ಕೈತಪ್ಪಿ ಹೋದವು. ಸದ್ಯ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ.

41 ವರ್ಷದ ಕಿರಣ್​, ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳನ್ನು ಶೇರ್​ ಮಾಡುವ ಮೂಲಕ ಅಭಿಮಾನಿಗಳ ಮೈ ಬಿಸಿಯೇರಿಸುತ್ತಿರುತ್ತಾರೆ. ಇದೀಗ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿರುವ ಕಿರಣ್​, ಸಿನಿಮಾದಿಂದ ದೂರವಾಗಲು ಕಾರಣವೇನು ಎಂಬುದನ್ನು ತಿಳಿಸಿದ್ದಾರೆ. ಅಲ್ಲದೆ, ಅವಕಾಶಗಳನ್ನು ನೀಡಿದರೆ ಮತ್ತೆ ಸಿನಿಮಾಗಳಲ್ಲಿ ನಟಿಸುವುದಾಗಿಯೂ ತಿಳಿಸಿದ್ದಾರೆ.

ನನಗ್ಯಾರು ಅವಕಾಶ ನೀಡುತ್ತಿಲ್ಲ

ನಾನು ಸತತವಾಗಿ ಐದು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿದರೂ ಸಹ ಇಂದು ಯಾರೂ ಕೂಡ ನನ್ನನ್ನು ಸಿನಿಮಾದಲ್ಲಿ ನಟಿಸಲು ಆಹ್ವಾನಿಸುತ್ತಿಲ್ಲ. ನಾನು ನಟಿಸಲು ರೆಡಿಯಾಗಿದ್ದೇವೆ. ಆದರೆ ನನಗ್ಯಾರು ಅವಕಾಶ ನೀಡುತ್ತಿಲ್ಲ. ನಾನು ಚೆನ್ನೈ ಅನ್ನು ತುಂಬಾ ಮಿಸ್​ ಮಾಡಿಕೊಳ್ಳುತ್ತಿದ್ದೇನೆ ಎಂದು ಕಿರಣ್​ ರಾಥೋಡ್​ ಹೇಳಿದ್ದಾರೆ.

ಡಿನ್ನರ್​ಗೆ ಕರೆಯಬೇಡಿ 

ನಾನು ಹೊಸ ನಿರ್ದೇಶಕರು, ಹೊಸ ಕತೆ ಹಾಗೂ ಹೊಸ ಪಾತ್ರಗಳಲ್ಲಿ ಅಭಿನಯಿಸಲು ರೆಡಿಯಾಗಿದ್ದೇನೆ. ನಾನು ಇಂದಿಗೂ ಅವಕಾಶ ಸಿಗಬಹುದು ಎಂಬ ಭರವಸೆಯಲ್ಲೇ ಬದುಕುತ್ತಿದ್ದೇನೆ. ಇಂದಿಗೂ ನನ್ನ ಹಳೆಯ ಫೋನ್​ ನಂಬರ್​ ಅನ್ನೇ ಇಟ್ಟುಕೊಂಡಿದ್ದೇನೆ ನನಗೆ ಕರೆ ಮಾಡಿ ಮತ್ತು ಭೇಟಿಯಾಗಿ. ನನಗೂ ಕತೆಗಳನ್ನು ಹೇಳಿ. ಕೆಲಸ ಮಾಡಲು ಮಾತ್ರ ಕರೆ ಮಾಡಿ. ಆದರೆ, ಡಿನ್ನರ್​ಗೆ ಕರೆಯಬೇಡಿ ಎಂದು ಕಿರಣ್​ ಕೇಳಿಕೊಂಡಿದ್ದಾರೆ.

ನಾನು ಮಾಡಿದ ಅತಿ ದೊಡ್ಡ ತಪ್ಪು

ಇದೇ ಸಂದರ್ಭದಲ್ಲಿ ಜೀವನದಲ್ಲಿ ತಾನು ಮಾಡಿದ ತಪ್ಪೊಂದನ್ನು ಬಹಿರಂಗಪಡಿಸಿದ್ದಾರೆ. ನಾನು ಈ ಹಿಂದೆ ಒಬ್ಬರನ್ನು ಪ್ರೀತಿ ಮಾಡಿದ್ದೆ. ಇದು ನನ್ನ ಜೀವನದಲ್ಲಿ ನಾನು ಮಾಡಿದ ಅತಿ ದೊಡ್ಡ ತಪ್ಪು. ಒಂದು ವೇಳೆ ನಾನು ಆ ತಪ್ಪನ್ನು ಮಾಡದೇ ಹೋಗಿದ್ದರೆ ಇಂದು ಜೀವನವೇ ಬೇರೆ ರೀತಿಯಲ್ಲಿ ಇರುತ್ತಿತ್ತು. ನಾನು ಸಿನಿಮಾದಿಂದ ಹೊರಗೆ ಉಳಿಯಲು ಇದೊಂದೆ ಕಾರಣವಲ್ಲ, ನನ್ನ ಉದ್ದೇಶಪೂರ್ವಕವಾಗಿಯೇ ಸಿನಿಮಾದಿಂದ ಹೊರಗಿಟ್ಟಿದ್ದಾರೆ. ಆದರೆ, ನಾನು ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇರುತ್ತೇನೆ. ಅವರು ಕೇಳುವಾಗ ನಾನು ಬಿಕಿನಿ ಫೋಟೋ ಶೇರ್​ ಮಾಡಿಕೊಂಡರೆ ಏನು ತಪ್ಪು ಎಂದು ಇದೇ ಸಂದರ್ಭದಲ್ಲಿ ಹೇಳಿದರು.

