

ಚೆನ್ನೈ: ಇಂದು ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿಯಾಗಿರುವ ನಯನತಾರಾ ಆರಂಭದಲ್ಲಿ ಆ್ಯಂಕರ್ ಆಗಿ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಿದವರು. ಸೌತ್ ಇಂಡಸ್ಟ್ರಿಯಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿ, ಇದೀಗ ಬಾಲಿವುಡ್ ಇಂಡಸ್ಟ್ರಿಯಲ್ಲೂ ಯಶಸ್ಸ ಗಳಿಸಿದ್ದಾರೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದರು ನಯನತಾರಾ ಕ್ರೇಜ್ ಮಾತ್ರ ಕಮ್ಮಿ ಆಗಿಲ್ಲ. ಈಗಲೂ ಅವರ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಎಂತಹ ಬಿಜಿ ಲೈಫ್ನಲ್ಲೂ ಕುಟುಂಬಕ್ಕೆ ಸಮಯ ಕೊಡುವುದನ್ನು ನಯನತಾರಾ ಮರೆಯಲ್ಲ. ಈಗಾಗಲೇ 75 ಚಿತ್ರಗಳನ್ನು ಮುಗಿಸಿರುವ ಈ ಲೇಡಿ ಸೂಪರ್ ಸ್ಟಾರ್ ಇತ್ತೀಚಿನ ದಿನಗಳಲ್ಲಿ ನಾಯಕಿ ಪ್ರಧಾನ ಚಿತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಎಷ್ಟೇ ಬಿಜಿ ಇದ್ದರೂ ಮಕ್ಕಳು, ಪತಿಯೊಂದಿಗೆ ಕಾಲ ಕಳೆಯುತ್ತಾರೆ. ಇತ್ತೀಚೆಗಷ್ಟೇ ನಯನತಾರಾ-ವಿಘ್ನೇಶ್ ಶಿವನ್ ದಂಪತಿ ತಮ್ಮ ಮಕ್ಕಳೊಂದಿಗೆ ಚೀನಾ ಪ್ರವಾಸಕ್ಕೆ ತೆರಳಿದ್ದರು. ಅಲ್ಲಿ ತಮ್ಮ ಎರಡನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.
ಆದರೆ ನಯನ ಸದಾ ಒಂದಿಲ್ಲೊಂದು ವಿವಾದದಲ್ಲಿ ಭಾಗಿಯಾಗುತ್ತಲೇ ಇರುತ್ತಾರೆ. ಇತ್ತೀಚೆಗೆ ಖ್ಯಾತ ನಿರ್ಮಾಪಕ ಅನಂತನನ್, ನಯನ ವಿರುದ್ಧ ಆಘಾತಕಾರಿ ಆರೋಪಗಳನ್ನು ಮಾಡಿದ್ದಾರೆ. ತಾವು ವಾಸಿಸುತ್ತಿದ್ದ ಅಪಾರ್ಟ್ಮೆಂಟ್ನಲ್ಲಿ ನಯನತಾರಾ ಗಲಾಟೆ ಮಾಡಿ ದೊಡ್ಡ ತಲೆನೋವನ್ನು ಸೃಷ್ಟಿಸಿದ್ದರು ಎಂದಿದ್ದಾರೆ.
