ಈ ಸಾಂಗ್ನಲ್ಲಿ ನಟ ಮಹೇಶ್ ಬಾಬು ಹಾಗೂ ನಟಿ ಕೀರ್ತಿ ಸುರೇಶ್ ಕಾಂಬಿನೇಷನ್, ಡ್ಯಾನ್ಸ್ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿದೆ. ಯೂಟ್ಯೂಬ್ನಲ್ಲಿ ಈ ಹಾಡು ಸದ್ಯ ದಾಖಲೆಗಳನ್ನು ಬರೆಯುತ್ತಿದೆ. ಬಿಡುಗಡೆಯಾಗಿದ್ದು ವಿಡಿಯೋ ಸಾಂಗ್ ಆಗಿರುವುದರಿಂದ, ಹಾಡು ಕಂಡು ಟಾಲಿವುಡ್ನ ಪ್ರಿನ್ಸ್ ಅಭಿಮಾನಿಗಳು ದಿಲ್ ಖುಷ್ ಆಗಿದ್ದಾರೆ. ಅಂದಹಾಗೆ, ಸಿನಿಮಾದ ‘ಕಲಾವತಿ..’ ಹಾಡು ಯೂಟ್ಯೂಬ್ನಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಹೌದು, ಯೂಟ್ಯೂಬ್ನ ಮ್ಯೂಸಿಕ್ ವಿಭಾಗದ ಟ್ರೆಂಡಿಂಗ್ ಪಟ್ಟಿಯಲ್ಲಿ ಈ ಹಾಡು ನಂಬರ್ ಒನ್ ಸ್ಥಾನದಲ್ಲಿದೆ. ನಿರ್ದೇಶಕ ಥಮನ್.ಎಸ್, ‘ಸರ್ಕಾರು ವಾರಿ ಪಾಟ’ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು, ‘ಕಲಾವತಿ..’ ಹಾಡನ್ನು ಸಿದ್.ಶ್ರೀರಾಮ್ ಹಾಡಿದ್ದಾರೆ.