ಮತ್ತೆ ಒಂದಾಯ್ತು ಪುನೀತ್- ಹೊಂಬಾಳೆ ಕಾಂಬಿನೇಷನ್; ಪವನ್ ನಿರ್ದೇಶನದ ಚಿತ್ರಕ್ಕೆ ನಾಳೆ ಶೀರ್ಷಿಕೆ ಘೋಷಣೆ

Puneeth
Published on

ಬೆಂಗಳೂರು: ಪುನೀತ್ ರಾಜಕುಮಾರ್ ಮತ್ತು ‘ಲೂಸಿಯಾ’ ಪವನ್ ಕುಮಾರ್ ಕಾಂಬಿನೇಷನ್ ಸಿನಿಮಾ ಇದೀಗ ಹೊಸ ಸುದ್ದಿಯೊಂದಿಗೆ ಬಂದಿದೆ. ಇಲ್ಲಿಯವರೆಗೂ ಈ ನಿರ್ದೇಶಕ ಮತ್ತು ನಾಯಕನ ಸಿನಿಮಾ ಶುರುವಾಗಲಿದೆ ಎಂಬುದಷ್ಟೇ ಅಂತಿಮವಾಗಿತ್ತು. ಇದೀಗ ಶೀರ್ಷಿಕೆ ಘೋಷಣೆಗೆ ಹಂತಕ್ಕೆ ಬಂದು ನಿಂತಿದೆ.

ಹೌದು, ಹೊಂಬಾಳೆ ಫಿಲಂಸ್ ಬ್ಯಾನರ್​ನಲ್ಲಿ ಸಿದ್ಧವಾಗಲಿರುವ ಈ ಚಿತ್ರದ ಶೀರ್ಷಿಕೆ ಅನಾವರಣ ನಾಳೆ ಅಂದರೆ, ಗುರುವಾರ ಬೆಳಗ್ಗೆ 11.46ಕ್ಕೆ ಟೈಟಲ್ ಘೋಷಣೆ ಆಗಲಿದೆ. ಪುನೀತ್​ ರಾಜಕುಮಾರ್ ಮತ್ತು ಪವನ್ ಕುಮಾರ್ ಮೊದಲ ಬಾರಿ ಈ ಸಿನಿಮಾ ಮೂಲಕ ಒಂದಾಗುತ್ತಿದ್ದು, ಈ ಇಬ್ಬರ ಕಾಂಬಿನೇಷನ್​ನಲ್ಲಿ ಸಿನಿಮಾ ಹೇಗೆ ಮೂಡಿಬರಲಿದೆ ಎಂಬ ಕುತೂಹಲ ಅಭಿಮಾನಿ ವಲಯದಲ್ಲಿ ಸಾಕಷ್ಟಿದೆ.

ಸದ್ಯ ಚೇತನ್​ಕುಮಾರ್ ಜತೆಗೆ ‘ಜೇಮ್ಸ್’ ಸಿನಿಮಾದಲ್ಲಿ ಬಿಜಿಯಾಗಿರುವ ಪುನೀತ್, ಈಗಾಗಲೇ ಒಂದಷ್ಟು ಭಾಗದ ಶೂಟಿಂಗ್​ ಸಹ ಮುಗಿಸಿದ್ದಾರೆ. ಈ ಚಿತ್ರದ ಜತೆಗೆ ಪವನ್​ ಕುಮಾರ್ ನಿರ್ದೇಶನದ ಚಿತ್ರದಲ್ಲಿಯೂ ಅವರು ಭಾಗವಹಿಸಲಿದ್ದಾರೆ. ಅದಾದ ಬಳಿಕ ನಿರ್ದೇಶಕ ಕೃಷ್ಣ ಜತೆ ಕೈ ಜೋಡಿಸಲಿದ್ದಾರೆ.

ಇಲ್ಲಿಯವರೆಗೂ ಪವನ್ ಕುಮಾರ್ ತಮ್ಮದೇ ವಿಶಿಷ್ಟ ಶೈಲಿಯ ಸಿನಿಮಾಗಳಿಂದಲೇ ಖ್ಯಾತರಾಗಿದ್ದಾರೆ. ಹೀಗಿರುವಾಗ ಪುನೀತ್ ಅವರಿಗೆ ಮಾಡಿದ ಕಥೆ ಎಂಥದ್ದು? ಕಮರ್ಷಿಯಲ್ ಆಗಿರಲಿದೆಯೇ ಅಥವಾ ಸಸ್ಪೆನ್ಸ್ ಥ್ರಿಲ್ಲರ್​ ಶೈಲಿಯ ಚಿತ್ರವಾಗಿರಲಿದೆಯೇ ಎಂಬುದು ಸದ್ಯದ ಕುತೂಹಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net