ಆ್ಯಪ್ ಡೌನ್​ಲೋಡ್​ಗೆ​ 49 ರೂಪಾಯಿ

ಕಿರಣ್​ ಅವರು ಇನ್​ಸ್ಟಾಗ್ರಾಂಗೆ ಸೀಮಿತವಾಗದ ಕಿರಣ್​, ಆ್ಯಪ್​ ಒಂದನ್ನು ಆರಂಭಿಸಿ ಆ ಮೂಲಕ ಉದ್ಯಮಕ್ಕೂ ಕೈಹಾಕಿದ್ದಾರೆ. ಅಭಿಮಾನಿಗಳಿಗಾಗಿ kiran.celebgaze.in ಎಂಬ ಆ್ಯಪ್​ ಮತ್ತು ವೆಬ್​ಸೈಟ್​ ತೆರೆದಿದ್ದಾರೆ. ಮೊಬೈಲ್​ನಲ್ಲಿ ಈ ಆ್ಯಪ್​ ಡೌನ್​ಲೋಡ್​ ಮಾಡಿಕೊಳ್ಳಬೇಕಾದರೆ 49 ರೂ. ಪಾವತಿಸಬೇಕು. ಆ್ಯಪ್​ ಮೂಲಕ ನೀವು ಸಾವಿರಾರು ರೂಪಾಯಿ ಪಾವತಿಸಿದರೆ ಕಿರಣ್​ ಅವರು ಗ್ಲಾಮರಸ್​ ಫೋಟೋಗಳನ್ನು ಕಳುಹಿಸಲಿದ್ದಾರಂತೆ. ಅದೇ ರೀತಿ ನೀವೇನಾದರೂ ಕಿರಣ್​ ಅವರ ಜತೆ 5 ನಿಮಿಷ ಮಾತನಾಡಲು ಬಯಸಿದರೆ, 10 ಸಾವಿರ ರೂ. ಪಾವತಿಸಬೇಕಾಗುತ್ತದೆ. ನೀವೇನಾದರೂ ವಿಡಿಯೋ ಮೂಲಕ 15 ನಿಮಿಷ ಮಾತನಾಡಲು ಇಚ್ಛಿಸಿದರೆ 14 ಸಾವಿರ ರೂ. ಪಾವತಿಸಬೇಕಾಗುತ್ತದೆ. 25 ನಿಮಿಷಗಳ ಕಾಲ ವಿಡಿಯೋ ಕಾಲ್​ನಲ್ಲಿ ಮಾತನಾಡಲು ಬಯಸಿದರೆ 25 ಸಾವಿರ ರೂ. ನೀಡಬೇಕಾಗುತ್ತದೆ. ಈಗಾಗಲೇ ಹಣ ಪಡೆಯುವ ಮೂಲಕ ಅಭಿಮಾನಿಗಳಿಗೆ ತಮ್ಮ ಗ್ಲಾಮರಸ್​ ಅವತಾರವನ್ನು ಕಿರಣ್​ ರಾಥೋಡ್​ ಅನಾವರಣಗೊಳಿಸಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಗ್ಲಾಮರಸ್​ ಫೋಟೋಗಳು ಸಣ್ಣ ಝಲಕ್​ ಅನ್ನು ಕಿರಣ್​ ಹರಿಬಿಡುತ್ತಿರುತ್ತಾರೆ. ಮತ್ತಷ್ಟು ಹಾಟ್​ ಅವತಾರಕ್ಕಾಗಿ ಆ್ಯಪ್​ ಮೊರೆ ಹೋಗಿ ಎಂದು ಪ್ರಚಾರ ಮಾಡುತ್ತಿದ್ದಾರೆ.

ಪ್ರಸ್ತುತ ಕಿರಣ್​ ಅವರು ವಿಜಯ್​ ನಟನೆಯ ಲಿಯೋ ಸಿನಿಮಾ ನಡಿಸುತ್ತಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಸ್ವತಃ ಕಿರಣ್​ ಅವರು ಖಚಿತಪಡಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net