

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ರಂಗಭೂಮಿಯಲ್ಲಿ ಹಲವು ವರ್ಷಗಳ ಕಾಲ ಅನುಭವ ಪಡೆದ ಪ್ರತಿಭಾನ್ವಿತರ ತಂಡವೊಂದು ಸೇರಿ ಮಾಡಿರುವ ಸಿನಿಮಾ "ಪ್ರಕರಣ ತನಿಖಾ ಹಂತದಲ್ಲಿದೆ'. ಸುಂದರ್ ಎಸ್ ಈ ಚಿತ್ರಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದು, ಇತ್ತೀಚೆಗಷ್ಟೆ ಚಿತ್ರದ ಟೈಟಲ್ ಟ್ರ್ಯಾಕ್ ಬಿಡುಗಡೆ ಮಾಡಲಾಗಿದೆ. ಇದೊಂದು ಕ್ರೈಮ್ ಜಾನರ್ ಚಿತ್ರವಾಗಿದ್ದು, ಶೀರ್ಷಿಕೆಯೇ ಹೇಳುವಂತೆ ಒಂದು ಪ್ರಕರಣದ ತನಿಖೆಯ ಸುತ್ತ ಕಥೆ ಸಾಗುತ್ತದೆ.
ಇಂತಹ ಕಥೆಗಳು ಈ ಹಿಂದೆ ಹಲವು ಬಂದಿದ್ದರೂ, ಭಿನ್ನ ಅಂಶಗಳನ್ನು ಸೇರಿಸಿ ಹೊಸ ರೀತಿಯಲ್ಲಿ ಸಿನಿಮಾ ಮಾಡುವ ಪ್ರಯತ್ನ ನಿರ್ದೇಶಕ ಸುಂದರ್ ಮತ್ತು ತಂಡದ್ದು. ಚಿತ್ರಕ್ಕೆ ಮಹೀನ್ ಕುಬೇರ್ ನಾಯಕನಾಗಿದ್ದು, ಮುತ್ತುರಾಜ್, ರಾಜ್ ಗಗನ್, ಚಿಂತನ್ ಕಂಬಣ್ಣ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಮೋಹನ್ ಮತ್ತು ಜಗದೀಶ್ ಛಾಯಾಗ್ರಹಣ, ಶಿವೋಹಂ ಸಂಗೀತ ನಿರ್ದೇಶನ, ನಾನಿ ಕೃಷ್ಣ ಸಂಕಲನ, ಲಕ್ಷಿ$್ಮಪತಿ ವಿಎಫ್ಎಕ್ಸ್ ಇರಲಿದೆ.
ಬೆಂಗಳೂರು ಮತ್ತು ಕನಕಪುರ ಸುತ್ತಮುತ್ತ "ಪ್ರಕರಣ ತನಿಖಾ ಹಂತದಲ್ಲಿದೆ' ಶೂಟಿಂಗ್ ನಡೆಸಲಾಗಿದೆ. ಸದ್ಯ ಶೀರ್ಷಿಕೆ ಗೀತೆ ಬಿಡುಗಡೆ ಮಾಡಿರುವ ಚಿತ್ರತಂಡ ಪ್ರಚಾರದ ಕೆಲಸ ಪ್ರಾರಂಭಿಸಿದ್ದು, ಕೆಲವೇ ದಿನಗಳಲ್ಲಿ ಟ್ರೇಲರ್ ರಿಲೀಸ್ ಮಾಡಿ ಯೋಜನೆ ಹಾಕಿಕೊಂಡಿದೆ.