'ಅರೇಬಿಕ್ ಕುತ್ತು' ಸಾಂಗ್ ನೋಡಿದ ದಳಪತಿ ಅಭಿಮಾನಿಗಳು ಸೆಮ್ಮ ಹಾಟ್ ಎಂದಿದ್ದಾರೆ! ವಿಡಿಯೋ ವೈರಲ್...

Published on
ತಮಿಳು ನಟ ದಳಪತಿ ವಿಜಯ್ ಮತ್ತು ನಟಿ ಪೂಜಾ ಹೆಗ್ಡೆ ಅವರ ಮುಂಬರುವ 'ಬೀಸ್ಟ್' ಚಿತ್ರದ 'ಅರೇಬಿಕ್ ಕುತ್ತು' ಹಾಡು ಪ್ರೇಮಿಗಳ ದಿನದಂದು ರಿಲೀಸ್ ಆಗಿದೆ. ಈ ಹಾಡಿನಲ್ಲಿ ತಮ್ಮ ಡ್ಯಾನ್ಸ್ ಮತ್ತು ಉಡುಪುಗಳ ಮೂಲಕ ವಿಜಯ್ ಮತ್ತು ಪೂಜಾ ಅವರ ಅಭಿಮಾನಿಗಳ ನಿದ್ದೆಗೆಡಿಸಿದ್ದಾರೆ. 'ಅರೇಬಿಕ್ ಕುತ್ತು' ಸಾಂಗ್ ಬಿಡುಗಡೆಯಾದ ಕೇವಲ 24 ಗಂಟೆಗಳಲ್ಲಿ ಯೂಟ್ಯೂಬ್‌ನಲ್ಲಿ 17 ಮಿಲಿಯನ್ ಅಂದರೆ 1.7 ಕೋಟಿ ವೀಕ್ಷಣೆಗಳನ್ನು ಗಿಟ್ಟಿಸಿಕೊಂಡಿದೆ. ಜೆತೆಗೆ, 2 ಮಿಲಿಯನ್ ಲೈಕ್ಸ್ ಅನ್ನು 24 ಗಂಟೆ ಒಳೆಗೆ ಪಡೆದಿದ್ದು ದಾಖಲೆ ಬರೆದಿದೆ.
ಈ ಹಾಡಗೆ ಶಿವಕಾರ್ತಿಕೇಯನ್ ಸಾಹಿತ್ಯ ಬರೆದಿದ್ದು, ಸಂಗೀತ ಸಂಯೋಜಯನ್ನು ಅನಿರುದ್ಧ್ ರವಿಚಂದರ್ ಮಾಡಿದ್ದಾರೆ. ಹಾಡನ್ನು ಜೋನಿಟ ಗಾಂಧಿ ಮತ್ತು ಅನಿರುದ್ಧ್ ರವಿಚಂದರ್ ಹಾಡಿದ್ದಾರೆ. ಇನ್ನು, 1.70 ಲಕ್ಷ ಕಾಮೆಂಟ್​ಗಳು ಈ ಹಾಡುಗೆ ಲಭಿಸಿವೆ. ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ 'ಬೀಸ್ಟ್' ಚಿತ್ರದ 'ಅರೇಬಿಕ್ ಕುತ್ತು' ಸಾಂಗ್ ಬಿಡುಗಡೆಗೂ ಮುನ್ನವೇ ಸಖತ್ ಚರ್ಚೆಗೆ ಗ್ರಾಸವಾಗಿತ್ತು. ಹೌದು, ಇದೇ ಹಾಡಿನ ಪ್ರೋಮೋಗೆ ವಿಜಯ್ ಅಭಿಮಾನಿಗಳು ಫಿದಾ ಆಗಿದ್ದರು ಎನ್ನುವುದರಲ್ಲಿ ಎರಡನೇ ಮಾತಿಲ್ಲ.
ಈ ಹಾಡಿನಲ್ಲಿ ವಿಜಯ್ ಮತ್ತು ಪೂಜಾ ಅವರ ಲುಕ್, ಪೆಪ್ಪಿ ಟ್ಯೂನ್, ಡ್ಯಾನ್ಸ್ ಸ್ಟೆಪ್ಸ್ ತಕ್ಷಣವೇ ಅಭಿಮಾನಿಗಳಲ್ಲಿ ಫೇವರೇಟ್ ಆದವು. ನೆಟ್ಟಿಗರಂತೂ ತಮ್ಮ ಉತ್ಸಾಹವನ್ನು ಹಂಚಿಕೊಳ್ಳಲು ಟ್ವಿಟರ್​ನಲ್ಲಿ ಪೋಸ್ಟ್ ಮಾಡಲು ಆರಂಭಿಸಿದ್ದು, ವಿಜಯ್ ಮತ್ತು ಪೂಜಾರನ್ನು ಸೂಪರ್ ಹಾಟ್ ಎಂದು ಕರೆದಿದ್ದಾರೆ. ಈ ಸಾಂಗ್​ನ ಮತ್ತೊಂದು ವಿಶೇಷವೆಂದರೆ ಸಾಂಗ್​ನಲ್ಲಿ ಗಿಬ್ಬಿಶ್ ಸಾಹಿತ್ಯವೂ ಕೇಳಿಬರುತ್ತೆ. ನೆಲ್ಸನ್ ದಿಲೀಪ್‌ಕುಮಾರ್ ಅವರ ಈ 'ಬೀಸ್ಟ್' ಚಿತ್ರವನ್ನು ಸನ್ ಪಿಕ್ಚರ್ಸ್ ಅಡಿಯಲ್ಲಿ ನಿರ್ಮಿಸಿಲಾಗಿದೆ.
'ಅರೇಬಿಕ್ ಕುತ್ತು' ಈಗ ಯೂಟ್ಯೂಬ್​ನ 'ಟ್ರೆಂಡಿಂಗ್ ನೌ' ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಜಯ್ ಅವರ ಈ ಹಾಡು ಇನ್ನಷ್ಷು ದಾಖಲೆಗಳನ್ನು ಬರೆಯುವುದರಲ್ಲಿ ಡೌಟಿಲ್ಲಾ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಈ ಸಿನಿಮಾ ಏಪ್ರಿಲ್ 14 ರಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. 'ಬೀಸ್ಟ್'ನಲ್ಲಿ ಸೆಲ್ವರಾಘವನ್, ಯೋಗಿ ಬಾಬು, ಅಪರ್ಣಾ ದಾಸ್, ರೆಡಿನ್ ಕಿಂಗ್ಸ್ಲಿ ಮತ್ತು ಶೈನ್ ಟಾಮ್ ಚಾಕೊ ಹಾಗೂ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net