ನಯನ-ವಿಕ್ಕಿ ದಂಪತಿಗೆ ಗಂಡು ಮಗು ಇರುವುದು ಗೊತ್ತೇ ಇದೆ. ಮಕ್ಕಳು ಬಾಡಿಗೆ ತಾಯ್ತನದ ಮೂಲಕ ಜನಿಸಿದರು. ಆದರೆ, ಚೆನ್ನೈನ ಎಗ್ಮೋರ್ ಬಳಿಯ ಅಪಾರ್ಟ್ಮೆಂಟ್ನಲ್ಲಿ ನಯನತಾರಾ ವಾಸವಾಗಿದ್ದಾಗ ಮಕ್ಕಳನ್ನು ಆಟವಾಡಲು ಕೆಳಗಡೆ ಕರೆದುಕೊಂಡು ಬರುತ್ತಿದ್ದರು. ಹೀಗಿರುವಾಗ ಒಂದು ದಿನ ಆಟೋ ಚಾಲಕನೊಬ್ಬ ಅಲ್ಲಿಗೆ ಸವಾರಿ ಮಾಡಲು ಬಂದಿದ್ದ. ಆದರೆ ಮಕ್ಕಳ ಆಟವಾಡುವ ಜಾಗದಲ್ಲಿ ಯಾಕೆ ಇಷ್ಟು ವೇಗವಾಗಿ ಆಟೋ ತರುತ್ತಿದ್ದೀರಿ ಎಂದು ಆತನೊಂದಿಗೆ ಜಗಳಕ್ಕಿಳಿದಿದ್ದರು ಎಂದು ಅನಂತನನ್ ಹೇಳಿದ್ದಾರೆ.
ಅದೂ ಅಲ್ಲದೆ ಒಮ್ಮೆ ಫುಡ್ ಡೆಲಿವರಿ ಮಾಡುವವರ ಜೊತೆಯು ಫೋನ್ನಲ್ಲಿ ನಯನ ಕೂಗಾಡಿದ್ದರು. ಅಲ್ಲದೆ ಈಜುಕೊಳದಲ್ಲಿ ಸ್ನಾನ ಮಾಡುವ ವಿಚಾರದಲ್ಲೂ ಜಗಳ ನಡೆದಿದೆ. ಆಕೆಯ ವರ್ತನೆಯಿಂದ ಅಪಾರ್ಟ್ಮೆಂಟ್ನ ಇತರೆ ನಿವಾಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿತು. ಮಧ್ಯರಾತ್ರಿಯಲ್ಲೂ ಜೋರಾಗಿ ಕಿರುಚುತ್ತಿದ್ದರು. ನಯನ ವಿರುದ್ಧ ಕಲಾವಿದರ ಸಂಘಕ್ಕೆ ಸುಮಾರು 50 ದೂರುಗಳು ಬಂದಿವೆ ಎಂದು ಅನಂತನನ್ ತಿಳಿಸಿದ್ದಾರೆ.
ಆಕೆಯನ್ನು ಖಾಲಿ ಮಾಡು ಎಂದು ಹೇಳಿದ ಮೇಲೆ ಅಪಾರ್ಟ್ಮೆಂಟ್ ಖಾಲಿ ಮಾಡಿದಂತಿದೆ. ಆದರೆ ಇದೀಗ ಈ ಲೇಡಿ ಸೂಪರ್ ಸ್ಟಾರ್ ಚೆನ್ನೈ ಪೋಯಸ್ ಗಾರ್ಡನ್ನಲ್ಲಿ ಬೃಹತ್ ಬಂಗಲೆ ನಿರ್ಮಿಸಿ ನೆಲೆಸಿದ್ದಾರೆ.ಅನಂತನನ್ ಮಾತುಗಳನ್ನು ನೋಡಿದರೆ ಅಪಾರ್ಟ್ಮೆಂಟ್ನಲ್ಲಿ ಆಗಾಗ ಜಗಳ ನಡೆಯುತ್ತಿರೋದ್ರಿಂದ ನಟಿ ನಯನತಾರಾ ಅಪಾರ್ಟ್ಮೆಂಟ್ ಖಾಲಿ ಮಾಡಿದ್ದಾರಾ ಎಂಬ ಪ್ರಶ್ನೆ ಮೂಡಿದೆ. ಇದೇ ಸಂದರ್ಭದಲ್ಲಿ ಅನಂತನನ ಅವರ ಕಾಮೆಂಟ್‌ಗಳ ಕುರಿತು, ನೆಟಿಜನ್‌ಗಳು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದರೆ, ಇನ್ನು ಕೆಲವರು ಪಾಸಿಟಿವ್ ಕಾಮೆಂಟ್ ಮಾಡುತ್ತಿದ್ದಾರೆ. (ಏಜೆನ್ಸೀಸ್)