ಈ ಕಾರಣಕ್ಕೆ ನಾನು ಅನಂತ್​ ಅಂಬಾನಿ ಮದ್ವೆಗೆ ಹೋಗಲಿಲ್ಲ! ಅಚ್ಚರಿಯ ಹೇಳಿಕೆ ನೀಡಿದ ತಾಪ್ಸಿ ಪನ್ನು

Taapsee Pannu,
Published on

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಅನಂತ್​ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯ ಸುದ್ದಿಯೇ ಟ್ರೆಂಡಿಂಗ್ ಆಗಿದೆ. ಜುಲೈ 12ರ ಶುಕ್ರವಾರದಂದು ಅನಂತ್ ಅಂಬಾನಿ ಅವರ ವಿವಾಹ ಸಮಾರಂಭ ನೆರವೇರಿತು. ಈ ಮದುವೆಗೆ ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು. ಬಾಲಿವುಡ್, ಟಾಲಿವುಡ್​, ಕಾಲಿವುಡ್​ ಮತ್ತು ಸ್ಯಾಂಡಲ್​ವುಡ್​ ಸ್ಟಾರ್ ಹೀರೋಗಳು, ಹೀರೋಯಿನ್​ಗಳು ಮಿಂಚಿದರು.

ಇನ್ನು ವಿರಾಟ್​ ಕೊಹ್ಲಿ ಸೇರಿದಂತೆ ಕೊಲೆ ಸೆಲೆಬ್ರಿಟಿಗಳು ಅನಂತ್​ ಅಂಬಾನಿ ಮದ್ವೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ಆ ಸೆಲೆಬ್ರಿಟಿಗಳಲ್ಲಿ ಸ್ಟಾರ್ ಹೀರೋಯಿನ್ ತಾಪ್ಸಿ ಪನ್ನು ಕೂಡ ಒಬ್ಬರು. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಭಾಗಿಯಾದ ತಾಪ್ಸಿ, ಅಂಬಾನಿ ಮಗನ ಮದುವೆಗೆ ಹೋಗದಿರಲು ಕಾರಣ ಏನೆಂಬುದನ್ನು ಬಹಿರಂಗಪಡಿಸಿದ್ದಾರೆ.

ಮದುವೆಗೆ ಹಲವು ರೀತಿಯ ಬಾಂಧವ್ಯಗಳಿವೆ. ಜೀವನದ ಈ ಆಚರಣೆಯು ಪ್ರತಿಯೊಬ್ಬರಿಗೂ ಬಹಳ ವಿಶೇಷವಾಗಿರುತ್ತದೆ. ಆತಿಥೇಯ ಕುಟುಂಬ ಮತ್ತು ಅತಿಥಿ ನಡುವೆ ಕೆಲವು ರೀತಿಯ ಸಂಪರ್ಕವನ್ನು ಹೊಂದಿರಬೇಕು ಎಂದು ನಾನು ಭಾವಿಸುತ್ತೇನೆ. ನಾನು ತಿಳಿದವರ ಮದುವೆಗೆ ಹೋಗುತ್ತೇನೆ. ಅಂಬಾನಿ ಕುಟುಂಬಕ್ಕೂ ನನಗೂ ವೈಯಕ್ತಿಕವಾಗಿ ಯಾವುದೇ ಸಂಬಂಧವಿಲ್ಲ. ಈ ಕಾರಣಕ್ಕಾಗಿ ನಾನು ಆ ಮದುವೆಗೆ ಹೋಗಲಿಲ್ಲ. ಅದು ಬಿಟ್ಟರೆ ಅದರಲ್ಲಿ ಬೇರೇನೂ ಇಲ್ಲ' ಎಂದು ತಾಪ್ಸಿ ಉತ್ತರಿಸಿದರು.

ಇನ್ನು ತಾಪ್ಸಿ ಅವರು ಸಿನಿಮಾಗಳ ವಿಚಾರಕ್ಕೆ ಬಂದರೆ ವೋ ಲಡ್ಕಿ ಹೈ ಕಹಾನ್, ಫಿರ್ ಆಯಿ ಹಸೀನಾ ದಿಲ್ ರುಬಾ, ಖೇಲ್ ಖೇಲ್ ಮೇ ಎಂಬ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೇ ವರ್ಷ ತಮ್ಮ ಬಾಯ್‌ಫ್ರೆಂಡ್‌ನೊಂದಿಗೆ ತಾಪ್ಸಿ ಸಪ್ತಪದಿ ತುಳಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net