'ಬಾಹುಬಲಿ'ಯಂತಹ ಸೀಕ್ವೇಲ್ ಸಿನಿಮಾಗಳನ್ನು ನೀಡಿದ ಯಶಸ್ವಿ ನಿರ್ದೇಶಕ ಎಸ್.ಎಸ್.ರಾಜಮೌಳಿ ಅವರ ಬಹು ನಿರೀಕ್ಷಿತ ಚಿತ್ರ 'RRR'. ಈ ಸಿನಿಮಾ ರಿಲೀಸ್ಗೂ ಮುನ್ನವೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇದರ ಜೊತೆಗೆ, ಸಿನಿಮಾದಲ್ಲಿ ನಟಿಸಿದ ನಟ, ನಟಿಯರ ಸಂಭಾವನೆಯ ಸುದ್ದಿಗಳು ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿವೆ. ಹಾಗಾದರೆ, ಚಿತ್ರದಲ್ಲಿ ಯಾರು ಯಾರು ಎಷ್ಟು ಸಂಭಾವನೆ ಪಡೆಯುತ್ತಿದ್ದಾರೆ ಅಂತೀರಾ?