ಸಲ್ಮಾನ್​ ಖಾನ್​ ಮಾನನಷ್ಟ ಕೇಸ್​ ಹೂಡಿದ್ದು ಯಾಕೆ? ಇಲ್ಲಿದೆ ಉತ್ತರ ...

Salman Khan - KRK - Final
Published on

ಮುಂಬೈ: ನಟ ಮತ್ತು ವಿಮರ್ಶಕ ಕಮಾಲ್ ಆರ್ ಖಾನ್ ಅಲಿಯಾಸ್ ಕೆಆರ್‌ಕೆ ವಿರುದ್ಧ ಸಲ್ಮಾನ್ ಖಾನ್ ಮಾನನಷ್ಟ ಮೊಕದ್ದಮೆ ಹೂಡಿದ ವಿಷಯ ಗೊತ್ತೇ ಇದೆ. ಕಳೆದೆರೆಡು ದಿನಗಳಿಂದ ಈ ಸುದ್ದಿ ಬಾಲಿವುಡ್​ನಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

ಇಷ್ಟಕ್ಕೂ, ಕೆಆರ್​ಕೆ ವಿರುದ್ಧ ಸಲ್ಮಾನ್​ ಮೊಕದ್ದಮೆ ಹೂಡಿದ್ದು ಯಾಕೆ? ಎಂಬ ಪ್ರಶ್ನೆಗೆ ರಾಧೇ ಎಂಬ ಉತ್ತರ ಬರುತ್ತದೆ. ಕೆಲವು ದಿನಗಳ ಹಿಂದೆ ಸಲ್ಮಾನ್​ ಅಭಿನಯದ ರಾಧೇ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ನೋಡಿ ಹಿಗ್ಗಾಮುಗ್ಗ ಬೈದು ವಿಮರ್ಶೆ ಮಾಡಿದ್ದರು ಕೆಆರ್​ಕೆ. ಈ ವಿಮರ್ಶೆಯಿಂದ ಚಿತ್ರಕ್ಕೆ ಸಾಕಷ್ಟು ಸಮಸ್ಯೆ ಆಗಿತ್ತು ಮತ್ತು ಇದರಿಂದ ಬೇಸತ್ತು ಸಲ್ಮಾನ್​ ಕೇಸು ಜಡಿದಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆದರೆ, ವಿಷಯ ಬೇರೆಯೇ ಇದೆಯಂತೆ. ಮೂಲಗಳ ಪ್ರಕಾರ, ಕಳೆದ ವರ್ಷ ಸುಶಾಂತ್​ ಸಿಂಗ್​ ರಜಪೂತ್​ ನಿಧನರಾದ ಸಂದರ್ಭದಲ್ಲಿ, ಅವರ ಸಾವಿಗೆ ಸಲ್ಮಾನ್​ ಸಹ ಒಬ್ಬರು ಕಾರಣ ಎಂದು ಕೆಆರ್​ಕೆ ಹೇಳಿದ್ದರು. ಅಷ್ಟೇ ಅಲ್ಲ, ಸಲ್ಮಾನ್​ ಪರಮ ಭ್ರಷ್ಟ ಮತ್ತು ಬೀಯಿಂಗ್​ ಹ್ಯೂಮನ್​ ಬ್ರಾಂಡ್​ ಮೂಲಕ ಸಾಕಷ್ಟು ಮೋಸ ಮಾಡಿದ್ದಾರೆ ಎಂದು ಹೇಳಿದ್ದರು. ಪ್ರಚಾರಕ್ಕೋಸ್ಕರ ಸಲ್ಮಾನ್​ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಕೆಆರ್​ಕೆ ಮಾಡುತ್ತಲೇ ಬಂದಿರುವುದರಿಂದ, ಅವರ ಮೇಲೆ ಮಾನನಷ್ಟ ಮೊಕದ್ದಮೆ ಕೇಸು ಹಾಕಲಾಗಿದೆ ಎಂದು ಹೇಳಲಾಗುತ್ತಿದೆ.

ಇದು ನಿಜವೇ ಆಗಿದ್ದರೆ, ಹಲವು ಪ್ರಶ್ನೆಗಳು ಉದ್ಭವಿಸುವುದು ಸಹಜ. ಏಕೆಂದರೆ, ಸಲ್ಮಾನ್​ ವಿರುದ್ಧ ಕೆಆರ್​ಕೆ ಹಲವು ಆರೋಪಗಳನ್ನು ಮಾಡಿ, ಒಂದು ವರ್ಷವಾಗುತ್ತಿದೆ. ಇಷ್ಟು ದಿನಗಳ ಕಾಲ ಸುಮ್ಮನೆ ಸುಮ್ಮನಿದ್ದ ಸಲ್ಮಾನ್​, ಈಗ್ಯಾಕೆ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂಬ ಪ್ರಶ್ನೆ ಬಾಲಿವುಡ್​ ಮಂದಿಯ ನಡುವೆ ಕೇಳಿಬರುತ್ತಿದೆ. ಈ ಪ್ರಶ್ನೆಗೆ ಸಲ್ಮಾನ್​ ಯಾವಾಗ ಉತ್ತರಿಸುತ್ತಾರೋ?

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net