ಪಾಯಲ್ ನಾಯಕಿಯಾಗಿರುವ ಮಂಗಳವಾರಂ ಚಿತ್ರದ ರಿಲೀಸ್ ಡೇಟ್ ಅನೌನ್ಸ್!

payal
Published on

ತೆಲುಗಿನ ‘ಆರ್‌ಎಕ್ಸ್ 100’ ಖ್ಯಾತಿಯ ನಿರ್ದೇಶಕ ಅಜಯ್ ಭೂಪತಿ ಆ್ಯಕ್ಷನ್-ಕಟ್ ಹೇಳಿರುವ ಸಿನಿಮಾ ‘ಮಂಗಳವಾರಂ’. ಇದೊಂದು ಆ್ಯಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಕನ್ನಡದಲ್ಲಿ ಡಾಲಿ ಧನಂಜಯ ಜತೆ ‘ಹೆಡ್ ಬುಷ್’, ಬಾಲಿವುಡ್‌ನಲ್ಲಿ ‘ವೀರೆ ಕಿ ವೆಡ್ಡಿಂಗ್’, ತಮಿಳಿನ ‘ಇರಿವರ್ ಉಳ್ಳಮ್’, ತೆಲುಗಿನಲ್ಲಿ ‘ವೆಂಕಿ ಮಾಮ, ‘ಆರ್‌ಡಿಎಕ್ಸ್ ಲವ್’ ಸೇರಿ ಹಲವು ಭಾಷೆಗಳಲ್ಲಿ ನಟಿಸಿರುವ ಪಾಯಲ್ ರಜಪೂತ್ ‘ಮಂಗಳವಾರಂ’ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ನಿರ್ದೇಶನದ ಜತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಅಜಯ್ ಭೂಪತಿ ಹೊತ್ತಿದ್ದಾರೆ. ಪಾಯಲ್ ಜತೆ ಶ್ರೀತೇಜ್, ಚೈತನ್ಯ ಕೃಷ್ಣ, ಅಜಯ್ ೋಷ್, ಲಕ್ಷ್ಮಣ್ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ‘ಮಂಗಳವಾರಂ’ ಚಿತ್ರಕ್ಕೆ ಕನ್ನಡದ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇರಲಿದೆ. ಜತೆಗೆ ದಶರಥಿ ಶಿವೇಂದ್ರ ಛಾಯಾಗ್ರಹಣ, ರಘು ಕುಲಕರ್ಣಿ ಕಲಾ ನಿರ್ದೇಶನವಿರಲಿದೆ.

ನವೆಂಬರ್ 17ರಂದು ‘ಮಂಗಳವಾರಂ’ ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ.
-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net