

ಮುಂಬೈ: ಬಾಲಿವುಡ್ ಬಾದ್ಷಾ ಎಂದೇ ಜನಪ್ರಿಯರಾಗಿರುವ ಶಾರೂಖ್ ಖಾನ್ ಮಗಳು ಸುಹಾನಾ ಖಾನ್ ಅವರ 21ನೇ ಹುಟ್ಟುಹಬ್ಬ ಇಂದು. ತಮ್ಮ ಮಗಳನ್ನು ಬಹಳ ಪ್ರೀತಿಸುವ ಶಾರೂಖ್, ಆಕೆಯ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಎಲ್ಲ ಸರಿ, ಮುಂದೊಂದು ದಿನ ಸುಹಾನಾ ಯಾರನ್ನಾದರೂ ಪ್ರೀತಿಸಿದರೆ ಏನು ಮಾಡುತ್ತೀರಾ ಎಂಬ ಪ್ರಶ್ನೆಯನ್ನು ಅವರಿಗೆ ಕೆಲವು ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಕೇಳಲಾಗಿದೆ. ಅದಕ್ಕೆ ಉತ್ತರಿಸಿರುವ ಶಾರೂಖ್, ತನ್ನ ಮಗಳ ಬಾಯ್ಫ್ರೆಂಡ್ಗಳಿಗೆ ಏಳು ನಿಯಮಗಳನ್ನು ರೂಪಿಸಿರುವುದಾಗಿ ಹೇಳುತ್ತಾರೆ. ಅಷ್ಟೇ ಅಲ್ಲ, ಆ ನಿಯಮಗಳೇನು ಎಂದು ವಿವರಿಸುತ್ತಾರೆ.
ಹೀಗೆ ಏಳು ನಿಯಮಗಳನ್ನು ಸುಹಾನಾ ಅವರ ಭವಿಷ್ಯದ ಬಾಯ್ಫ್ರೆಂಡ್ಗಳನ್ನು ಒಡ್ಡುವುದಾಗಿ ಶಾರೂಖ್ ಹೇಳಿದ್ದರು. ಅಷ್ಟೇ ಅಲ್ಲ, ಇವೆಲ್ಲ ಮಾತಾಡುವುದಕ್ಕೆ ಚೆನ್ನ, ನಾಳೆ ಆಕೆ ಯಾರನ್ನಾದರೂ ಕರೆದುಕೊಂಡು ಬಂದು ಇವ ನನ್ನ ಬಾಯ್ಫ್ರೆಂಡ್ ಎಂದರೆ, ತನಗೆ ಒಪ್ಪದೆ ಬೇರೆ ದಾರಿ ಇರುವುದಿಲ್ಲ ಎಂದು ಸಹ ಹೇಳಿಕೊಂಡಿದ್ದಾರೆ.
ಇವೆಲ್ಲವೂ ತಮಾಷೆಗೆ ಹೇಳಬಹುದು. ಆದರೆ, ಮಗಳು ಬಂದು ತನ್ನ ಭಾಯ್ಫ್ರೆಂಡ್ ಇವನೇ ಎಂದು ತೋರಿಸಿದರೆ, ನಾನು ಮರುಮಾತಾಡದೇ ಒಪ್ಪಬಹುದು. ಆದರೆ, ಹೇಳುವುದಕ್ಕೇನಿದೆ. ಇದನ್ನು ಓದಿ, ಒಂದಿಷ್ಟು ಹುಡುಗರಿಗೆ ನನ್ನ ಮೇಲೆ ಗೌರವ ಅಥವಾ ಭಯ ಜಾಸ್ತಿಯಾಗಿ, ಸುಹಾನಾಳನ್ನು ಇನ್ನೂ ಚೆನ್ನಾಗಿ ನೋಡಿಕೊಂಡರೆ ಒಳ್ಳೆಯದೇ ಅಲ್ಲವೇ ಎನ್ನುತ್ತಾರೆ ಶಾರೂಖ್.